ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಶ್ರಮಿಕ ತರುಣರ ತಂಡದ ಸಂಸ್ಥಾಪಕ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ ನೇತೃತ್ವದಲ್ಲಿ ಶಿರೂರು ಗ್ರಾಮದ ನ್ಯೂಕಲ್ಲಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ಇತ್ತೀಚೆಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಸದಾಶಿವ ಶೆಟ್ಟಿ, ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷೆ ಮಂಜುಳಾ, ತಂಡದ ಗೌರವಾಧ್ಯಕ್ಷ ರಘುನಾಥ ಪೂಜಾರಿ, ಉಪಾದ್ಯಕ್ಷ ಸಂದೀಪ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಸಂಪ ಪೂಜಾರಿ, ಉಪಾಧ್ಯಕ್ಷೆ ಶಶಿಕಲಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕವಿತಾ ಉದಯ್, ಸದಸ್ಯರಾದ ಸುಗಂಧಿ ಪೂಜಾರಿ, ವಿಜಯ್ ಕುಮಾರ್, ಪ್ರವೀಣ್ ಕುಮಾರ್, ಶಾಲಾ ಶಿಕ್ಷಕ ವೃಂದ ಮತ್ತು ಅನೇಕ ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.ಈ ತಂಡವು ಹಲವಾರು ವರ್ಷಗಳಿಂದ ಉಡುಪಿ ಜಿಲ್ಲಾ ಮಟ್ಟದಲ್ಲಿ ದುರ್ಬಲ ವರ್ಗದ ಜನರಿಗೆ ಸಹಾಯ ಹಸ್ತದೊಂದಿಗೆ ವಿವಿಧ ರೀತಿಯಲ್ಲಿ ನೆರವನ್ನು ನೀಡುತ್ತಿದೆ. ತಂಡದಲ್ಲಿ ವಿವಿಧ ಕ್ಷೇತ್ರದ ಯುವಕ ಯುವತಿಯರು ಸೇರಿಕೊಂಡು ಸಮಾಜದ ಬಡ ವರ್ಗದ ಜನರಿಗೆ ಡಾ.ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ಸೂರು ನಿರ್ಮಾಣ ಕಾರ್ಯದಿಂದ ಪ್ರಾರಂಭಗೊಂಡು, ಈಗ ಜನ ಮಾನಸದಲ್ಲಿ ನೂರಾರು ಸೇವಾಕಾರ್ಯದಿಂದ ಶ್ರಮಿಕರು ಪ್ರೀತಿಯ ವಿಶ್ವಾಸದ ಛಾಪನ್ನು ಮೂಡಿಸಿದ್ದಾರೆ.