ಸಾರಾಂಶ
ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಥಸಪ್ತಮಿ ಪ್ರಯುಕ್ತ ಕ್ರೀಡಾ ಭಾರತಿ ಉಡುಪಿಯ ವಿಭಾಗೀಯ ಸಂಯೋಜಕ ಪ್ರಸನ್ನ ಶಣೈ ವಿದ್ಯಾರ್ಥಿನಿಯರಿಗೆ ಯೋಗ ತರಬೇತಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮನಸ್ಸು ಹತೋಟಿಯಲ್ಲಿರಲು, ಏಕಾಗ್ರತೆ ಸಾಧಿಸಲು ನಿತ್ಯ ಯೋಗ, ಪ್ರಾಣಾಯಾಮಗಳು ಸಹಕಾರಿ. ದೈಹಿಕ ಆರೋಗ್ಯದ ಉದ್ದೇಶದಿಂದ ಮಾತ್ರ ಯೋಗಭ್ಯಾಸವನ್ನು ಮಾಡಬಾರದು. ಯೋಗಭ್ಯಾಸದಿಂದ ಆಗುವ ಸರ್ವ ಪ್ರಯೋಜನವನ್ನು ಪಡೆಯಲು ಬಾಲ್ಯದಿಂದಲೇ ಯೋಗ ಅಭ್ಯಾಸವನ್ನು ದೈನಂದಿನ ಜೀವನ ಕ್ರಮವೆಂಬಂತೆ ರೂಢಿಸಿಕೊಳ್ಳಬೇಕು ಎಂದು ಕ್ರೀಡಾ ಭಾರತಿ ಉಡುಪಿಯ ವಿಭಾಗೀಯ ಸಂಯೋಜಕ ಪ್ರಸನ್ನ ಶಣೈ ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಥಸಪ್ತಮಿ ಪ್ರಯುಕ್ತ ಯೋಗ ತರಬೇತಿ ನೀಡಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್ ಯೋಗಾಭ್ಯಾಸದೊಂದಿಗೆ ಸೂಕ್ತ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು ಕೂಡ ಮುಖ್ಯ ಎಂದು ಹೇಳಿದರು.ಕ್ರೀಡಾ ಭಾರತಿಯ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಬೈಲೂರು, ಮಹಿಳಾ ಪ್ರಮುಖ್ ವಿದ್ಯಾ ಸನಿಲ್, ಉಡುಪಿ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ರವೀಂದ್ರ, ಯೋಗ ಶಿಕ್ಷಕರಾದ ಅಮಿತ್ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಉ್ತುವಾರಿ ಸಮಿತಿ ಗೌರವಾಧ್ಯಕ್ಷೆ ತಾರಾದೇವಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಇಂದಿರಾ ಬಿ. ಸ್ವಾಗತಿಸಿದರು. ಶಿಕ್ಷಕ ವಸಂತ ಜೋಗಿ ನಿರೂಪಿಸಿದರು. ರಾಮಚಂದ್ರ ಭಟ್ ವಂದಿಸಿದರು.