ಪ್ರಯಾಣದ ಮಧ್ಯೆ ನವಲೂರಿನ ಬಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗಮನ ಸೆಳೆದಿದ್ದು, ತಮ್ಮ ವಾಹನವನ್ನು ನಿಲ್ಲಿಸಿ ಪೇರಲ ಹಣ್ಣು ಸವಿ ಸವಿದರು.
ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ರಿಲಾಕ್ಸ್ ಮೂಡ್‌ನಲ್ಲಿ ಭಾನುವಾರ ಧಾರವಾಡದ ಕಾರ್ಯಕ್ರಮಗಳಿಗೆ ತೆರಳುವ ಮಾರ್ಗ ಮಧ್ಯೆ ಇಲ್ಲಿಯ ಪ್ರಸಿದ್ಧ ನವಲೂರು ಪೇರಲ ಹಣ್ಣುಗಳನ್ನು ಸವಿದರು. ಬಳಿಕ ತಾವು ತಿಂದ ಹಣ್ಣುಗಳಿಗೆ ತಾವೇ ಕ್ಯು ಆರ್ ಕೋಡ್ ಬಳಸಿ ಹಣವನ್ನು ಖುದ್ದಾಗಿ ನೀಡಿದರು.
ಪ್ರಯಾಣದ ಮಧ್ಯೆ ವೆಲ್ಲೂರಿನ ಬಳಿ ಸಚಿವರ ಗಮನ ಸೆಳೆದಿದ್ದು, ತಮ್ಮ ವಾಹನವನ್ನು ನಿಲ್ಲಿಸಿ ಹಣ್ಣಿನ ಸವಿ ಸವಿದರು. ನವಲೂರಿನ ಪೇರಲವೇ ಹೆಚ್ಚು ರುಚಿ. ಬೇಂದ್ರೆಯವರೂ ಇದನ್ನು ಹೇಳಿದ್ದಾರೆ ಎಂದು ಅಭಿಮಾನಗೊಂಡರು.ಈ ಸಮಯದಲ್ಲಿ ಪೇರಲ ಹಣ್ಣು ಬೆಳೆದ ರೈತ ಹಾಗೂ ಇನ್ನೊಬ್ಬ ರೈತ ಮಹಿಳೆ ಸಚಿವರೊಂದಿಗೆ ಮಾತನಾಡಿ ಇದು ತಮ್ಮ ತಂದೆಯ ಕಾಲದಿಂದ ಇದ್ದ ತೋಟದಿಂದ ತಂದ ಹಣ್ಣಾಗಿದ್ದು, ಜವಾರಿಯೇ ಹೆಚ್ಚು ರುಚಿ ಎನ್ನುತ್ತಾ ತಮ್ಮ ತೋಟದ ಹಣ್ಣುಗಳ ಪರಿಚಯ ಮಾಡಿದರು. `ಹೈಬ್ರಿಡ್ ಆಸೆಯಲ್ಲಿ ಜವಾರಿಗಳು ಕಾಣೆಯಾಗೈತ್ರಿ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಸಿದ್ಧ ನವಲೂರು ಪೇರಲ ಹಣ್ಣುಗಳನ್ನು ಸವಿದರು.ಪೂಜ್ಯ ಬಾಪು ನರೇಗಾ ಎಂದು ಬದಲಿಸಿದರೆ ಕಾಂಗ್ರೆಸಿಗೇನು ಸಮಸ್ಯೆ?
ಹುಬ್ಬಳ್ಳಿ: ಮನರೇಗಾ ಯೋಜನೆಗೆ ಪೂಜ್ಯ ಬಾಪುನರೇಗಾ ಎಂದು ಬದಲಾವಣೆ ಮಾಡಿದರೆ ಕಾಂಗ್ರೆಸ್‌ಗೆ ಏನು ಸಮಸ್ಯೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ಷೇಪಿಸಿದರು.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಪೂಜ್ಯರಲ್ಲವೇ? ಉದ್ಯೋಗ ಖಾತ್ರಿ ಯೋಜನೆಗೆ ಮೊದಲು ನರೇಗಾ ಹೆಸರಿತ್ತು. ಮೂರು – ನಾಲ್ಕು ವರ್ಷಗಳ ನಂತರ ಮಹಾತ್ಮ ಗಾಂಧಿ ನರೇಗಾ ಅಂತ ಬರಲಾಯಿತು. ಇದೀಗ ಪೂಜ್ಯ ಬಾಪೂಜಿ ಅಂತ ಹೆಸರು ಬದಲಾಯಿಸಿದ್ದೇವೆ. ಹೆಸರು ಬದಲಾದರೆ ಇವರಿಗೇನು ಸಮಸ್ಯೆ ಎಂದು ಪ್ರಶ್ನಿಸಿದರು.ಹೊಸದಿಲ್ಲಿಯಲ್ಲಿ ವೋಟ್ ಚೋರಿ ಹೋರಾಟಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜೋಶಿ, ವೋಟ್ ಚೋರಿ ಎನ್ನುವುದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸೃಷ್ಟಿ. ರಾಹುಲ್ ಗಾಂಧಿ ಅವರೇ ಬೋಗಸ್ ಎನ್ನುವುದು ಜನತೆಗೆ ಅರ್ಥವಾಗಿದೆ ಎಂದು ವ್ಯಂಗ್ಯವಾಡಿದರು.ಮತಪಟ್ಟಿಯ ಶುದ್ಧೀಕರಣಕ್ಕಾಗಿ ಮತಪಟ್ಟಿಯ ಪರಿಷ್ಕರಣೆ ಮಾಡಲಾಗುತ್ತಿದೆ. ನಾವು ಯಾರ ಹೆಸರನ್ನು ವಿನಾಕಾರಣ ತೆಗೆಯಲು ಹೇಳುತ್ತಿಲ್ಲ. ಕೆಲವರದ್ದು ಎರಡೆರಡು ಕಡೆ ಮತಪಟ್ಟಿಯಲ್ಲಿ ಹೆಸರಿದೆ. ಕೆಲವರ ಹೆಸರನ್ನು ಅನಧಿಕೃತವಾಗಿ ಮತ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತದ ನಾಗರಿಕರು ಮಾತ್ರ ಮತದಾನದ ಹಕ್ಕು ಪಡೆಯುತ್ತಾರೆ. ಯಾರದ್ದಾದರೂ ಹೆಸರು ತೆಗೆಯುವುದು ಅಷ್ಟು ಸುಲಭವಲ್ಲ. ಮೂರು ಹಂತದಲ್ಲಿ ಮತ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದರು.
ಕೇರಳ ಚುನಾವಣೆ
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, ವಿಜಯ ಶಕೆ ಆರಂಭಗೊಂಡಿದೆ. ಕೇರಳ ರಾಜ್ಯ ರಾಜಧಾನಿಯಲ್ಲಿ ಗೆದ್ದಿದ್ದೇವೆ. ಜನ ಕೊಟ್ಟಿರುವ ಆಶೀರ್ವಾದ ಮುಂದಿನ ದಿನಗಳಲ್ಲಿಯೂ ಬಿಜೆಪಿ ಪರವಾಗಿ ಇರಲಿದೆ ಎಂದು ಆಶಯ ವ್ಯಕ್ತಪಡಿಸಿದರು.