ಉಡುಪಿ: ನಾಳೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಕಾರ್ಯಾರಂಭ

| Published : Oct 08 2024, 01:06 AM IST

ಸಾರಾಂಶ

ಉತ್ತರ ಹಾಗೂ ದಕ್ಷಿಣ ಭಾರತಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ನ ಉಡುಪಿಯ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉಡುಪಿ - ಮಣಿಪಾಲ ರಸ್ತೆಯಲ್ಲಿರುವ ಕಲ್ಸಂಕದ ಟೈಮ್ಸ್ ಸ್ಟೈರ್ ಮಾಲ್‌ನಲ್ಲಿ ಅ.9ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉತ್ತರ ಹಾಗೂ ದಕ್ಷಿಣ ಭಾರತಾದ್ಯಂತ ಹೆಸರು ಮಾಡಿರುವ ಓಷಿಯನ್ ಪರ್ಲ್ ಹೋಟೆಲ್ ಪ್ರೈವೇಟ್ ಲಿಮಿಟೆಡ್‌ನ ಉಡುಪಿಯ ಎರಡನೇ ಶಾಖೆ ‘ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಉಡುಪಿ - ಮಣಿಪಾಲ ರಸ್ತೆಯಲ್ಲಿರುವ ಕಲ್ಸಂಕದ ಟೈಮ್ಸ್ ಸ್ಟೈರ್ ಮಾಲ್‌ನಲ್ಲಿ ಅ.9ರಂದು ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ.ಈ ಬಗ್ಗೆ ಸೋಮವಾರ ಓಷಿಯನ್ ಪರ್ಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ರೋಷನ್ ಜಯರಾಮ್ ಬನಾನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಹೋಟೆಲ್‌ನಲ್ಲಿ ‘ಗ್ರ್ಯಾಂಡ್ ದಿ ಪೆಸಿಫಿಕ್ 1 ಹಾಲ್’ ಸುಮಾರು 2000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದರಲ್ಲಿ ಮದುವೆಗಳು, ಸಮ್ಮೇಳನಗಳು ಮತ್ತು ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲಕರವಾಗಿದೆ. ‘ಪೆಸಿಫಿಕ್ 2’ ಹಾಲ್ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ.ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೋಟೆಲ್‌ನಲ್ಲಿ ಪ್ರೆಸಿಡೆಂಟಲ್ ಸೂಟ್, ಕ್ಲಬ್ ಸೂಟ್ಸ್, ಫ್ಯಾಮಿಲಿ ಸೂಟ್ ಮತ್ತು ಡಿಲಕ್ಸ್ ರೂಮ್‌ಗಳು ಸೇರಿ ಒಟ್ಟು 67 ಐಷಾರಾಮಿ ಕೊಠಡಿಗಳು ಲಭ್ಯವಿದೆ. ಈಜು ಪ್ರಿಯರಿಗೆ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜು ಕೊಳವನ್ನು ಸಹ ನಿರ್ಮಾಣ ಮಾಡಲಾಗಿದೆ.ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಈ ನೂತನ ಹೋಟೆಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನೀಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ, ‘ಕೋರಲ್’ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಓಷಿಯನ್ ಪರ್ಲ್ ಸಂಸ್ಥೆಯ ಸಂಸ್ಥಾಪಕ ಜಯರಾಮ್ ಬನಾನ್, ಉಪಾಧ್ಯಕ್ಷ ಶಿವಕುಮಾರ್ ಮತ್ತು ಗಿರೀಶ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಮಾಲ್ ಮಾಲೀಕ ಡಾ.ಜೆರ್ರಿ ವಿನ್ಸಂಟ್ ಡಯಾಸ್, ಮಾಂಡೋವಿ ಬಿಲ್ಡರ್ಸ್‌ನ ಗ್ಲೆನ್ ಡಯಾಸ್, ಜೇಸನ್ ಡಯಾಸ್ ಉಪಸ್ಥಿತರಿದ್ದರು.--------

182ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು

ಉದ್ಯಮಿ ಜಯರಾಮ್ ಬನಾನ್ ಅವರು ಜಮ್ಮುಕಾಶ್ಮೀರ, ದೆಹಲಿ ಸೇರಿ ಭಾರತಾದ್ಯಂತ 182ಕ್ಕೂ ಹೆಚ್ಚು ‘ಸಾಗರ ರತ್ನ’ ಹೆಸರಿನ ವೆಜ್, ‘ಶ್ರೀರತ್ನ’ ಮತ್ತು ‘ಸ್ವಾಗತ್’ ಹೆಸರಿ ನಾನ್ ವೆಜ್ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಅಲ್ಲದೇ ಅನೇಕ ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳನ್ನೂ ನಡೆಸುತ್ತಿದ್ದಾರೆ. ಸಂಸ್ಥೆಯ ಸಾಗರ್ ಹಾಗೂ ಸ್ವಾಗತ ರೆಸ್ಟೋರೆಂಟ್‌ಗಳು ದೆಹಲಿ ಸಹಿತ ಉತ್ತರ ಭಾರತಾದ್ಯಂತ ಜನಪ್ರಿಯಗೊಂಡಿದ್ದರೇ, ಓಶಿಯನ್ ಪರ್ಲ್ ಹೋಟೆಲ್ ಮಂಗಳೂರು, ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲಿ ಈಗಾಗಲೇ ಗ್ರಾಹಕರ ಮೆಚ್ಚುಗೆ ಗಳಿಸಿದೆ.