ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಹಲವು ಗ್ರಾಮಗಳು ಘಟಪ್ರಭಾ ನದಿ ಪಾತ್ರಗಳ ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ನಂದಗಾಂವ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಢವಳೇಶ್ವರ, ನಂದಗಾಂವ, ಮಿರ್ಜಿ ಸೇರಿ ಹಲವು ಗ್ರಾಮಗಳು ಘಟಪ್ರಭಾ ನದಿ ಪಾತ್ರಗಳ ಗ್ರಾಮ ಮತ್ತು ಪಟ್ಟಣಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು ನಂದಗಾಂವ ಗ್ರಾಮಕ್ಕೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದರು.ನಿರಾಶ್ರಿತರ ಶಿಬಿರ ಮತ್ತು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅವರಿಗೆ ಊಟೋಪಚಾರ, ಶುದ್ಧ ಕುಡಿಯುವ ನೀರು, ಔಷಧೋಪಚಾರ ಒದಗಿಸಿ ಜನತೆಯ ಆರೋಗ್ಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ತಹಸೀಲ್ದಾರ್ ಗಿರೀಶ ಸ್ವಾದಿ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ಬಾಧಿತ ಹಳೆ ನಂದಗಾಂವ ಗ್ರಾಮದಲ್ಲಿಯ ಜನರನ್ನು ಸರ್ಕಾರಿ ಶಾಲೆ ಮತ್ತು ಇನ್ನಿತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ, ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.
ಡೆಂಘೀ ಭೀತಿ:ಡೆಂಘೀ ಸೇರಿದಂತೆ ಸೊಳ್ಳೆ ಹಾಗೂ ವಿವಿಧ ರೋಗರುಜಿನಗಳ ಕಾಟದ ಹಿನ್ನಲೆಯಲ್ಲಿ ಘಟಪ್ರಭಾ ನದಿ ತಟದ ನಂದಗಾಂವ ಮತ್ತು ಢವಳೇಶ್ವರ ಗ್ರಾಮಗಳಲ್ಲಿ ಆರೋಗ್ಯ ಸುರಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಆರೋಗ್ಯ ಸಿಬ್ಬಂದಿ, ಸಂರಕ್ಷಣಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೇರಿಯಾ, ಡೆಂಘೀ, ಸಾಂಕ್ರಾಮಿಕ ರೋಗಗಳು ಹರಡದಂತೆ ನೀರು ನಿಲ್ಲುವ, ಗಲಿಜು ಪ್ರದೇಶ, ಒಟ್ಟಾರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಹಾಗೂ ಧೂಮೀಕರಣ ನಡೆಸಲಾಗಿದೆ. ಯಾವುದೇ ಸಮಯದಲ್ಲಿ ನಾಗರಿಕರು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ಔಷಧಿ ಮತ್ತು ಜೀವ ರಕ್ಷಕ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಮಹಾಲಿಂಗಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಸಿ.ಎಂ.ವಜ್ಜರಮಟ್ಟಿ ತಿಳಿಸಿದರು.ವಿ.ಪರಿಷತ್ ಸದಸ್ಯೆ ಉಮಾಶ್ರೀ ಅವರು ನಂದಗಾಂವ ಗ್ರಾಮಕ್ಕೆ ಭೇಟಿ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೋವಿಂದ ಹೊಸೂರ, ಜ್ಯೋತೆಪ್ಪ ಕಪರಟ್ಟಿ, ಪ್ರಶಾಂತ ನಾಯಕ, ಸಂಜು ಬಾರುಕೋಲ, ಪ್ರಭು ತಂಬೂರಿ, ವಿಠ್ಠಲ್ ಹೊಸಮನಿ, ವಿಠ್ಠಲ ಮ್ಯಾಗಾಡಿ, ರಾಮಣ್ಣ ಹಟ್ಟಿ, ರಾಜು ಮುಲ್ಲಾ, ಕಲ್ಮೇಶ ಉಪ್ಪಾರ, ದಸ್ತಗೀರ ನದಾಫ, ಪುಟ್ಟು ಪೂಜೇರಿ, ರಿಯಾಜ್ ಪೆಂಡಾರಿ ಮುಂತಾದವರು ಇದ್ದರು.