ಸಾರಾಂಶ
ಕನಕಪುರ: ತಮ್ಮನ ಮಕ್ಕಳಿಂದಲೇ ದೊಡ್ಡಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕನಕಪುರ: ತಮ್ಮನ ಮಕ್ಕಳಿಂದಲೇ ದೊಡ್ಡಪ್ಪನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಾಲೂಕಿನ ದಿಂಬದಹಳ್ಳಿಯ ಮಾರೇಗೌಡ(60) ಮೇಲೆ ಆತನ ತಮ್ಮ ಮಲ್ಲಯ್ಯನ ಮಕ್ಕಳೇ ಸಾರಿಗೆ ಬಸ್ಸಿನೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ತಲೆ, ಕಾಲು, ಕೈಗಳಿಗೆ ಮೇಲೆ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಮಾರೇಗೌಡರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರೇಗೌಡನ ತಮ್ಮ ಮಲ್ಲಯ್ಯನ ಮಗ ಅಜಯ್‌ನನ್ನು ಕೆಲ ವರ್ಷಗಳ ಹಿಂದೆ ಮಾರೇಗೌಡ, ರಾಜಣ್ಣ, ಕಲ್ಪನಾ ಸೇರಿ ಕೊಲೆ ಮಾಡಿದ್ದರೆನ್ನಲಾಗಿದೆ.ಈ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ಹಿಂದಿರುಗಿ ಹೋಗುವ ವೇಳೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಲ್ಲಯ್ಯನ ಮಗ ಆದಿತ್ಯ ಹಾಗೂ ಆತನ ಸ್ನೇಹಿತ ಬೆಂಗಳೂರಿನ ಬನಶಂಕರಿ ನಿವಾಸಿ ಸಲ್ಮಾನ್ ನಗರದ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿದ್ದ ಮಾರೇಗೌಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದ ತಕ್ಷಣ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.