ಸೆಲ್ಕೋಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ

| Published : Jul 10 2025, 12:49 AM IST

ಸೆಲ್ಕೋಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಗ್ಲೆಂಡ್‌ನ ಪ್ರತಿಷ್ಠಿತ ‘ಗ್ರೀನ್ ಆಸ್ಕರ್ - ಐಶ್ಡನ್ ಪ್ರಶಸ್ತಿ’ಯನ್ನು 3ನೇ ಬಾರಿ ಪಡೆದುಕೊಂಡ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಇತ್ತೀಚೆಗಷ್ಟೇ ಇಂಗ್ಲೆಂಡ್‌ನ ಪ್ರತಿಷ್ಠಿತ ‘ಗ್ರೀನ್ ಆಸ್ಕರ್ - ಐಶ್ಡನ್ ಪ್ರಶಸ್ತಿ’ಯನ್ನು 3ನೇ ಬಾರಿ ಪಡೆದುಕೊಂಡ ಸೆಲ್ಕೋ ಸೋಲಾರ್ ಸಂಸ್ಥೆಯ ಸಾಧನೆಯನ್ನು ಕೇಂದ್ರ ಪರ್ಯಾಯ ಇಂಧನ ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿ, ಅಭಿನಂದಿಸಿದ್ದಾರೆ.

ವಿಕೇಂದ್ರೀಕೃತ ಸೌರ ವಿದ್ಯುತ್ ಬಳಕೆಯಿಂದ ಬಡತನ ನಿವಾರಿಸುವಲ್ಲಿ ಸೆಲ್ಕೋ ಸಂಸ್ಥೆಯ ನಿಲುವು ಹಾಗು ಕಳೆದ 3 ದಶಕಗಳಲ್ಲಿ ಸಂಸ್ಥೆ ಸಾಗುತ್ತಿರುವ ರೀತಿಯನ್ನು ಪ್ರಸ್ತಾಪಿಸಿದ ಅವರು, ಮಂಗಳ‍ವಾರ ದೆಹಲಿಯಲ್ಲಿ ತಮ್ಮ ಕಚೇರಿಯಲ್ಲಿ ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್ ಭಾಸ್ಕರ್ ಹೆಗಡೆ ಹಾಗೂ ಡಿಜಿಎಂ ಗುರುಪ್ರಕಾಶ ಶೆಟ್ಟಿ ಅವರನ್ನು ಐಶ್ಡನ್ ಪ್ರಶಸ್ತಿಗಾಗಿ ಅಭಿನಂದಿಸಿದರು.

ಸಂಸ್ಥೆಯ ಸಂಸ್ಥಾಪಕ ಹರೀಶ್ ಹಂದೆ ಅವರ ವೈಜ್ಞಾನಿಕ ದೃಷ್ಟಿಕೋನ ಹಾಗೂ ದೂರದೃಷ್ಟಿಯ ಚಿಂತನೆಗಳನ್ನು ಶ್ಲಾಘಿಸಿದ ಸಚಿವರು, ಸೆಲ್ಕೋಕ್ಕೆ ಸಂದ ಪ್ರಶಸ್ತಿ ನಮ್ಮ ರಾಜ್ಯಕ್ಕೆ ದೇಶಕ್ಕೆ ಅಭಿಮಾನದ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಂಧನ ಕ್ಷೇತ್ರದ ಸ್ವಾವಲಂಬಿತನಕ್ಕೆ ಹಾಗೂ ಆತ್ಮನಿರ್ಭರ ತತ್ವಕ್ಕೆ ಸೆಲ್ಕೋ ಕೆಲಸ ಪೂರಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋಹನ್ ಹೆಗಡೆ ಮಾತನಾಡಿ, ಜೀವನಾಧಾರ ಉತ್ಪನ್ನಗಳು ಸೌರವಿದ್ಯುತ್ತಿನಿಂದ ಅಥವಾ ಪರ್ಯಾಯ ಶಕ್ತಿಯಿಂದ ಉತ್ಪಾದಿಸುವುದು, ವಿದ್ಯುತ್ ಉಳಿತಾಯ, ಉದ್ಯೋಗ ಸೃಷ್ಟಿಯಿಂದ ಸ್ವಾವಲಂಬಿ ಬದುಕು ಸೆಲ್ಕೋದ ಮೂಲಚಿಂತನೆಯಾಗಿದೆ ಎಂದರು.