ಯುಜಿಡಿ ಮ್ಯಾನ್‌ ಹೋಲ್‌ ತುಂಬಿ ದುರ್ವಾಸನೆ

| Published : Mar 24 2024, 01:40 AM IST

ಸಾರಾಂಶ

ಪಟ್ಟಣದ ಜನನಿಬಿಡ ಸ್ಥಳ ಹಾಗೂ ಪಟ್ಟಣದ ಹೃದಯ ಭಾಗವಾದ ಹಳೆ ಬಸ್‌ ನಿಲ್ದಾಣ (ನೆಹರು ಪಾರ್ಕ್)‌ ಯುಜಿಡಿ ಮ್ಯಾನ್‌ ಹೋಲ್‌ ತುಂಬಿ ಮೇಲೆದ್ದಿರುವ ಕಾರಣ ದುರ್ವಾಸನೆ ಬೀರುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಜನನಿಬಿಡ ಸ್ಥಳ ಹಾಗೂ ಪಟ್ಟಣದ ಹೃದಯ ಭಾಗವಾದ ಹಳೆ ಬಸ್‌ ನಿಲ್ದಾಣ (ನೆಹರು ಪಾರ್ಕ್)‌ ಯುಜಿಡಿ ಮ್ಯಾನ್‌ ಹೋಲ್‌ ತುಂಬಿ ಮೇಲೆದ್ದಿರುವ ಕಾರಣ ದುರ್ವಾಸನೆ ಬೀರುತ್ತಿದೆ. ಪಟ್ಟಣದ ಹಳೇ ಬಸ್‌ ನಿಲ್ದಾಣದ ಆವರಣದ ನೆಹರು ಪಾರ್ಕ್‌ ಬಳಿಯ ಯುಜಿಡಿಯ ಮ್ಯಾನ್‌ ಹೋಲ್‌ಗೆ ಬೇಕರಿ,ಹೋಟೆಲ್‌ನ ಮಲ ಮೂತ್ರ ಅಕ್ರಮವಾಗಿ ಬಿಡಲಾಗಿದ್ದು ಪುರಸಭೆ ನಿರ್ಲಕ್ಷ್ಯಕ್ಕೆ ನೆಹರು ಪಾರ್ಕ್‌ ಬಳಿಕ ವ್ಯಾಪಾರಸ್ಥರು ಹಾಗೂ ಹಳೇ ಬಸ್‌ ನಿಲ್ದಾಣದಲ್ಲಿ ಸಂಚರಿಸುವ ಜನರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಪುರಸಭೆಗೆ ಹಿಡಿ ಶಾಪ ಹಾಕುತ್ತ ಸಾಗುತ್ತಿದ್ದಾರೆ.

