ಧರ್ಮಸ್ಥಳ ವಿರುದ್ಧ ಸಲ್ಲದ ಆರೋಪ ಸಹಿಸಿಕೊಳ್ಳಲು ಆಗದು

| Published : Aug 14 2025, 01:00 AM IST

ಸಾರಾಂಶ

ಪ್ರಗತಿಪರರ ಸೋಗಿನಲ್ಲಿರುವವರು ವಿವಾದ ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳು ಮಾಡುತ್ತಿರುವುದು ಖಂಡನೀಯ. ಧರ್ಮಸ್ಥಳ ಸಂಸ್ಥೆ ಈ ಸಮಾಜಕ್ಕೆ ಏನೆಲ್ಲ ಕೊಡುಗೆ ನೀಡಿದೆ ಎಂಬುದು ದೇಶಕ್ಕೆ ತಿಳಿದಿದೆ.

ಕೊಪ್ಪಳ:

ಧರ್ಮಸ್ಥಳ ಕ್ಷೇತ್ರದ ಬಗ್ಗೆ ವಿನಾಕಾರಣ ಆಪಾದನೆ ಮಾಡಿದನೆ ಮಾಡಿದರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಗತಿಪರರ ಸೋಗಿನಲ್ಲಿರುವವರು ವಿವಾದ ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳು ಮಾಡುತ್ತಿರುವುದು ಖಂಡನೀಯ. ಧರ್ಮಸ್ಥಳ ಸಂಸ್ಥೆ ಈ ಸಮಾಜಕ್ಕೆ ಏನೆಲ್ಲ ಕೊಡುಗೆ ನೀಡಿದೆ ಎಂಬುದು ದೇಶಕ್ಕೆ ತಿಳಿದಿದೆ. ಆದರೆ, ಅನಾಮಿಕ ವ್ಯಕ್ತಿಯೊಬ್ಬ ಮಂಜುನಾಥನ ಸನ್ನಿದಿಯಲ್ಲಿ ನೂರಾರು ಹೆಣ ಹೂಳಲಾಗಿದೆ ಎಂದು ಹೇಳಿದ್ದರಿಂದ ಎಸ್‌ಐಟಿ ಸ್ಥಳ ಗುರುತಿಸಿ ಹೊರೆತೆಗೆಯುತ್ತಿದೆ. ಆದರೆ, ಈ ವರೆಗೂ ಒಂದೇ ಒಂದು ಅಸ್ಥಿ ಪಂಜರ ದೊರೆಕಿಲ್ಲ. ಎಸ್‌ಐಟಿ ಈಗೇ ಒಂದು ವರ್ಷ ಅಗೆದರೂ ಅಲ್ಲಿ ಏನು ಸಿಗುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಮರ್ಪಕವಾಗಿ ಪರಿಶೀಲಿಸದೆ ಎಸ್‌ಐಟಿ ರಚನೆಯಂತಹ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಕೆಲವರು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದಾಗಲೇ ಸರ್ಕಾರ ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕಿತ್ತು. ಯಾವುದೇ ತಪ್ಪು ಮಾಡದ ಧರ್ಮಸ್ಥಳ ಕ್ಷೇತ್ರದ ಮೇಲೆ ಬೇಡದ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡಿದಾಗ ಒಂದು ಮಾತು ಮಾತನಾಡದ ವ್ಯಕ್ತಿಗಳು, ಇಂದು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ನಾವೆಲ್ಲ ಆಸ್ಪದ ಕೊಡುವುದಿಲ್ಲ. ಧರ್ಮಸ್ಥಳ ಸಂಸ್ಥೆಯೊಂದಿಗೆ ನಾವು ಹಾಗೂ ನಮ್ಮ ಪಕ್ಷ ನಿಲ್ಲಲಿದೆ ಎಂದು ತಿಳಿಸಿದ್ದಾರೆ.