ಯುಗಾದಿ ಉತ್ಸವಕ್ಕೆ ಭರ್ಜರಿ ಸಿದ್ಧತೆ: ರಮೇಶ ದುಭಾಶಿ

| Published : Mar 28 2025, 12:31 AM IST

ಯುಗಾದಿ ಉತ್ಸವಕ್ಕೆ ಭರ್ಜರಿ ಸಿದ್ಧತೆ: ರಮೇಶ ದುಭಾಶಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಆಚರಿಸುವ ಯುಗಾದಿ ಉತ್ಸವವು ರಾಜ್ಯಕ್ಕೆ ಮಾದರಿಯಾಗಿದೆ. ಈ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಬೇಕು

ಶಿರಸಿ: ತಾಲೂಕಿನಲ್ಲಿ ಆಚರಿಸುವ ಯುಗಾದಿ ಉತ್ಸವವು ರಾಜ್ಯಕ್ಕೆ ಮಾದರಿಯಾಗಿದೆ. ಈ ವರ್ಷ ಬಹಳ ವಿಜೃಂಭಣೆಯಿಂದ ಆಚರಿಸಬೇಕು ಎಂಬ ಉದ್ದೇಶದಿಂದ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ ಎಂದು ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ರಮೇಶ ದುಭಾಶಿ ಹೇಳಿದರು.

ಅವರು ಗುರುವಾರ ನಗರದ ವಿಠೋಬ ದೇವಸ್ಥಾನದ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ, ನಗರದಲ್ಲಿ ಕೇಸರಿ ಧ್ವಜ ಕಟ್ಟಲಾಗುತ್ತಿದೆ. ಶೋಭಾಯಾತ್ರೆಗೆ ಮೆರಗು ತರುವ ಬಂಡಿ ತರುವವರ ಮನೆಗೆ ಸ್ವತಃ ನಾವೇ ಭೇಟಿ ನೀಡಿ ಆಹ್ವಾನ ನೀಡಿದ್ದೇವೆ. ಹಿಂದುತ್ವ ಬಿಂಬಿಸುವ ಬಂಡಿಗಳಿಗೆ ಮಾತ್ರ ಅವಕಾಶವಿದೆ. ಶುಕ್ರವಾರ ಸಂಜೆ ೪.೩೦ಕ್ಕೆ ಬೈಕ್ ರ್‍ಯಾಲಿ ಆಯೋಜಿಸಲಾಗಿದೆ. ೧ ಸಾವಿರಕ್ಕೂ ಅಧಿಕ ಬೈಕ್ ಸವಾರರು ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪ್ರಮುಖರಾದ ಕೃಷ್ಣ ಎಸಳೆ, ಚಂದ್ರು ಎಸಳೆ, ಸುರೇಶ ಶೆಟ್ಟಿ, ನಂದನ ಸಾಗರ, ಆನಂದ ಸಾಲೇರ, ರಾಧಿಕಾ ನಾಯ್ಕ, ಶಿಲ್ಪಾ ನಾಯ್ಕ, ಉಪೇಂದ್ರ ಮೇಸ್ತಾ ಇದ್ದರು.

ಬೈಕ್ ರ್‍ಯಾಲಿಯು ವಿಕಾಸಾಶ್ರಮ ಮೈದಾನ, ಮರಾಠಿಕೊಪ್ಪ, ಸಹ್ಯಾದ್ರಿ ಕಾಲೋನಿ, ಯಲ್ಲಾಪುರ ನಾಕಾ, ವಿವೇಕಾನಂದ ನಗರ, ಹುಬ್ಬಳ್ಳಿ ರಸ್ತೆ, ಕೆಎಸ್‌ಆರ್‌ಟಿಸಿ ಡಿಪೋ, ಕಸ್ತೂರಬಾನಗರ, ಕರಿಗುಂಡಿ ರಸ್ತೆ, ಕೋಟೆಕೆರೆ, ಮಾರಿಕಾಂಬಾ ದೇವಸ್ಥಾನ, ರಾಮನಬೈಲ್, ಮರ್ಕಿದುರ್ಗಿ ದೇವಸ್ಥಾನ, ರಾಯರಪೇಟೆ, ನಿಲೇಕಣಿ, ಐದು ರಸ್ತೆ, ಶ್ರದ್ಧಾನಂದಗಲ್ಲಿ, ಸಿಂಪಿಗಲ್ಲಿ, ಪೋಸ್ಟ್ ಸರ್ಕಲ್, ಡ್ರೈವರ್ ಕಟ್ಟಾ, ಶಿವಾಜಿವೃತ್ತ, ಬಸ್ ನಿಲ್ದಾಣ, ಸಿಪಿ ಬಜಾರ್, ಎಸ್‌ಬಿಐ ಬ್ಯಾಂಕ್ ವೃತ್ತ, ಐಬಿ ರಸ್ತೆ, ಗಣೇಶನಗರ, ಭಾಸ್ಕರವೃತ್ತ, ತೋಟಗಾರಿಕಾ ಇಲಾಖೆ ರಾಘವೇಂದ್ರ ವೃತ್ತ, ಅಭಿಮನ್ಯು ವೃತ್ತ, ದೇವಿಕೆರೆ, ಅಶ್ವಿನಿ ವೃತ್ತ, ವಿಕಾಶಾಶ್ರಮ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮಾಹಿತಿ ನೀಡಿದರು.