ಸಾರಾಂಶ
ಉಡುಪಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ಅಂಗವಾಗಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ದೀಪ ನಮನ ಕಾರ್ಯಕ್ರಮ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲಾ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನದ ಅಂಗವಾಗಿ ರಾಯಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ದೀಪ ನಮನ ಕಾರ್ಯಕ್ರಮ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಯೋಧ ಗಣೇಶ್ ರಾವ್, ಸೇನೆಯಲ್ಲಿ ಕೆಲಸ ಮಾಡುವುದು ನಮ್ಮ ಜೀವನದ ಶ್ರೇಷ್ಠ ಸಮಯ. ನಾವು ಇವತ್ತು ಈ ದೇಶದಲ್ಲಿ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿದ್ದೇವೆ ಎಂಬುವುದಕ್ಕೆ ಕಾರಣ ನಮ್ಮ ಗಡಿಯಲ್ಲಿ ಕೆಲಸ ಮಾಡುವ ವೀರ ಸೈನಿಕರು. ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಂಥವರಲ್ಲಿ ಸಂಗೊಳ್ಳಿ ರಾಯಣ್ಣ ಅವರ ತ್ಯಾಗ ಮರೆಯಲು ಅಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಯಣ್ಣನವರ ಬಲಿದಾನ ದಿನದಂದು ಈ ಕಾರ್ಯಕ್ರಮ ನಡೆಸಿರುವುದು ಸ್ತುತ್ಯಾರ್ಹ ಎಂದರು.ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ದ.ಕ - ಉಡುಪಿ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಪ್ರಸ್ತಾವನೆಗೈದರು. ನಿವೃತ್ತ ಯೋಧ ದೇವೇಂದ್ರ ಪ್ರಭು, ಸತೀಶ್ ಕೊಡವೂರು, ಸಂಘದ ಕಾರ್ಯಾಧ್ಯಕ್ಷ ಕುಮಾರ್ ಪ್ರಸಾದ್, ಪ್ರ. ಕಾರ್ಯದರ್ಶಿ ಮಹೇಶ್ ಗುಂಡಿಬೈಲು, ಕ.ಪ್ರ. ಕುರುಬರ ಸಂಘ ನಿರ್ದೇಶಕ ಬಸವರಾಜ ಕುರುಬರ, ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಡೊಳ್ಳಿನ, ಕನ್ನಡಪರ ಹೋರಾಟಗಾರ ಪ್ರಭಾಕರ್ ಪೂಜಾರಿ, ಗೋಪಾಲ ದೊರೆ, ಸಿದ್ದಣ್ಣ ಪೂಜಾರಿ, ಪಂಪೇಶ್, ಶರಣಪ್ಪ ಬಾರ್ಕೆರ್, ಗೋಪಾಲ ದೇವದುರ್ಗ, ನೀಲಕಂಠಯ್ಯ ಉಪಸ್ಥಿತರಿದ್ದರು.
ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗೌರವ ಸಲಹೆಗಾರರಾದ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಉಪಾಧ್ಯಕ್ಷ ಲಕ್ಷ್ಮಣ್ ಕೊಲ್ಕಾರ್ ವಂದಿಸಿದರು.