ಸಾರಾಂಶ
ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಸಾಲಿಗ್ರಾಮ ಫ್ರೆಂಡ್ಸ್ ತನ್ನದಾಗಿಸಿಕೊಂಡಿತು. ಅಡಿಗ ಪ್ರೆಂಡ್ಸ್ ಉಪ್ಪೂರು ದ್ವಿತೀಯ ಸ್ಥಾನಿಯಾಯಿತು. ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ 16 ವಿಪ್ರ ಬಾಂಧವರ ತಂಡವು ಭಾಗವಹಿಸಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ರಥಬೀದಿಯ ಶ್ರೀ ರಾಮ ಸೇವಾ ಬಳಗ ಆಶ್ರಯದಲ್ಲಿ 10ನೇ ವರ್ಷದ ವಿಪ್ರ ಸಮಾಜ ಬಾಂಧವರ ಕ್ರಿಕೆಟ್ ಕ್ರೀಡಾಕೂಟವು ಶನಿವಾರ ಮತ್ತು ಭಾನುವಾರ ಬೀಡಿನ ಗುಡ್ಡೆಯ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಸಾಲಿಗ್ರಾಮ ಫ್ರೆಂಡ್ಸ್ ತನ್ನದಾಗಿಸಿಕೊಂಡಿತು. ಅಡಿಗ ಪ್ರೆಂಡ್ಸ್ ಉಪ್ಪೂರು ದ್ವಿತೀಯ ಸ್ಥಾನಿಯಾಯಿತು. ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ 16 ವಿಪ್ರ ಬಾಂಧವರ ತಂಡವು ಭಾಗವಹಿಸಿತು.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ವಿಧಾನಸಭೆಯ ಮಾಜಿ ಶಾಸಕ ರಘುಪತಿ ಭಟ್ ಭಾಗವಹಿಸಿದ್ದರು. ಕಡೆಕಾರು ಶ್ರೀಶ ಭಟ್ ಅವರಿಗೆ ಶ್ರೀರಾಮ ಸೇವಾ ಬಳಗದ ವತಿಯಿಂದ ವಿಪ್ರ ಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.ಉಡುಪಿ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ ಭಟ್ ಹಾಗೂ ಪದಾಧಿಕಾರಿ ವಿಷ್ಣು ಪಾಡಿಗಾರ್, ರಾಘವೇಂದ್ರ ಕೊಂಡಂಚ, ಶ್ರೀರಾಮ ಸೇವಾ ಬಳಗದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಉಪಾಧ್ಯಾಯ, ಜೊತೆ ಕಾರ್ಯದರ್ಶಿ ರಾಮಚಂದ್ರ ಕೊಡಂಚ, ಕೋಶಾಧಿಕಾರಿ ಅಶೋಕ್ ಹೆಗಡೆ ಉಪಸ್ಥಿತರಿದ್ದರು.
ಪ್ರಸಿದ್ಧ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ ಕಾರ್ಯಕ್ರಮ ನಿರೂಪಿಸಿದರು.