ಉಡುಪಿ: 20ರಂದು ಭಾರತೀಯ ಸೈನಿಕರಿಗೆ ಬೆಂಬಲವಾಗಿ ತಿರಂಗ ಯಾತ್ರೆ

| Published : May 18 2025, 01:11 AM IST

ಉಡುಪಿ: 20ರಂದು ಭಾರತೀಯ ಸೈನಿಕರಿಗೆ ಬೆಂಬಲವಾಗಿ ತಿರಂಗ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಉಗ್ರ ಚಟುವಟಿಕೆಯ ವಿರುದ್ಧ ಹೋರಾಡಲು ಭಾರತೀಯರು ಒಗ್ಗಟ್ಟಾಗಬೇಕೆಂಬ ಸಂದೇಶವನ್ನು ಸಾರುವ ಮತ್ತು ಆಪರೇಶನ್ ಸಿಂದೂರ್ ವಿಜಯೋತ್ಸವದ ಅಂಗವಾಗಿ ಈ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ. ಪಕ್ಷ, ಜಾತಿ, ಧರ್ಮ ರಹಿತವಾಗಿ ನಡೆಯುವ ಈ ತಿರಂಗ ಯಾತ್ರೆಯಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಷ್ಟ್ರ ರಕ್ಷಣಾ ಸಮಿತಿ ವತಿಯಿಂದ ಮೇ 20ರಂದು ಉಡುಪಿ ನಗರದಲ್ಲಿ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಸೈನ್ಯಾಧಿಕಾರಿ ಕರ್ನಲ್ ಡಾ. ಎಫ್‌.ಎ. ರಾಡ್ರಿಗ್ಸ್ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಸಂಜೆ 4 ಗಂಟೆಗೆ ನಗರದ ಜೋಡುಕಟ್ಟೆಯಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಅಲ್ಲಿಂದ ಆರಂಭಗೊಂಡ ಯಾತ್ರೆ ಕೋರ್ಟ್ ರಸ್ತೆ, ಡಯಾನ ಸರ್ಕಲ್, ಅಲಂಕಾರ್ ಮಾರ್ಗವಾಗಿ ಸಾಗಿಬಂದು ಕ್ಲಾಕ್ ಟವರ್ ನಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.ಕಾರ್ಯಕ್ರಮ ಸಂಘಟಕರಲ್ಲೊಬ್ಬರಾದ ನಿವೃತ್ತ ಯೋಧ, ಉಡುಪಿ ಜಿಲ್ಲಾ ನಿವೃತ್ತ ಯೋಧರ ಸಂಘದ ಅಧ್ಯಕ್ಷ ಕೇಶವ ಮಲ್ಪೆ ಮಾತನಾಡಿ, ಪಹಲ್ಗಾಮ್ ದಾಳಿಯನ್ನು ಖಂಡಿಸಿ, ಉಗ್ರ ಚಟುವಟಿಕೆಯ ವಿರುದ್ಧ ಹೋರಾಡಲು ಭಾರತೀಯರು ಒಗ್ಗಟ್ಟಾಗಬೇಕೆಂಬ ಸಂದೇಶವನ್ನು ಸಾರುವ ಮತ್ತು ಆಪರೇಶನ್ ಸಿಂದೂರ್ ವಿಜಯೋತ್ಸವದ ಅಂಗವಾಗಿ ಈ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ. ಪಕ್ಷ, ಜಾತಿ, ಧರ್ಮ ರಹಿತವಾಗಿ ನಡೆಯುವ ಈ ತಿರಂಗ ಯಾತ್ರೆಯಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಡಾ. ಸುಕನ್ಯಾ ಮಾರ್ಟಿಸ್, ಮೂಲತಃ ಕಾಶ್ಮೀರದವರಾದ ಕೆಎಂಸಿಯ ವೈದ್ಯ ಡಾ. ರಾಹುಲ್ ಮೆಗಝೀನ್, ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ ಚಂದ್ರ ಅಮೀನ್ ಬಾರ್ಕೂರು ಉಪಸ್ಥಿತರಿದ್ದರು.