-ಆರೋಗ್ಯ, ಫಿಟ್ನೆಸ್ ಕುರಿತು ಜಾಗೃತಿಗಾಗಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೆಜಿಎಫ್ಇತ್ತೀಚಿನ ವರ್ಷಗಳಲ್ಲಿ ಮ್ಯಾರಥಾನ್ ಸ್ಪರ್ಧೆಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದಿವೆ. ಇವು ವಿವಿಧ ವಯೋಮಾನದ ಜನರನ್ನು ಆಕರ್ಷಿಸುತ್ತವೆ. ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಕಠಿಣ ತರಬೇತಿ, ಸಮರ್ಪಣೆ ಮತ್ತು ದೃಢಸಂಕಲ್ಪ ಅಗತ್ಯವಾಗಿದೆ. ಜೊತೆಗೆ ಇವು ಆರೋಗ್ಯ ಮತ್ತು ಫಿಟ್ನೆಸ್ ಕುರಿತು ಜಾಗೃತಿ ಮೂಡಿಸುತ್ತವೆ ಎಂದು ಶಾಸಕಿ ರೂಪಕಲಾ ಶಶಿಧರ್ ಹೇಳಿದರು. ನಗರದ ತಾಲೂಕು ಆಡಳಿತ ಸೌಧದಲ್ಲಿ ಬಿಯಾಂಡ್ ಎಕ್ಸಲೆನ್ಸ್ ಸ್ಪೋರ್ಟ್ಸ್ ಟ್ರಸ್ಟ್ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಜಿಎಫ್ ಹೆರಿಟೇಜ್ ಅಲ್ಟ್ರಾ-೨೦೨೬ ಮ್ಯಾರಾಥಾನ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕ್ರೀಡೆಗಳು ವ್ಯಕ್ತಿಯ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮ್ಯಾರಥಾನ್‌ಗಳು ಮತ್ತು ಅಥ್ಲೆಟಿಕ್ ಸ್ಪರ್ಧೆಗಳಂತಹ ಕ್ರೀಡಾಕೂಟಗಳು ದೈಹಿಕ ಕ್ಷಮತೆ, ಶಿಸ್ತು, ತಂಡದ ಸಹಕಾರ ಮತ್ತು ಸಮಾಜದ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತವೆ ಎಂದರು.ಹೆಚ್ಚಿನ ಜನರನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವ ಮೂಲಕ ಆರೋಗ್ಯಕರ, ಸದೃಢ ಮತ್ತು ಸಕ್ರಿಯ ಸಮಾಜವನ್ನು ನಿರ್ಮಿಸಬಹುದು. ಅಲ್ಟ್ರಾ ಮ್ಯಾರಥಾನ್‌ನಲ್ಲಿ ೧೮ ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಶಾಲಾ ಮಕ್ಕಳು ಮತ್ತು ೧೮ ವಯಸ್ಸಿಗಿಂತ ಹೆಚ್ಚಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಂತ ಮುಖ್ಯವಾದುದಾಗಿದೆ ಎಂದರು.ಎಸ್ಪಿ ಶಿವಾಂಶು ರಜಪೂತ್, ತಹಸೀಲ್ದಾರ್ ಹೆಚ್.ಜೆ.ಭರತ್, ಡಿವೈಎಸ್‌ಪಿ ಲಕ್ಷ್ಮಯ್ಯ, ಪೌರಾಯುಕ್ತ ಶ್ರೀಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸನ್, ಬಿಜೆಪಿ ಮುಖಂಡ ಕಮಲ್‌ನಾಥ್, ಬಿಯಾಂಡ್ ಎಕ್ಸ್ಲೆನ್ಸ್ ಸ್ಪೋರ್ಟ್ಸ್ ಟ್ರಸ್ಟ್‌ನ ಪ್ರೋಸಿಪ್ ಇದ್ದರು. ೨೨ಕೆಜಿಎಫ್೪ಮ್ಯಾರಾಥಾನ್ ಪೂರ್ವಭಾವಿ ಸಭೆಯಲ್ಲಿ ಶಾಸಕಿ ರೂಪಕಲಾ ಶಶಿಧರ್ ಮಾತನಾಡಿದರು.