ಸಾರಾಂಶ
ಮುಂಬೈ ಉತ್ತರ ಮತಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ರವರ ಪರವಾಗಿ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅಬ್ಬರದ ಪ್ರಚಾರ ಕೈಗೊಂಡರು
ಕನ್ನಡಪ್ರಭ ವಾರ್ತೆ ಕಲಬುರಗಿ
ಮುಂಬೈ ಉತ್ತರ ಮತಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ರವರ ಪರವಾಗಿ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅಬ್ಬರದ ಪ್ರಚಾರ ಕೈಗೊಂಡರು. ಮುಂಬೈನ ರಾವಲಪಾಡ ದಲ್ಲಿ ಆಯೋಜಿಸಿದ ಬಂಜಾರ ಸಮುದಾಯದವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪಿಯೂಷ್ ಗೋಯಲ್ ರವರು ತಮ್ಮ ಕಾರ್ಯ ಶೈಲಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಕೂಡ ಪಾತ್ರರಾಗಿದ್ದಾರೆ. ಇವತ್ತು ಕಲ್ಬುರ್ಗಿಯಲ್ಲಿ ಕೇಂದ್ರ ಸರ್ಕಾರದಿಂದ ಬೃಹತ್ ಜವಳಿ ಪಾರ್ಕ್ ಯೋಜನೆ ಲಭಿಸಿದ್ದರಲ್ಲಿ ಶ್ರೀ ಗೋಯಲ್ ರವರ ಪಾತ್ರ ಬಹುಮುಖ್ಯ ವಾಗಿದೆ. ಈ ಯೋಜನೆಯಿಂದ ನಮ್ಮ ಭಾಗದ ಜನರು ಮುಂಬೈಗೆ ವಲಸೆ ಹೋಗುವುದಕ್ಕೆಕಡಿವಾಣ ಬೀಳಲಿದೆ, ನಮ್ಮ ಭಾಗದ ಜನರಿಗೆ ಕಲ್ಬುರ್ಗಿಯಲ್ಲಿ ಉದ್ಯೋಗ ಸಿಗಲಿದೆ, ಅದಕ್ಕೆ ಇಂತಹ ಯೋಜನೆ ನೀಡಿದ ಗೋಯಲ್ ರವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕೃತಜ್ಞತೆ ಸಲ್ಲಿಸಬೇಕಾಗಿದೆ. ಅದಕ್ಕಾಗಿ ನಾವು ಬಿಜೆಪಿಯನ್ನು ಬೆಂಬಲಿಸಿ ಗೆಲುವಿಗಾಗಿ ಪಣತೊಡಬೇಕು ಎಂದು ಕರೆ ನೀಡಿದರು.
ಮುಂಬೈ ಉತ್ತರ ಮತಕ್ಷೇತ್ರದಲ್ಲಿ ಕಲಬುರಗಿ ಜಿಲ್ಲೆಯ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಉದ್ಯೋಗ ನಿಮಿತ್ತ ವಾಸವಾಗಿದ್ದಾರೆ. ಈ ಸಂದರ್ಭದಲ್ಲಿ ದಹಿಸರ್ ಕ್ಷೇತ್ರದ ವಿಧಾನಸಭೆ ಸದಸ್ಯರಾದ ಪ್ರಕಾಶ್ ಸುರ್ವೆ, ಇಲ್ಲಿನ ಖ್ಯಾತ ಉದ್ಯಮಿ ಹಾಗೂ ಜೇವರ್ಗಿಯ ಶ್ರೀ ಸಮಾಧಾನ ಪೂಜಾರಿ, ಉದ್ಯಮಿಗಳಾದ ಶಂಕರ್ ಜಾಧವ್, ಬಿಜೆಪಿ ಉಸ್ತುವಾರಿಗಳಾದ ಸುರೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.