ಸಾರಾಂಶ
ಧಾರವಾಡದ ಮಾರುಕಟ್ಟೆಯಲ್ಲಿ ಬಿಸಾಡಿದ್ದ ಹೂ-ಹಣ್ಣು, ಬಾಳೆ ದಿಂಡುಗಳ ಕಸ, ಮುರಿದ ಕಬ್ಬಿನ ಗಳ, ಪ್ಲಾಸ್ಟಿಕ್ ಕವರ್, ಹರಿದ ಬಟ್ಟೆಯಲ್ಲಿ ವಿಲೇವಾರಿ ಮಾಡಲು ಪೌರಕಾರ್ಮಿಕರು ಹರಸಾಹಸ ಪಟ್ಟರು.
ಧಾರವಾಡ:
ಎಲ್ಲೆಂದರಲ್ಲಿ ಬೀಸಾಕಿದ ಮಾರಾಟವಾಗದೇ ಉಳಿದ ಹೂ-ಹಣ್ಣು, ಬಾಳೆ ದಿಂಡುಗಳ ಕಸ, ಮುರಿದ ಕಬ್ಬಿನ ಗಳ, ಪ್ಲಾಸ್ಟಿಕ್ ಕವರ್, ಹರಿದ ಬಟ್ಟೆ.ಇದು ದೀಪಾವಳಿ ಹಬ್ಬದ ನಿಮಿತ್ತ ಧಾರವಾಡದ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರಸ್ಥರು ಮಾಡಿದ ಅವಾಂತರ. ಹಬ್ಬದ ಆರಂಭದಲ್ಲಿ ಅದೇ ತಾನೆ ಕಿತ್ತು ತಂದ ಬಾಳೆ ದಂಡು, ಕಣ್ಣಿಗೆ ರಾಚುವಂತಹ ತರಹೇವಾರಿ ಹೂಗಳು ಹಬ್ಬ ಮುಗಿಯುವ ತಡ, ಬೇಡವಾಗಿ ರಸ್ತೆಯಲ್ಲಿಯೇ ಬಿಸಾಕಿ ಹೋಗಲಾಗಿದೆ.
ಸಾಮಾನ್ಯವಾಗಿ ಹಿಂದೂಗಳ ಹಬ್ಬ ಬಂತೆಂದರೆ ಸಾಕು ಹೂ-ಹಣ್ಣು, ಬಾಳೆ ದಿಂಡು, ಕಬ್ಬು, ದಂಟು ಹೀಗೆ ಹತ್ತಾರು ವಸ್ತುಗಳನ್ನು ಪೂಜೆ ಬಳಸಲಾಗುತ್ತದೆ. ಅದರಲ್ಲೂ ದೀಪಾವಳಿ ಸಂಪೂರ್ಣವಾಗಿ ಹೂ-ಹಣ್ಣುಗಳಿಂದಲೇ ನಡೆಯುವ ಹಬ್ಬ. ಹೀಗಾಗಿ ಹಬ್ಬದ ಮುನ್ನಾ ದಿನದಿಂದಲೇ ಪೂಜೆಗೆ ಬೇಕಾದ ವಸ್ತುಗಳ ಮಾರಾಟ ಶುರುವಾಗಿತ್ತು. ಆದರೆ, ಹಬ್ಬ ಮುಗಿದ ಬುಧವಾರ ರಾತ್ರಿ ಬೇಡವಾದ ಎಲ್ಲ ವಸ್ತುಗಳನ್ನು ಸುಭಾಸ ರಸ್ತೆ, ಟಿಕಾರೆ ರಸ್ತೆ ಸೇರಿದಂತೆ ಎಲ್ಲೆಡೆ ಬಿಸಾಕಿ ಹೋಗಲಾಗಿತ್ತು.ಸಾಮಾನ್ಯವಾಗಿ ನಿತ್ಯ ಒಂದೆರೆಡು ವಾಹನಗಳ ಕಸ ಆಗುವ ಬದಲು ಗುರುವಾರ ಹತ್ತಾರು ವಾಹನಗಳ ಮೂಲಕ ಧಾರವಾಡ ಮಾರುಕಟ್ಟೆಯಲ್ಲಿ ಕಸ ಒಯ್ಯುವ ಸ್ಥಿತಿ. ಬೆಳಗ್ಗೆ 6ರಿಂದಲೇ ಶುರುವಾದ ಕಸ ಎತ್ತುವ ಕಾರ್ಯಕ್ರಮ ಮಧ್ಯಾಹ್ನ 12ರ ವರೆಗೂ ನಡೆದಿತ್ತು. ಸ್ಥಳೀಯ ವ್ಯಾಪಾರಸ್ಥರು ಸೇರಿದಂತೆ ಸಮೀಪದ ಗ್ರಾಮಗಳಿಂದ ಹೂ-ಹಣ್ಣು, ಬಾಳೆ ದಿಂಡು, ಕಬ್ಬಿನ ಗಳ ತಂದು ಬೇಡವಾದ ನಂತರ ಎಸೆದು ಹೋಗಿದ್ದು, ಪಾಲಿಕೆ ಪೌರ ಕಾರ್ಮಿಕರು ಮಾತ್ರ ಕಸ ಎತ್ತುವಷ್ಟರಲ್ಲಿ ಸಾಕು ಸಾಕಾಗಿ ಹೋಗಿತ್ತು.
;Resize=(128,128))
;Resize=(128,128))
;Resize=(128,128))