ಸಾರಾಂಶ
ಒಳಕಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಜರುಗಿತು. ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ ಪ್ರಧಾನ ಮಂತ್ರಿ ಪೋಷಣ್ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು ಉಂಟು ಮಾಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಒಳಕಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಜರುಗಿತು.ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಹಾಗೂ ಪೌಷ್ಟಿಕ ಆಹಾರ ಪ್ರಧಾನ ಮಂತ್ರಿ ಪೋಷಣ್ ಕಾರ್ಯಕ್ರಮದ ಬಗ್ಗೆ ಪೋಷಕರಿಗೆ ಅರಿವು ಉಂಟು ಮಾಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಣ ಇಲಾಖೆಯ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಹಾಗೂ ಡಯಟ್ ಉಪನ್ಯಾಸಕ ಯೋಗನರಸಿಂಹಸ್ವಾಮಿ ಕಾರ್ಯಕ್ರಮದ ಅಗತ್ಯ ಹಾಗೂ ಯಶಸ್ಸಿನ ಬಗ್ಗೆ ಉತ್ತಮ ಮಾಹಿತಿ ನೀಡಿದರು.ಪ್ರೌಢಶಾಲೆ ಅಭಿವೃದ್ಧಿ ಮತ್ತು ಉಸ್ತುವಾರಿ ಅಧ್ಯಕ್ಷ ರಮೇಶ್ ಹೆಗಡೆ , ನಗರಸಭೆಯ ಉಪಾಧ್ಯಕ್ಷೆ ರಜನಿ ಹೆಬ್ಬಾರ್ ಮತ್ತು ನಗರಸಭೆ ಸದಸ್ಯೆ ಮಾನಸ ಪೈ, ಸಂಯುಕ್ತ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕಿಯರಾದ ಪೂರ್ಣಿಮಾ ಮತ್ತು ಕುಸುಮ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಪ್ರಭು ಇದ್ದರು.
ಅಜಿಮ್ ಪ್ರೇಮ್‍ಜಿ ಫೌಂಡೇಷನ್ ನ ಯೋಗೀಶ್ ಹಾಗೂ ಪ್ರಕೃತಿ ಆಗಮಿಸಿದ್ದು, ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಸಮೀಕ್ಷೆ ಕೈಗೊಂಡರು. ಬಿಆರ್‌ಪಿ ಜಯಶೀಲ ಬಿ. ರೋಟೆ ಕಾರ್ಯಕ್ರಮ ಸಂಘಟಿಸಿದರು. ಪೂರ್ಣಿಮಾ ಸ್ವಾಗತಿಸಿದರು. ಸಿಆರ್‌ಪಿ ಸರಿತಾ ರಾಣಿ ವಂದಿಸಿದರು. ಸಿಆರ್‌ಪಿ ರಂಜಿತ ಕಾರ್ಯಕ್ರಮ ನಿರೂಪಿಸಿದರು. ಬಿಐಇಆರ್‌ಟಿ ಆಶಾ ಸಹಕರಿಸಿದರು.