ಉಗ್ರನರಸಿಂಹ, ಟಿಪ್ಪು ಕಟೌಟ್‌ ಫೋಟೋ ರಿಲ್ಸ್: ಸುಮೊಟೋ ಪ್ರಕರಣ ದಾಖಲು

| Published : Oct 16 2023, 01:45 AM IST

ಉಗ್ರನರಸಿಂಹ, ಟಿಪ್ಪು ಕಟೌಟ್‌ ಫೋಟೋ ರಿಲ್ಸ್: ಸುಮೊಟೋ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಟಿಪ್ಪುನಗರದ ವೆಲ್ಡಿಂಗ್ ಕೆಲಸ ಮಾಡುವ ವಸೀಂ ಅಕ್ರಂ ಎಂಬಾತನ ವಿರುದ್ಧ ದೂರು
ಶಿವಮೊಗ್ಗ: ಶಿವಮೊಗ್ಗ ಗಣಪತಿ ಮೆರವಣಿಗೆ ವೇಳೆ ಮಾಡಿದ್ದ ಅಲಂಕಾರದೊಂದಿಗೆ ಈದ್ ಮೆರವಣಿಗೆಯ ವೇಳೆ ಮಾಡಿದ್ದ ಅಲಂಕಾರವನ್ನು ಸೇರಿಸಿ, ರೀಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದವನ ವಿರುದ್ಧ ದೊಡ್ಡಪೇಟೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ. ಟಿಪ್ಪುನಗರದ ವೆಲ್ಡಿಂಗ್ ಕೆಲಸ ಮಾಡುವ ವಸೀಂ ಅಕ್ರಂ ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಹಿಂದು ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ವೇಳೆ ಗಾಂಧಿಬಜಾರ್ ಪ್ರವೇಶ ದ್ವಾರದಲ್ಲಿ ನಿರ್ಮಿಸಿದ್ದ ಉಗ್ರನರಸಿಂಹ ಮೂರ್ತಿಯ ಪ್ರತಿಕೃತಿಯ ಈ ಫೋಟೋಗೆ ಅವಹೇಳನಕಾರಿ ಬರಹದೊಂದಿಗೆ ಅಮೀರ್ ಅಹ್ಮದ್ ವೃತ್ತದಲ್ಲಿದ್ದ ಟಿಪ್ಪು ಸುಲ್ತಾನ್ ಕಟೌಟ್ ಫೋಟೋ ಸೇರಿಸಿ, ಟಿಪ್ಪು ಸುಲ್ತಾನ್ ಎಂದು ಬರೆಯಲಾಗಿತ್ತು. ಈ ಫೋಟೋವನ್ನು ರೀಲ್ ರೀತಿ ವಿಡಿಯೋ ಮಾಡಿ ಇತರರಿಗೆ ಶೇರ್ ಮಾಡಲಾಗಿತ್ತು. ಇದು ಒಂದು ಕೋಮಿನ ಜನರನ್ನು ಎತ್ತಿಕಟ್ಟುವ, ಉದ್ರಿಕ್ತಗೊಳಿಸುವಂತಿದ್ದು, ನಗರದಲ್ಲಿ ಸಮಾಜದ ಶಾಂತಿ ಕದಡುವ ವಿಡಿಯೋ ಆಗಿರುವ ಹಿನ್ನೆಲೆ ಟಿಪ್ಪುನಗರದ ವೆಲ್ಡಿಂಗ್ ಕೆಲಸ ಮಾಡುವ ವಸೀಂ ಅಕ್ರಂ ವಿರುದ್ಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.