ಉಡುಪಿ: ಪಿಪಿಸಿಯಲ್ಲಿ ಪಠ್ಯಸಂಬಂಧಿ ತಾಳಮದ್ದಳೆ ಕಾರ್‍ಯಾಗಾರ

| Published : Mar 14 2025, 12:30 AM IST

ಸಾರಾಂಶ

ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘಗಳ ಸಂಯೋಜನೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಸಿಎ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ರಾಧಾಕೃಷ್ಣ ಕಲ್ಚಾರ್ ಅವರ ‘ಸಾಂಸ್ಕೃತಿಕ ಪಲ್ಲಟಗಳು ಮತ್ತು ತಾಳಮದ್ದಳೆ’ ಲೇಖನ ಹಾಗೂ ಪಾರ್ತಿಸುಬ್ಬ ಕವಿಯ ಪಂಚವಟಿ ಪ್ರಸಂಗದ ಪಠ್ಯವನ್ನು ಆಧರಿಸಿ ತಾಳಮದ್ದಳೆ ಕಾರ್‍ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ತಾಳಮದ್ದಳೆಯು ಮಾತಿನ ಕಲೆಯಾಗಿದೆ. ಇದರಲ್ಲಿ ಭಾಗವಹಿಸುವ ಅರ್ಥಧಾರಿಗಳಿಗೆ ಆಳವಾದ ಪುರಾಣಜ್ಞಾನ, ಪ್ರತ್ಯುತ್ಪನ್ನಮತಿತ್ವ ಅವಶ್ಯವಾಗಿ ಇರಬೇಕಾಗುತ್ತದೆ ಎಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಹಿರಿಯ ತಾಳಮದ್ದಳೆ ಅರ್ಥಧಾರಿ ಶ್ರೀಧರ ಡಿ.ಎಸ್. ಹೇಳಿದರು.ಅವರು ಬುಧವಾರ ನಗರದ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘಗಳ ಸಂಯೋಜನೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಸಿಎ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿರುವ ರಾಧಾಕೃಷ್ಣ ಕಲ್ಚಾರ್ ಅವರ ‘ಸಾಂಸ್ಕೃತಿಕ ಪಲ್ಲಟಗಳು ಮತ್ತು ತಾಳಮದ್ದಳೆ’ ಲೇಖನ ಹಾಗೂ ಪಾರ್ತಿಸುಬ್ಬ ಕವಿಯ ಪಂಚವಟಿ ಪ್ರಸಂಗದ ಪಠ್ಯವನ್ನು ಆಧರಿಸಿ ಆಯೋಜಿಸಲಾದ ತಾಳಮದ್ದಳೆ ಕಾರ್‍ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್‍ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ವಿಶೇಷ ಅಧಿಕಾರಿಯಾಗಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಾಗೂ ಕಾರ್‍ಯಾಗಾರದ ಸಂಯೋಜಕರಾಗಿರುವ ಕನ್ನಡ ಉಪನ್ಯಾಸಕ ಡಾ. ಶಿವಕುಮಾರ ಅಳಗೋಡು ಸ್ವಾಗತಿಸಿದರು. ವಿದ್ಯಾರ್ಥಿನಿ ಸಹನಾ ನಿರೂಪಿಸಿದರು.ಬಳಿಕ ಅಧ್ಯಾಪಕರಿಂದಲೇ ಪಂಚವಟಿ ಪ್ರಸಂಗದ ತಾಳಮದ್ದಳೆ ಪ್ರದರ್ಶನ ನೆರವೇರಿತು. ಭಾಗವತಿಕೆಯಲ್ಲಿ ಅಂತಿಮ ಬಿಎ ವಿದ್ಯಾರ್ಥಿನಿ ಶ್ರೀರಕ್ಷಾ ಹೆಗಡೆ, ಮದ್ದಳೆಯಲ್ಲಿ ಎನ್.ಜಿ. ಹೆಗಡೆ, ರಾಮನಾಗಿ ಶ್ರೀಧರ ಡಿ.ಎಸ್., ಸೀತೆಯಾಗಿ ಡಾ. ಶಿವಕುಮಾರ ಅಳಗೋಡು, ಲಕ್ಷ್ಮಣನಾಗಿ ಡಾ. ಮಂಜುನಾಥ ಕರಬ, ಸನ್ಯಾಸಿ ರಾವಣನಾಗಿ ಧೀರಜ್ ಮಲ್ಪೆ ಭಾಗವಹಿಸಿದರು.