ಕೃಷಿ ವಿವಿಗೆ ವಿದೇಶಿ ಶೈಕ್ಷಣಿಕ ವಿನಿಮಯಕ್ಕೆ ಯುಜಿಸಿ ಅಸ್ತು

| Published : May 26 2024, 01:32 AM IST / Updated: May 26 2024, 06:51 AM IST

ಕೃಷಿ ವಿವಿಗೆ ವಿದೇಶಿ ಶೈಕ್ಷಣಿಕ ವಿನಿಮಯಕ್ಕೆ ಯುಜಿಸಿ ಅಸ್ತು
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ವಿದೇಶಿ ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಹಯೋಗ ಹೊಂದಲು ವಿಶ್ವವಿದ್ಯಾನಿಲಯ ಅನುದಾನ ಆಯೋಗ ಅನುಮತಿ ನೀಡಿದೆ.

 ಬೆಂಗಳೂರು :   ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ವಿದೇಶಿ ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಹಯೋಗ ಹೊಂದಲು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಅನುಮತಿ ನೀಡಿದೆ.

ಭಾರತದಲ್ಲಿ ಗುರುತರವಾದ ಶೈಕ್ಷಣಿಕ ಹಾಗೂ ಸಂಶೋಧನೆಯನ್ನು ಹೊಂದಿರುವ ಶ್ರೇಷ್ಠ ವಿಶ್ವವಿದ್ಯಾನಿಲಯಗಳನ್ನು ಗುರುತಿಸಿ, ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಜಂಟಿಯಾಗಿ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶಾದ್ಯಂತ 234 ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿವಿಗಳನ್ನು ಗುರುತಿಸಿದೆ. ಕರ್ನಾಟಕದಿಂದ 12 ಖಾಸಗಿ ವಿವಿ ಹಾಗೂ 9 ಸರ್ಕಾರಿ ವಿವಿಗಳನ್ನು ಗುರುತಿಸಲಾಗಿದೆ. 9 ಸರ್ಕಾರಿ ವಿವಿಗಳಲ್ಲಿ ಬೆಂಗಳೂರು ಕೃಷಿ ವಿವಿ ಸಹ ಸ್ಥಾನ ಪಡೆದಿದೆ.

ವಿದ್ಯಾರ್ಥಿಗಳು ಕಲಿಕೆಯ ಅರ್ಧವನ್ನು ರಾಜ್ಯದಲ್ಲಿ, ಇನ್ನುಳಿದಿದ್ದನ್ನು ವಿದೇಶದಲ್ಲಿ ಅಧ್ಯಯನ ಮಾಡಬಹುದು. ಎರಡೂ ದೇಶಗಳು ಜಂಟಿ ಅಥವಾ ಪ್ರತ್ಯೇಕ ಪದವಿ ನೀಡಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ವ್ಯಾಸಂಗ ಮಾಡುವುದು ತಪ್ಪುತ್ತದೆ ಅಥವಾ ಭಾರತದಲ್ಲೇ ಪ್ರವೇಶ ಪಡೆದು ವಿದೇಶದಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ. ಉದ್ಯೋಗಾವಕಾಶ ಹೆಚ್ಚಲಿವೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಕೃಷಿ ವಿವಿ ಪ್ರಕಟಣೆ ತಿಳಿಸಿದೆ.