ಉಡುಪಿ ಶ್ರೀ ಕೃಷ್ಣ ಮಠ: ತುಳಸಿ ಸಂಕೀರ್ತನಾ ಸ್ಪರ್ಧೆ

| Published : Nov 11 2024, 12:47 AM IST

ಉಡುಪಿ ಶ್ರೀ ಕೃಷ್ಣ ಮಠ: ತುಳಸಿ ಸಂಕೀರ್ತನಾ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠಗಳ ಜಂಟಿ ಆಶ್ರಯದಲ್ಲಿ ಭಾನುವಾರ ತುಳಸಿ ಸಂಕಿರ್ತನಾ ಸ್ಪರ್ಧೆಯು ಬಹಳ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಮತ್ತು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠಗಳ ಜಂಟಿ ಆಶ್ರಯದಲ್ಲಿ ಭಾನುವಾರ ತುಳಸಿ ಸಂಕಿರ್ತನಾ ಸ್ಪರ್ಧೆಯು ಬಹಳ ವಿಜೃಂಭಣೆಯಿಂದ ನಡೆಯಿತು.ಸಂಜೆ ಮಧ್ವ ಮಂಟಪದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸನಾತನ ಧರ್ಮದ ಉಳಿಯುವಿಕೆಯ ನೆಲೆಯಲ್ಲಿ ತುಳಸಿ ಸಂಕೀರ್ತನೆಯು ಅತ್ಯಂತ ಮಹತ್ವಪೂರ್ಣವಾದದ್ದು. ಅದನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಜನಾಂಗದ ಮಕ್ಕಳು ಇದರ ಉಪಯೋಗವನ್ನು ಪಡೆದುಕೊಂಡು ತುಳಸಿ ಸಂಕೀರ್ತನೆಯನ್ನು ಮನೆ ಮನೆಯಲ್ಲಿ ನಡೆಸಬೇಕೆಂದು ಕರೆ ನೀಡಿದರು.ಇದೇ ಸಂದರ್ಭ ಪಾಜಕ ಮಠದ ಹಿರಿಯ ವಿದ್ವಾಂಸ ಮಾಧವ ಉಪಾಧ್ಯಾಯ ಅವರನ್ನು ಈ ಬಾರಿ ಮಧ್ವಾನುಗ್ರಹ ಪ್ರಶಸ್ತಿ ನೀಡಿ ಸ್ವಾಮೀಜಿ ಗೌರವಿಸಿದರು.ಸಾನ್ನಿಧ್ಯವಿದ್ದ ಪರ್ಯಾಯ ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತುಳಸಿ ಸಂಕೀರ್ತನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಿ ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮಲ್ಲಿ ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಗೌರವಾಧ್ಯಕ್ಷ ಅರವಿಂದ ಆಚಾರ್ಯ, ನಿಕಟಪೂರ್ವ ಅಧ್ಯಕ್ಷ ರವಿಪ್ರಕಾಶ್ ಭಟ್, ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ, ದಾನಿಗಳಾದ ಸುಬ್ರಮಣ್ಯ ತಂತ್ರಿ ಅವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಜಯರಾಮ ಆಚಾರ್ಯರು ಸ್ವಾಗತಿಸಿ ಪ್ರಸ್ತಾವನೆಗೈದರು. ಕೊನೆಯಲ್ಲಿ ಕಾರ್ಯದರ್ಶಿ ರವೀಂದ್ರ ಆಚಾರ್ಯರು ವಂದಿಸಿದರು.