ಪುಲ್ವಾಮಾ ದಾಳಿ ಮಾಡಿದವರನ್ನು ಕೇಂದ್ರ ಸರ್ಕಾರ ಈವರೆಗೂ ಬಂಧಿಸಿಲ್ಲ: ಶಾಸಕ ಶ್ರೀನಿವಾಸ್

| Published : Apr 05 2024, 01:00 AM IST

ಪುಲ್ವಾಮಾ ದಾಳಿ ಮಾಡಿದವರನ್ನು ಕೇಂದ್ರ ಸರ್ಕಾರ ಈವರೆಗೂ ಬಂಧಿಸಿಲ್ಲ: ಶಾಸಕ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಪುಲ್ವಾಮಾ ದಾಳಿಯಾಳಿ ಐದು ವರ್ಷವೇ ಕಳೆದಿದದರೂ ಈವರೆಗೂ ಒಬ್ಬರನ್ನೂ ಹಿಡಿದಿರುವುದು ಶಿಕ್ಷೆ ಕೊಟ್ಟಿರುವ ಉದಾಹರಣೆಯೇ ಇಲ್ಲ ಎಂದು ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಪುಲ್ವಾಮಾ ದಾಳಿಯಾಳಿ ಐದು ವರ್ಷವೇ ಕಳೆದಿದದರೂ ಈವರೆಗೂ ಒಬ್ಬರನ್ನೂ ಹಿಡಿದಿರುವುದು ಶಿಕ್ಷೆ ಕೊಟ್ಟಿರುವ ಉದಾಹರಣೆಯೇ ಇಲ್ಲ ಎಂದು ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್ ತಿಳಿಸಿದ್ದಾರೆ.ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ರಾಜೀವ್ ಗಾಂಧಿ ಹೊಡೆದವರನ್ನು ಹಿಡಿದರು. ಆದರೆ ಇದುವರೆಗೂ ಪುಲ್ವಾಮ‌ ದಾಳಿ ಮಾಡಿದವರನ್ನು ಶಿಕ್ಷೆ ಕೊಟ್ಟಿರುವ ಉದಾಹರಣೆ ಇಲ್ಲ.ಘಟನೆ ‌ನಡೆದು ಐದು ವರ್ಷ ಆಗಿದೆ. ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.ರಾಮಮಂದಿರ ಇನ್ನೂ ಪೂರ್ತಿಯಾಗಿಲ್ಲ. ಆದರೂ ಓಪನ್ ಮಾಡಿರುವುದನ್ನು ನೋಡಿದರೆ ಇದು ಚುನಾವಣೆ ಗಿಮಿಕ್ ಎಂದ ಅವರು ಒಂದೊಂದು ಚುನಾವಣೆಗೆ ಒಂದೊಂದು ಉದ್ದೇಶ ಇಟ್ಟುಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ ಎಂದರು.ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು ಇದುವರೆಗೂ ಏನ್ ಕೆಲಸ ಮಾಡಿದ್ದಾರೆ. ಯಾವುದಾದರೂ ಒಂದು ಡ್ಯಾಮ್ ಕಟ್ಟಿದ್ದಾರಾ, ಆಸ್ಪತ್ರೆಗಳನ್ನು ಕಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಕೊರೋನಾ ಸಮಯದಲ್ಲಿ ಸಾವಿರಾರು ಜನರು ಸತ್ತರು, ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚೀಮಾರಿ ಹಾಕಿದ್ದರು. ಯಾರ ಬಳಿ ಹಣ ಇರುತ್ತೋ ಅವರ ಮೇಲೆ ರೇಡ್ ಮಾಡೋದು. ಅವರಿಂದ ಬಾಂಡ್ ರೂಪದಲ್ಲಿ ಹಣಗಳಿಸೊದು. ಇದೊಂದು ರೀತಿ ದರೋಡೆ ಅಲ್ವಾ ಎಂದು ಪ್ರಶ್ನಿಸಿದರು.