ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ಸಂದರ್ಭದಲ್ಲಿ ಆ.27ರಂದು ಸಂಜೆ 4ರಿಂದ ರಥಬೀದಿಯ ತೊಟ್ಟಿಲು ಸುಬ್ರಾಯ ವೇದಿಕೆಯಲ್ಲಿ ಹುಲಿವೇಷ ನರ್ತನ ಪ್ರದರ್ಶನ ಆಯೋಜಿಸಲಾಗಿದೆ.ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿದ ಕಲ್ಕೂರ ರೆಫ್ರಿಜರೇಶನ್ ಆಡಳಿತ ನಿರ್ದೇಶಕ ರಂಜನ್ ಕಲ್ಕೂರ ಮಾಹಿತಿ ನೀಡಿ, ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲ ಹುಲಿವೇಷ ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ತಂಡದ ಗುಣಮಟ್ಟ ಗಮನಿಸಿ ಸೂಕ್ತ ಸಂಭಾವನೆ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ 3 ದಶಕಗಳ ಕಾಲ ಹುಲಿವೇಷ ತಂಡ ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದ ಅಶೋಕ್‍ರಾಜ್ ಕಾಡಬೆಟ್ಟು ಅವರಿಗೆ ‘ತುಳುನಾಡ್ದ ಪೆರ್ಮೆದ ಪಿಲಿ’ ಮರಣೋತ್ತರ ಪ್ರಶಸ್ತಿಯೊಂದಿಗೆ ಅವರ ಕುಟುಂಬ ವರ್ಗದವರನ್ನು ಗೌರವಿಸಲಾಗುವುದು. ಎಲ್ಲ ಜಾನಪದ ಕಲಾವಿದರಿಗೆ ಗೌರವ ಸಂಭಾವನೆ ನೀಡಲಾಗುವುದು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಹುಲ್ ಕಲ್ಕೂರ, ರಾಮಚಂದ್ರ ಉಪಾಧ್ಯಾಯ, ಕೆ.ಎನ್. ಚಂದ್ರಕಾಂತ ಮತ್ತು ರಾಜೇಶ ಭಟ್ ಪಣಿಯಾಡಿ ಉಪಸ್ಥಿತರಿದ್ದರು.