ಉಡುಪಿ ಯಕ್ಷಗಾನ ಕಲಾಕ್ಷೇತ್ರ: ಯಕ್ಷಗಾನ ತರಬೇತಿ ಶುಭಾರಂಭ

| Published : Jul 15 2025, 11:45 PM IST

ಸಾರಾಂಶ

ಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 2025 - 26 ಸಾಲಿನ ಯಕ್ಷಗಾನ ತರಗತಿಯನ್ನು ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಇತ್ತೀಚೆಗೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಗುಂಡಿಬೈಲು ಯಕ್ಷಗಾನ ಕಲಾಕ್ಷೇತ್ರದ 2025 - 26 ಸಾಲಿನ ಯಕ್ಷಗಾನ ತರಗತಿಯನ್ನು ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಇತ್ತೀಚೆಗೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಅಮೃತ ಮಹೋತ್ಸವ ವರ್ಷವನ್ನಾಚರಿಸುತ್ತಿರುವ ಈ ಸಂಘವನ್ನು ಸ್ಥಾಪನೆ ಮಾಡಿದ ಹಿರಿಯರು ಕಂಡ ಕನಸನ್ನು ನನಸಾಗಿಸುವ ಕಾರ್ಯ ನಮ್ಮಿಂದ ಆಗಬೇಕಿದೆ. ಯಕ್ಷಗಾನ ಕಲೆಯ ಶಿಕ್ಷವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಮ್ಮ ಮುಂದಿದೆ. ನಾವು ಸಂಘದ ವಿನಮ್ರ ಸೇವಕರಾಗಿ ಅದನ್ನು ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.ವಿದ್ಯಾರ್ಥಿಗಳು ಈ ತರಗತಿಗಳಿಂದ ಉತ್ತಮ ಕಲಾವಿದರಾಗಿ ಸಂಘಕ್ಕೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತರಲಿ ಎಂದು ಶುಭ ಹಾರೈಸಿದರು,

ಸಂಘದ ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ ಅವರು ಸಂಘದ ದೈವ ದೇವರುಗಳ ಅನುಗ್ರಹ ಶಿಕ್ಷಾರ್ಥಿಗಳಿಗೆ ಸದಾ ಇರಲಿ ಎಂದು ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಜಿ. ಬಾಬು ಗೌಡ ಉಪಸ್ಥಿತರಿದ್ದರು, ಯಕ್ಷಗುರು ಉದಯ ಕುಮಾರ್ ಮಧ್ಯಸ್ಥ ಪೆರಂಪಳ್ಳಿ, ಚರಿತ್ ಕುಮಾರ್ ಹೇರೂರು ಮತ್ತಿತರರು ವೇದಿಕೆಯಲ್ಲಿದ್ದರು.ಕೋಶಾಧಿಕಾರಿ ನರಸಿಂಹ ಎನ್. ಆರ್. ಸ್ವಾಗತಿಸಿದರು, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು, ಕಲಾಕಾರ್ಯದರ್ಶಿ ಶ್ರೀಧರ್ ಭಟ್ ಧನ್ಯವಾದ ಸಮರ್ಪಿಸಿದರು, ಸಂಘದ ಸದಸ್ಯರು, ವಿದ್ಯಾರ್ಥಿಗಳ ಪೋಷಕರು , ಕಲಾಭಿಮಾನಿಗಳು ಭಾಗವಹಿಸಿದ್ದರು,