ಸಾರಾಂಶ
ಕೇಂದ್ರದ ಬಿಜೆಪಿ ಸರ್ಕಾರ ಯಾವತ್ತೂ ಬಡವರ ಪರವಾಗಿಲ್ಲ. ನಿಮ್ಮ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಾ ಬಂದಿದೆ. ಕೇವಲ ಭಾಷಣದಲ್ಲಿ ಮಾತ್ರ ನಿಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ: ಸಚಿವ ಶರಣಪ್ರಕಾಶ ಪಾಟೀಲ್
ಕನ್ನಡಪ್ರಭ ವಾರ್ತೆ ಗುರುಮಠಕಲ್
ಕೇಂದ್ರ ಸರಕಾರ 100 ರಿಂದ 150 ಶ್ರೀಮಂತರ 11 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆಯೇ ಹೊರತು ರೈತರ ಸಾಲ ಮನ್ನಾ ಮಾಡಿಲ್ಲ. ಬಡವರ ಕಲ್ಯಾಣಕ್ಕಾಗಿ ಯೋಜನೆ ತಂದಿಲ್ಲ. ಎಲ್ಲರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರಕಾರ ಮಾತ್ರ ಗ್ಯಾರಂಟಿ ಯೋಜನೆ ತಂದು ಅನುಕೂಲ ಕಲ್ಪಿಸಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದರು.ಸಮೀಪದ ಮೆದಕ್ ಗ್ರಾಮದಲ್ಲಿ ಕಾಂಗ್ರೆಸ್ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರ ಯಾವತ್ತೂ ಬಡವರ ಪರವಾಗಿಲ್ಲ. ನಿಮ್ಮ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುತ್ತಾ ಬಂದಿದೆ. ಕೇವಲ ಭಾಷಣದಲ್ಲಿ ಮಾತ್ರ ನಿಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ನೀಡಿದ ಭರವಸೆಯಂತೆ 5 ಗ್ಯಾರಂಟಿ ಜಾರಿಗೆ ತಂದಿದೆ ಎಂದರು.ಬಿಜೆಪಿ ಸರ್ಕಾರ ರೈತರ ಪರ, ದೇಶದ ಅಭಿವೃದ್ಧಿ ಯೋಜನೆ ಜಾರಿಗೆ ತಂದಿಲ್ಲ. ಅವರ ಬೆಣ್ಣೆ ಮಾತುಗಳಿಗೆ ಲೋಕಸಭಾ ಚುನಾವಣೆ ವೇಳೆ ಮರಳು ಆಗದಿರಿ, ಅಭಿವೃದ್ಧಿಗೆ ಒತ್ತು ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿ ಎಂದು ಮನವಿ ಮಾಡಿದರು.
ರಾಜ್ಯದಿಂದ ಹೆಚ್ಚಿನ ತೆರಿಗೆ ಪಡೆದುಕೊಂಡು ನಮಗೆ ಹೆಚ್ಚಿನ ಪಾಲು ನೀಡದೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ.. ನಮ್ಮ ರಾಜ್ಯದ ಅಭಿವೃದ್ಧಿ ಕಡೆಗಣಿಸಿದೆ. ನಮ್ಮ ತೆರಿಗೆ ಹಣವನ್ನು ಪಡೆಯಲು ನಾವೇ ಬೇಡಿಕೊಳ್ಳುವ ದುಸ್ಥಿತಿ ಬಂದಿದೆ. ಇದಕ್ಕಾಗಿ ನಮ್ಮ ರಾಜ್ಯ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಆಯ್ಕೆ ಉತ್ತಮವಾಗಿದೆ ಎಂಬುದನ್ನು ಮತದಾರರು ಮನಗಾಣಬೇಕಾಗಿದೆ ಎಂದು ತಿಳಿಸಿದರು.ಜಿ.ಪಂ. ಮಾಜಿ ಸದಸ್ಯ ದಾಮೋದರ್ ರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೆಶಕ ಶಂಕರಭೂಪಾಲರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಂದ್ರ ನಂದಿಗಾಮ, ಯಾಕುಬ್, ಹೇಮ್ಲ ನಾಯಕ್, ಸದಾಶಿವರೆಡ್ಡಿ, ಗೋಪಾಲರೆಡ್ಡಿ, ಭೀಮಶಪ್ಪ ನಾಯಕಿನ್, ರಾಮಲಿಂಗಪ್ಪ, ಕಾನಗಡ್ಡ ಗ್ರಾಪಂ ಅಧ್ಯಕ್ಷ ರವಿಕುಮಾರ ಅವಂಟಿ, ಲಿಂಗಂಪಲ್ಲಿ ಗ್ರಾಪಂ ಅಧ್ಯಕ್ಷ ಶಿವಕುಮಾರ, ಪರ್ವತರೆಡ್ಡಿ, ಭೀಮರೆಡ್ಡಿ, ಶಿವಕುಮಾರ್ ಅವಂಟಿ, ವೆಂಕಟರೆಡ್ಡಿ ಯಾನಗುಂದಿ ಇತರರಿದ್ದರು.
ಕೇಂದ್ರ ಸರ್ಕಾರ ರೈತರಿಗೆ ವಂಚನೆ ಮಾಡುತ್ತಾ ಬಂದಿದೆ. ಶ್ರೀಮಂತರ ಸಾಲ ಮಾಡುವ ಬದಲು ಅವರಿಗೆ ಮಾಡಿದ ಸಾಲ ಮನ್ನಾದಲ್ಲಿ ಮುಕ್ಕಾಲು ಭಾಗ ಹಣ ಬಳಸಿದ್ದರೂ ಎಲ್ಲ ರೈತರ ಸಾಲ ಮನ್ನಾ ಆಗುತಿತ್ತು.- ಡಾ. ಶರಣಪ್ರಕಾಶ್ ಪಾಟೀಲ್, ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು