ಉಡುಪಿ: ನೈಸರ್ಗಿಕವಾಗಿ ಮಾಗಿದ ಮಾವುಗಳ ಮಾರಾಟ ಮೇಳ ಆರಂಭ

| Published : May 17 2024, 12:37 AM IST

ಉಡುಪಿ: ನೈಸರ್ಗಿಕವಾಗಿ ಮಾಗಿದ ಮಾವುಗಳ ಮಾರಾಟ ಮೇಳ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್‌ ಸಹಿತ ವಿವಿಧ ತಳಿಯ ಒಟ್ಟು 45 ಟನ್‌ಗೂ ಹೆಚ್ಚು ಮಾವು ಮೇಳದಲ್ಲಿ ಲಭ್ಯವಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಬಾಯಲ್ಲಿ ನಿರೂರಿಸುವ, ದೇಹಕ್ಕೆ ಪೌಷ್ಠಿಕತೆ ಒದಗಿಸುವ ಹಣ್ಣುಗಳ ರಾಜನೆಂದು ಪ್ರಸಿದ್ಧಿ ಪಡೆದಿರುವ ವಿವಿಧ ಬಗೆಯ ಮಾವಿನ ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉಡುಪಿ ನಗರದ ದೊಡ್ಡಣ್ಣಗುಡ್ಡೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾಡಳಿತ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ ಜಿಲ್ಲೆ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ 20ಕ್ಕೂ ಹೆಚ್ಚು ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮೇ 16ರಂದು ಚಾಲನೆದೊರಕಿದ್ದು, 19ರ ವರೆಗೆ ನಡೆಯಲಿದೆ.

ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಯನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್‌ ಸಹಿತ ವಿವಿಧ ತಳಿಯ ಒಟ್ಟು 45 ಟನ್‌ಗೂ ಹೆಚ್ಚು ಮಾವು ಮೇಳದಲ್ಲಿ ಲಭ್ಯವಿದೆ.

ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ವಿಶೇಷ ಆಕರ್ಷಣೆಯಾಗಿದ್ದು, ಕೆಜಿಗೆ 300 ದರವಿದೆ. ತೋತಾಪುರಿ ಕೆ.ಜಿಗೆ 50 ರು. ಕನಿಷ್ಠ ದರದಾದ್ದರೆ, ಹಿಮಾಮ್ ಪಸಂದ್ ತಳಿಯು ಕೆಜಿಯೊಂದಕ್ಕೆ 400 ರು. ಇದ್ದು ಗರಿಷ್ಠ ತಳಿಯದ್ದಾಗಿದೆ.

ಈ ಮಾವು ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಮಾವು ಮೇಳದಲ್ಲಿ ರೈತರು ನೇರವಾಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸಲಾಗಿದೆ. ಇಲ್ಲಿ ಮಾರಾಟವಾಗುತ್ತಿರುವ ಮಾವು ಸಾವಾಯವ ಪದ್ದತಿಯಲ್ಲಿ ಬೆಳೆದಾಗಿದ್ದು, ರಾಸಾಯನಿಕಗಳನ್ನು ಬಳಕೆ ಮಾಡದೆ ಮಾಗಿಸಿ ಮಾವನ್ನು ಹಣ್ಣು ಮಾಡಲಾಗಿರುವ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದರು.

ರೈತರು ತಾವು ಬೆಳೆದ ಮಾವನ್ನು ನೇರವಾಗಿ ಮಾರಾಟ ಮಾಡಲು ಮಾವು ಮೇಳವು ಒಂದು ಉತ್ತಮ ವೇದಿಕೆಯಾಗಿದೆ ಎಂದ ಅವರು, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಫಾರ್ಮರ್ ಫ್ರೋಡ್ಯೂಸರ್ ಆರ್ಗನೈಸೆಷನ್ ಮೂಲಕ, ರೈತರಿಗೆ ಆಗುವಂತಹ ನಷ್ಟವನ್ನು ತಪ್ಪಿಸಿ ಸ್ವತಃ ಅವರೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವ ಉದ್ದೇಶ ಇದೆ ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.