ಉಡುಪಿ: ಇಲ್ಲಿನ ನಿಟ್ಟೂರು ಪ್ರೌಢಶಾಲೆಯ 10 ನೇ ತರಗತಿಯ 54 ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ್ ನಾಯ್ಕ್ ಅವರ 2 ಗದ್ದೆಗಳಲ್ಲಿ ಭತ್ತದ ನೇಜಿ ನೆಟ್ಟು ಸಂಭ್ರಮಿಸಿದರು.
ಉಡುಪಿ: ಇಲ್ಲಿನ ನಿಟ್ಟೂರು ಪ್ರೌಢಶಾಲೆಯ 10 ನೇ ತರಗತಿಯ 54 ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ್ ನಾಯ್ಕ್ ಅವರ 2 ಗದ್ದೆಗಳಲ್ಲಿ ಭತ್ತದ ನೇಜಿ ನೆಟ್ಟು ಸಂಭ್ರಮಿಸಿದರು.
ಕಳೆದ 11 ವರ್ಷಗಳಿಂದ, ಶಾಲೆಯ ಮುಖ್ಯಶಿಕ್ಷಕರಾಗಿದ್ದ ಮುರಲಿ ಕಡೆಕಾರ್ ಅವರ ವಿಶೇಷ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಪ್ರತ್ಯಕ್ಷ ಅನುಭವ ದೊರೆಯುತ್ತಿದ್ದು, ಈ ಬಾರಿಯು ಕೂಡ ವಿದ್ಯಾರ್ಥಿಗಳು ಸುರಿಯುವ ಮಳೆಯೊಂದಿಗೆ ಕೆಸರು ತುಂಬಿದ ಗದ್ದೆಗೆ ಇಳಿದು ನೇಜಿ ನೆಟ್ಟು ಸಂಭ್ರಮಿಸಿದರು. ಈ ಶಾಲೆಯಲ್ಲಿ ಹೊರ ಜಿಲ್ಲೆಯ ವಿದ್ಯಾರ್ಥಿಗಳೇ ಅಧಿಕವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಕೃಷಿ ಜೀವನ ಶೈಲಿಯನ್ನು ಪರಿಚಯಿಸಿಕೊಂಡರು.ವಿದ್ಯಾರ್ಥಿಗಳೊಂದಿಗೆ ಮುಖ್ಯಶಿಕ್ಷಕರಾದ ರಾಮದಾಸ್ ಹಾಗೂ ಶಿಕ್ಷಕರಾದ ದೇವದಾಸ್ ಶೆಟ್ಟಿ, ನಮಿತಾಶ್ರೀ, ಸೀಮಾ, ಚಿನ್ನಮ್ಮ, ಕವಿತಾ, ಲಕ್ಷ್ಮೀಸರಸ್ವತಿ ಪಾಲ್ಗೊಂಡರು.