ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಂಜೆ ಕ್ಲಿನಿಕ್ ತೆರೆಯಲಾಗಿದ್ದು ಜ.19ರಂದು ಶುಭಾರಂಭಗೊಂಡಿತು. ವಿಶೇಷ ಸಂಜೆ ಕ್ಲಿನಿಕ್ ಸೋಮವಾರದಿಂದ ಶನಿವಾರದವರೆಗೆ ಸಂಜೆ 5ರಿಂದ 7ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲಿದೆ.
ಬೆಳ್ತಂಗಡಿ: ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಅನೂಕೂಲತೆಗಾಗಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಸಂಜೆ ಕ್ಲಿನಿಕ್ ತೆರೆಯಲಾಗಿದ್ದು ಜ.19ರಂದು ಶುಭಾರಂಭಗೊಂಡಿತು.
ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜತ್ ವಿಶೇಷ ಸಂಜೆ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಜನತೆಗೆ ತಜ್ಞ ವೈದ್ಯರು ಇರುವ ಇಂತಹ ಸಂಜೆ ಕ್ಲಿನಿಕ್ ಅವಶ್ಯಕತೆ ಇತ್ತು. ಕೆಲಸಕ್ಕೆ ಹೋಗುವವರಿಗೆ ಈ ಸಂಜೆ ಕ್ಲಿನಿಕ್‌ನಿಂದ ಬಹಳ ಪ್ರಯೋಜನವಾಗಲಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ ಎಂದರು.ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕೆಲವೊಂದು ಜನರಿಗೆ ಹಗಲು ಹೊತ್ತಿನಲ್ಲಿ ತಮ್ಮ ಕೆಲಸದ ಒತ್ತಡದಿಂದ ವೈದ್ಯರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲಈ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ವಿಶೇಷ ಸಂಜೆ ಕ್ಲಿನಿಕ್ ಪ್ರಾರಂಭಿಸಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5ರಿಂದ 7ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲು ಉದ್ದೇಶಿಸಲಾಗಿದೆ ಎಂದರು.ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್.ಪಿ, ಮುಖ್ಯ ವೈದ್ಯಾಧಿಕಾರಿ, ಎಂ.ಡಿ ಫಿಸಿಷಿಯನ್ ಡಾ.ಸಾತ್ವಿಕ್ ಜೈನ್, ಚರ್ಮರೋಗ ತಜ್ಞೆ ಡಾ.ಭವಿಷ್ಯ ಕೆ. ಶೆಟ್ಟಿ ಉಪಸ್ಥಿರಿದ್ದು, ವಿಶೇಷ ಸಂಜೆ ಕ್ಲಿನಿಕ್‌ಗೆ ಶುಭ ಹಾರೈಸಿದರು. ಸ್ಟೋರ್ ವಿಭಾಗದ ಇನ್-ಚಾರ್ಜ್ ಜಗನ್ನಾಥ ಎಂ. ನಿರೂಪಿಸಿದರು.