ಉಜಿರೆ ಶ್ರೀ ಜನಾರ್ದನ ದೇವಸ್ಥಾನ ನೂತನ ಬ್ರಹ್ಮರಥ ನಿರ್ಮಾಣ ಮುಹೂರ್ತ

| Published : Jul 02 2025, 12:22 AM IST

ಸಾರಾಂಶ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥ ಮುಹೂರ್ತದ ಧಾರ್ಮಿಕ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ವೇದಮೂರ್ತಿ ರಾಘವೇಂದ್ರ ಕೊಡಂಚ ಧಾರ್ಮಿಕ ಪೂಜಾ ವಿಧಿ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿದೇವರ ರಥಯಾತ್ರೆಯಿಂದ ಸಮಸ್ತ ದೇವತೆಗಳೂ ಸಂತುಷ್ಟರಾಗುವರೆಂಬ ಉಲ್ಲೇಖವಿದೆ . ಉತ್ಸವದಿಂದ ಸಂತುಷ್ಟರಾಗುವ ದೇವರ ಅನುಗ್ರಹದಿಂದ ಊರಿಗೆ ಶ್ರೇಯಸ್ಸು. ಭಕ್ತಿ, ಶ್ರ ದ್ಧೆಯ ಸಾಮೂಹಿಕ ಪ್ರಾರ್ಥನೆಯ ಸಾತ್ವಿಕ ಶಕ್ತಿಗೆ ದೇವರ ಪರಿಪೂರ್ಣ ಅನುಗ್ರಹವಿದೆ ಎಂದು ಹೆರ್ಗ ಹರಿಪ್ರಸಾದ್ ಭಟ್ ಹೇಳಿದ್ದಾರೆ.ಶುಕ್ರವಾರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥ ಮುಹೂರ್ತದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವೇದಮೂರ್ತಿ ರಾಘವೇಂದ್ರ ಕೊಡಂಚ ಧಾರ್ಮಿಕ ಪೂಜಾ ವಿಧಿ ನೆರವೇರಿಸಿದರು. ಅಮೇರಿಕಾದ ಫೀನಿಕ್ಸ್ ನಿವಾಸಿ ವೆಂಕಟಕೃಷ್ಣ ದೇವಾಲಯದ ಅರ್ಚಕ ಪುರೋಹಿತ ಕಿರಣ್ ಕುಮಾರ್ ಮತ್ತು ಮನೆಯವರು ಸೇವಾರ್ಥವಾಗಿ ಶ್ರೀ ಜನಾರ್ದನ ಸ್ವಾಮಿಗೆ ನೂತನ ಬ್ರಹ್ಮರಥ ಸಮರ್ಪಿಸಲು ಸಂಕಲ್ಪಿಸಿದ್ದಾರೆ. ಕೋಟೇಶ್ವರದ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ರಾಜಗೋಪಾಲ ಆಚಾರ್ಯ ಅವರಿಂದ ರಥ ನಿರ್ಮಾಣಕಾರ್ಯ ನಡೆಯಲಿದ್ದು ಅವರ ಹಿರಿಯರಾದ ಶಂಕರ ಆಚಾರ್ಯ ವೀಳ್ಯಪ್ರಸಾದ ಸ್ವೀಕರಿಸಿದರು.ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಶರತ್ ಕೃಷ್ಣ ಪಡುವೆಟ್ನಾಯ, ಉಡುಪಿ ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣ ಮಠದ ದಿವಾನ ಪ್ರಸನ್ನ ಆಚಾರ್ಯ, ಆನೆಗುಡ್ಡೆ ಕ್ಷೇತ್ರದ ಅರ್ಚಕ ಶ್ರೀಧರ ಉಪಾಧ್ಯಾಯ , ರಥಸೇವಾರ್ಥಿಗಳಾದ ಆಶಾ ಸಿ. ರಾವ್ , ಅಶೋಕಕುಮಾರ್ ಮತ್ತು ಮನೆಯವರು ಇದ್ದರು. ಅರ್ಚಕ ಶ್ರೀನಿವಾಸ ಹೊಳ್ಳರ ನೇತೃತ್ವದಲ್ಲಿ ಮುಂಜಾನೆ ಗಣ ಯಾಗ ನಡೆಯಿತು. ಅಶೋಕಕುಮಾರ್ ದಂಪತಿ ಸಂಕಲ್ಪ ನೆರವೇರಿಸಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಕ್ಷೇತ್ರದ ನಾಳ್ವಿಕೆಯರಾದ ಶಿವರಾಮ ಪಡುವೆಟ್ನಾಯ,ಅನಂತಕೃಷ್ಣ ಮೂಡಣ್ಣಾಯ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್, ಕೆ.ಮೋಹನ್ ಕುಮಾರ್, ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಡಾ.ಶ್ರೀಧರ ಭಟ್, ತಾಲೂಕು ತುಳು ಶಿವಳ್ಳಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ,ಪ್ರ ಕಾಶ್ ಕುದ್ದಣ್ಣಾಯ, ಲಕ್ಷಣ ಸಪಲ್ಯ, ಭರತ್ ಕುಮಾರ್, ರಾಜೇಶ್ ಪೈ, ರಾಮಚಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ ಬಳಂಜ, ಗೋವಿಂದ ದಾಮ್ಲೆ, ರವಿ ಚೆಕ್ಕಿತ್ತಾಯ, ಪಾಂಡುರಂಗ ಬಾಳಿಗಾ, ವಿದ್ಯಾಕುಮಾರ್ ಕಾಂಚೋಡು, ವಿಶ್ವನಾಥ ಶೆಟ್ಟಿ, ವನಿತಾ ಶೆಟ್ಟಿ, ರಾಮಣ್ಣ ಗೌಡ, ಹುಕುಂ ರಾಮ್ ಪಟೇಲ್ , ಪ್ರಶಾಂತ್ ಜೈನ್ , ಸುಧಾಕರ ಶೆಟ್ಟಿಗಾರ್,ಮೋಹನ ಶೆಟ್ಟಿಗಾರ್, ಅರುಣ್‌ ಕುಮಾರ್ ಎಂ ಎಸ್ , ಅತ್ತಾಜೆ ಕೇಶವ ಭಟ್, ಜಯರಾಮ ಪಡ್ಡಿಲ್ಲಾಯ, ಶಿವರಾಮ ಬಿ.ಕೆ, ನಾಗೇಶ್ ರಾವ್, ಅರವಿಂದ ಕಾರಂತ್, ಶಾಮ ಭಟ್ ಅತ್ತಾಜೆ, ಸಂಜೀವ ಕೆ, ಶಶಿಕಲಾ ದೇವಪ್ಪ ಗೌಡ ಮೊದಲಾದವರು ಇದ್ದರು. ರಥಶಿಲ್ಪಿ ಪರವಾಗಿ ಶಂಕರ ಆಚಾರ್ಯ ಹಾಗು ಶಿಲಾ ಶಿಲ್ಪಿ ಹಾಗು ಸಿಮೆಂಟ್ ಡಿಸೈನ್ ಅವರಿಗೆ ಕ್ಷೇತ್ರದ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ನಿರ್ಮಿಸಿ ಮುಂದಿನ ಮಾರ್ಚ್ ವೇಳೆಗೆ ನಡೆಯಲಿರುವ ಕ್ಷೇತ್ರದ ಬ್ರಹ್ಮಕಲಶೋತ್ಸವ ವೇಳೆ ಸಮರ್ಪಿಸಲಾಗುವುದು.