ಸಾರಾಂಶ
ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ, ಸಭಾಪತಿಗೆ ಮನವಿ ಸಲ್ಲಿಸಿದರು.
ಮುಂಡಗೋಡ: ಲೋಕಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮತ್ತು ಬೆಳಗಾವಿ ಸುವರ್ಣ ವಿಧಾನ ಪರಿಷತ್‌ನಲ್ಲಿ ಹೆಣ್ಣುಮಗಳಿಗೆ ಅಶ್ಲೀಲ ಪದ ಬಳಸಿ ಅಪಮಾನ ಮಾಡಿದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ, ಸಭಾಪತಿಗೆ ಮನವಿ ಸಲ್ಲಿಸಿದರುಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕೀರಪ್ಪ, ಜಿಲ್ಲಾ ಸಂಚಾಲಕ ಗೋಪಾಲ ನಡಕಿನಮನಿ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಸಂತೋಷ ಕಟ್ಟಿಮನಿ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಸಂಗೀತಾ ವಾಸ್ಕೋರೆ, ತಾಲೂಕು ಸಂಚಾಲಕ ಜೂಜೆ ಸಿದ್ದಿ, ಪ್ರಭು ಅರಶಿಣಗೇರಿ, ರಾಜು ಬೋವಿ, ವಿರುಪಾಕ್ಷಯ್ಯ ಹಿರೇಮಠ ಮುಂತಾದವರಿದ್ದರು.ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ದಾಂಡೇಲಿ: ಡಾ. ಬಿ.ಆರ್. ಅಂಬೇಡ್ಕರ ಅವರ ಬಗ್ಗೆ ಸಂಸತ್ತಿನಲ್ಲಿ ಲಘುವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ ಶಾ ಅವರ ರಾಜೀನಾಮೆಗೆ ಆಗ್ರಹಿಸಿ ದಲಿತಪರ ಸಂಘಟನೆಳು ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ವತಿಯಿಂದ ಸೋಮವಾರ ಸಂಜೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಾಹಿತಿತ್ಯಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಭೀಮಾಶಂಕರ ಅಜನಾಳ, ದಲಿತ ಸಾಹಿತಿತ್ಯ ಪರಿಷತ್ತಿನ ಸಂಚಾಲಕ ಗೋವಿಂದ ಮೇಲಗೇರಿ, ಯುವ ಮುಖಂಡ ಜಾಫರ ಮಾಸನಕಟ್ಟಿ ಮಾತನಾಡಿ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ತಕ್ಷಣ ರಾಜೀನಾಮೆ ನೀಡಬೇಕು. ಡಾ. ಅಂಬೇಡ್ಕರ ಅವಮಾನಿಸಿದವರು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಬಾರದು. ಕೂಡಲೇ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಸತೀಶ ನಾಯ್ಕ, ರವಿ ಮಾಳ್ಕರಿ, ಶ್ರೀಕಾಂತ ಅಸೋಧೆ, ಡಿ. ಸ್ಯಾಮಸನ್, ದಾದಾಪೀರ ನದಿಮುಲ್ಲಾ, ರಿಯಾಜ್ ಸಯ್ಯದ, ಗೌಸ ಖತಿಬ್, ಮಜೀದ ಖಾನ ಸನದಿ, ವಿಜಯ ಚವ್ಹಾಣ, ರಾಜಶೇಖರ ನಿಂಬಾಳ್ಕರ ಇತರರು ಇದ್ದರು.