ಪಟ್ಟಣದ ಯುಜಿಡಿಗೆ ಸಂಪರ್ಕವನ್ನೇ ಕೊಟ್ಟಿಲ್ಲ. ಆದರೂ ಹಳೇ ಬಸ್‌ ನಿಲ್ದಾಣದ ಆವರಣದಲ್ಲಿನ ಕೆಲ ಬೇಕರಿ, ಹೋಟೆಲ್‌ಗಳು ಮಾಲೀಕರು ಪ್ರಭಾವ ಬಳಸಿ ಅಕ್ರಮವಾಗಿ ಯುಜಿಡಿಗೆ ಮಲ ಮೂತ್ರ ಬಿಡುತ್ತಿದ್ದಾರೆ.ಸದ್ಯ ನೆಹರು ಪಾರ್ಕ್‌ ನ ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌ಗೆ ಸೇರಿದ ಬಿಲ್ಡಿಂಗ್‌ನ ಮುಂದೆಯೇ ಮ್ಯಾನ್‌ ಹೋಲ್‌ ತುಂಬಿ ಮಲ ಮೇಲೆದ್ದು ವಾಸನೆ ಬೀರುತ್ತಿದೆ ತುಂಬಿ ತುಳುಕಾಡುವ ಮ್ಯಾನ್‌ ಹೋಲ್‌ ಕ್ಲೀನ್‌ ಮಾಡಿಸಲು ಪುರಸಭೆ ಸಂಜೆಯ ತನಕ ಆಗಿಲ್ಲ.ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಇಲ್ಲ, ಪುರಸಭೆ ಸದಸ್ಯರು ಕೈ ಚೆಲ್ಲಿ ಕುಳಿತಿದ್ದಾರೆ. ಪುರಸಭೆ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಮ್ಯಾನ್‌ ಹೋಲ್‌ ಜನನಿ ಬಿಡ ಸ್ಥಳದಲ್ಲಿ ತುಂಬಿ ತುಳುಕಾಡುತ್ತಿದ್ದರೂ ಕ್ಲೀನ್‌ ಮಾಡಿಸಲು ನಿರ್ಲಕ್ಷ್ಯ ತೋರಿದ್ದಾರೆ.ಪಟ್ಟಣದ ಹೃದಯ ಭಾಗದ ಹಳೇ ಬಸ್‌ ನಿಲ್ದಾಣದ ಆವರಣದಲ್ಲಿನ ಮ್ಯಾನ್‌ ಹೋಲ್‌ ತುಂಬಿ ತುಳುಕಾಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಪುರಸಭೆ ಇದ್ದು ಇಲ್ಲದಂತಿದೆ ಎಂದು ಆರೋಪಿಸಿದ್ದಾರೆ.

ಪಟ್ಟಣದ ಹಳೇ ಬಸ್‌ ನಿಲ್ದಾಣದ ಆವರಣದ ಮ್ಯಾನ್‌ ಹೋಲ್‌ ದೊಡ್ಡದು.ಮಲ ಮೂತ್ರ ಮ್ಯಾನ್‌ ಹೋಲ್‌ ಬಿಟ್ಟಿರುವವ ಸಂಪರ್ಕ ಕಡಿತ ಹಾಕಲಾಗುವುದು ಜೊತೆಗೆ ಭಾನುವಾರ ಬೆಳಗ್ಗೆಯೇ ಮ್ಯಾನ್‌ ಹೋಲ್‌ ಕ್ಲೀನ್‌ ಮಾಡಿಸಲು ಕ್ರಮ ವಹಿಸಿ,ವಾಸನೆ ಬರದಂತೆ ಕ್ರಮ ವಹಿಸಲಾಗುವುದು.ಗೋಪಿ,ಆರೋಗ್ಯ ನಿರೀಕ್ಷಕ,ಪುರಸಭೆ,ಗುಂಡ್ಲುಪೇಟೆ

ಪುರಸಭೆಯಲ್ಲಿ ಅಧಿಕಾರಿಗಳ ದರ್ಬಾರ್‌ಗೆ ಜನರ ರೋಸಿ ಹೋಗಿದ್ದಾರೆ. ಪಟ್ಟಣದಲ್ಲಿ ಕಬಿನಿ ನೀರು ಬಂದು ತಿಂಗಳಾಗುತ್ತಿದೆ. ಸ್ಟಾರ್ಟರ್‌ ರಿಪೇರಿ ನೆಪದಲ್ಲಿ ಕುಡಿವ ನೀರು ಒದಗಿಲು ಸಂಪೂರ್ಣ ವಿಫಲವಾಗಿದೆ. ಇನ್ನೂ ಪಟ್ಟಣದ ಹೃದಯ ಭಾಗದ ಮ್ಯಾನ್‌ ಹೋಲ್‌ನಲ್ಲಿ ಮಲ ತುಂಬಿರುವ ಕಾರಣ ವಾಸನೆ ಬೀರುತ್ತಿದೆ.ರಾಜು,ನಾಯಕರ ಬೀದಿ, ಗುಂಡ್ಲುಪೇಟೆ