ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸುಖ ದುಃಖಗಳ ಸಮ್ಮಿಶ್ರಣವೇ ಯುಗಾದಿ ಹಬ್ಬದ ವೈಶಿಷ್ಟ್ಯತೆ ಎಂಬಂತೆ ಕವಿಗಳ ಕವನಗಳು ಸುಖ, ದುಃಖದ ಹಿನ್ನೆಲೆಯಲ್ಲಿ ಮೂಡಿ ಬಂದಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇಂದು ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವುದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ ಎಂದು ಪ್ರಾಚಾರ್ಯ ಡಾ.ನೀಲಪ್ಪ ಹೊಸಮನಿ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಜರುಗಿದ ಯುಗಾದಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಸಂವತ್ಸರ ಯುಗಾದಿಯೂ ಸವ೯ರಿಗೂ ಸಂತೋಷವನ್ನು ತರಲಿ ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಕವಿ, ಕವಯಿತ್ರಿಯರು ಯುಗಾದಿ ಹಬ್ಬದ ಕುರಿತು ರಚಿಸಿದ ಅಥ೯ಪೂಣ೯ ಕವಿತೆಗಳನ್ನು ವಾಚಿಸುವ ಮೂಲಕ ಯುಗಾದಿ ಕವಿಗೋಷ್ಠಿಗೆ ಮೆರುಗು ತಂದುಕೊಟ್ಟರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಜಿ.ಮುಚ್ಚಂಡಿ ಮಾತನಾಡಿ, ಯುಗಾದಿ ಕವಿಗೋಷ್ಠಿಯಲ್ಲಿ ಬೇವು ಬೆಲ್ಲ ಇರದಿರೆ, ಬದುಕಿಗೆಲ್ಲಿ ಬೆಲೆಯಿದೆ? ಎಂದು ಹಾಡು ಹೇಳಿ ಬೇವು ಬೆಲ್ಲದ ಜೊತೆಗೆ ಬದುಕಿನ ಆಶಯವನ್ನು ತೆರೆದಿಟ್ಟರು. ಕಾವ್ಯದ ಅಂತರಾಳದ ನೋವಿಗೆ ಕನ್ನಡಿ ಹಿಡಿಯುವಂತಿರಬೇಕು. ಕಾವ್ಯ ಸಹಜವಾಗಿ ಮಾಗುವಂತಿರಬೇಕು ಎನ್ನುತ್ತ ಕಾವ್ಯ ಸಹೃದಯನಿಗೆ ಆನಂದ ನೀಡುವಂತಹ ಕಾವ್ಯ ರಚನೆಯಾಗಬೇಕಾದರೆ ನಿರಂತರ ಅಧ್ಯಯನ ಅತ್ಯಗತ್ಯ. ತನ್ಮೂಲಕ ಕಾವ್ಯದ ಸೌಂದರ್ಯ ಹೆಚ್ಚಿಸುವಂತಿರಬೇಕು ಎಂದು ಹೇಳಿದರು.ಕಮಲಾ ಮುರಾಳ, ಮಡಿವಾಳಮ್ಮ ನಾಡಗೌಡ, ಶೋಭಾ ಹುಲ್ಯಾಳ, ಪ್ರಭಾವತಿ ನಾಟೀಕಾರ, ಎಸ್.ಎಲ್.ಇಂಗಳೇಶ್ವರ, ಹಿರಿಯ ರಂಗಭೂಮಿ ಕಲಾವಿದ ಎಸ್.ಎಂ.ಖೇಡಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿಶ್ವಾವಸು ನಾಮ ಸಂವತ್ಸರದ ವಿಶೇಷವಾಗಿ ಯುಗಾದಿ ಹಬ್ಬದ ಕುರಿತು ಕವಿತಾ ಕಲ್ಯಾಣಪ್ಪಗೋಳ, ಸಂತೋಷ ಬಂಡೆ, ರಾಹುಲ ರಜಪೂತ, ಶೋಭಾ ಹರಿಜನ, ಜಗದೀಶ ಬಿರಾದಾರ, ಶರಣಮ್ಮ ಹಾದಿಮನಿ, ಶಿವಾಜಿ ಮೋರೆ, ಸುರೇಶ ಪೂಜಾರಿ, ಲಕ್ಷ್ಮೀ ತೊರವಿ, ಸೌಮ್ಯ ದೋರನಳ್ಳಿ, ಶೋಭಾ ಮೇಡೆಗಾರ, ರುದ್ರಮ್ಮ ಗಿಡ್ಡಪ್ಪಗೋಳ, ಸಾವಿತ್ರಿ ಬಾಗಲಕೋಟ, ಸಾವಿತ್ರಿ ತಳವಾರ, ಸಂಗಮೇಶ ಕೆರೆಪ್ಪಗೋಳ, ಭಾರತಿ ಗೊಂಗಡಿ, ಶಾಂತಾ ಬಿರಾದಾರ, ಶಾಂತಾ ವಿಭೂತಿ, ಸುನಂದಾ ಕೋರಿ, ನಿಂಗಪ್ಪ ಕಲಘಟಗಿ, ವಾಲೀಕಾರ ಸೇರಿದಂತೆ ಮುಂತಾದ ಕವಿ, ಕವಯಿತ್ರಿಯರು ಯುಗಾದಿ ಕವಿಗೋಷ್ಠಿಯನ್ನು ಕುರಿತು ಕವನ ವಾಚಿಸಿ ವೇದಿಕೆಗೆ ಮೆರುಗು ನೀಡಿದರು.
ಡಾ.ವ್ಹಿ.ಡಿ ಐಹೊಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅರ್ಜುನ ಶಿರೂರ, ಜಿ.ಎಸ್ ಬಳ್ಳೂರ, ವಿಜಯಲಕ್ಷ್ಮಿ ಹಳಕಟ್ಟಿ, ಸುಖದೇವಿ ಅಲಬಾಳಮಠ, ಬಸವರಾಜ ಸಾರವಾಡ, ಎಸ್.ಜಿ.ದಾಶ್ಯಾಳ, ಗುರುಪಾದಪ್ಪ ಸಿಂಪಿ, ಶ್ರೀಕಾಂತ ಚಿಮ್ಮಲಗಿ, ಎಸ್.ಎಂ.ಕಣಬೂರ, ಎನ್.ಆರ್ ಕುಲಕರ್ಣಿ, ವಿ.ಎಸ್.ಖಾಡೆ, ಕೆ.ಎಚ್.ಹಣಮಾಣಿ, ಅಂಬಾದಾಸ ಜೋಶಿ, ಕಾಶೀನಾಥ ಬಿರಾದಾರ, ಅಮರಸಿದ್ಧ ಪೂಜಾರಿ, ಭಾಗೀರಥಿ ಶಿಂಧೆ, ವೈ.ಎಚ್.ಲಂಬು, ಶರಣು ಕಂಠಿ, ಗಂಗಮ್ಮ ರಡ್ಡಿ ಮುಂತಾದವರು ಉಪಸ್ಥಿತರಿದ್ದರು.ಸುನಂದಾ ಕೋರಿ ಪ್ರಾರ್ಥಿಸಿದರು. ಸಿದ್ರಾಮಯ್ಯ ಲಕ್ಕುಂಡಿಮಠ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಡಾ.ಸಂಗಮೇಶ ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ.ಮಾಧವ ಗುಡಿ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))