ಪತ್ರಕರ್ತ ಮನೋಹರ್ ಪ್ರಸಾದ್ ಓದಿನ ಹವ್ಯಾಸದೊಂದಿಗೆ ಅಗಾದ ಸ್ಮರಣ ಶಕ್ತಿ ಹೊಂದಿದ್ದರು. ತಾನು ಕ್ರಿಯಾಶೀಲ ಪತ್ರಕರ್ತರಾಗಿದ್ದರಲ್ಲದೆ ಇತರ ಸಹೋದ್ಯೋಗಿಗಳ ವರದಿಗಳನ್ನು ಓದಿ ಅವರನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಕವಿ, ವಾಗ್ಮಿ, ನಟ, ಯಕ್ಷಗಾನ ಕಲಾವಿದನಾಗಿ, ನಿರೂಪಕನಾಗಿ ಬಹುಮುಖ ಪ್ರತಿಭೆಯಾಗಿದ್ದ ಅವರು ಸೆಲೆಬ್ರಿಟಿ ಪತ್ರಕರ್ತರಾಗಿದ್ದರೆಂದು ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ಉಳ್ಳಾಲ: ಪತ್ರಕರ್ತ ಮನೋಹರ್ ಪ್ರಸಾದ್ ಓದಿನ ಹವ್ಯಾಸದೊಂದಿಗೆ ಅಗಾದ ಸ್ಮರಣ ಶಕ್ತಿ ಹೊಂದಿದ್ದರು. ತಾನು ಕ್ರಿಯಾಶೀಲ ಪತ್ರಕರ್ತರಾಗಿದ್ದರಲ್ಲದೆ ಇತರ ಸಹೋದ್ಯೋಗಿಗಳ ವರದಿಗಳನ್ನು ಓದಿ ಅವರನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಕವಿ, ವಾಗ್ಮಿ, ನಟ, ಯಕ್ಷಗಾನ ಕಲಾವಿದನಾಗಿ, ನಿರೂಪಕನಾಗಿ ಬಹುಮುಖ ಪ್ರತಿಭೆಯಾಗಿದ್ದ ಅವರು ಸೆಲೆಬ್ರಿಟಿ ಪತ್ರಕರ್ತರಾಗಿದ್ದರೆಂದು ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಭಾನುವಾರ ಪತ್ರಕರ್ತ ದಿ.ಮನೋಹರ್ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಷನ್ ಉಳ್ಳಾಲ ವಲಯದ ಅಧ್ಯಕ್ಷ ರಾಜೇಶ್ ಉಳ್ಳಾಲ್, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಉಪಾಧ್ಯಕ್ಷ ದೇವಕಿ.ಆರ್.ಉಳ್ಳಾಲ್, ಹಿರಿಯರಾದ ರವೀಂದ್ರ ಉಳ್ಳಾಲ್ ಮತ್ತಿತರರಿದ್ದರು.

ಮಲ್ಲಿಕಾ ಭಂಡಾರಿ, ಅನುಪಮಾ ಸಿ.ಬಬ್ಬುಕಟ್ಟೆ ಮತ್ತು ಕೆ.ಎಮ್.ಕೆ ಮಂಜನಾಡಿ ಸನ್ಮಾನ ಪತ್ರ ವಾಚಿಸಿದರು.

ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ನಿರೂಪಿಸಿದರು. ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ ವಂದಿಸಿದರು.

ಹಿರಿಯ ಪತ್ರಕರ್ತರಾದ ಶಶಿಧರ ಪೊಯ್ಯತ್ತಬೈಲು, ಸತೀಶ್ ಕುಮಾರ್ ಪುಂಡಿಕಾಯಿ, ಛಾಯಾಗ್ರಾಹಕರಾದ ಡೆಮಟ್ರಿಯಸ್ ಜಿ.ಡಿಸೋಜ ಅವರಿಗೆ ರಾಜ್ಯೋತ್ಸವ ಗೌರವ ಸನ್ಮಾನ ಸಲ್ಲಿಸಲಾಯಿತು.