ಶ್ರೀರಂಗಪಟ್ಟಣ ಐತಿಹಾಸಿಕ, ಇತಿಹಾಸವುಳ್ಳ ಕೋಟೆ ಪಟ್ಟಣದಲ್ಲಿ ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ ಹಾಳು ಕೊಂಪೆಯಾಗಿದೆ. ಯಾವುದೇ ಎಕ್ಸ್‌ಪ್ರೆಸ್ ರೈಲುಗಾಡಿಗಳು ನಿಲ್ಲಿಸುತ್ತಿಲ್ಲ. ನೀವು ವೀಕ್ಷಣೆ ಮಾಡಿ ಸುಮಾರು ತಿಂಗಳು ಕಳೆದರೂ ಇದುವರೆಗೂ ಒಂದು ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಮಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಂಸದರೂ ಆದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಐತಿಹಾಸಿಕ ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗುವ ಜೊತೆಗೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕೈಗಾರಿಕೋದ್ಯಮ ಸ್ಥಾಪನೆಗೆ ಆದ್ಯತೆ ನೀಡಬೇಕು ಎಂದು ರೈತ ನಾಯಕ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿರುವುದು ಸ್ವಾಗತಾರ್ಹವಾಗಿದೆ. ಅದು ಮನವಿಯಾಗಿಯೇ ಉಳಿಯಬಾರದು, ಅದು ಯಥಾವತ್ತಾಗಿ ಕಾರ್ಯಗತವಾದರೆ ಮಾತ್ರ ಕ್ಷೇತ್ರದ ಜನತೆಗೆ ಹಾಗೂ ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ಐತಿಹಾಸಿಕ, ಇತಿಹಾಸವುಳ್ಳ ಕೋಟೆ ಪಟ್ಟಣದಲ್ಲಿ ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣ ಹಾಳು ಕೊಂಪೆಯಾಗಿದೆ. ಯಾವುದೇ ಎಕ್ಸ್‌ಪ್ರೆಸ್ ರೈಲುಗಾಡಿಗಳು ನಿಲ್ಲಿಸುತ್ತಿಲ್ಲ. ನೀವು ವೀಕ್ಷಣೆ ಮಾಡಿ ಸುಮಾರು ತಿಂಗಳು ಕಳೆದರೂ ಇದುವರೆಗೂ ಒಂದು ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.ಐತಿಹಾಸಿಕ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಪ್ರವಾಸಿ ತಾಣಗಳು ಹೆಚ್ಚಾಗಿದ್ದು, ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಗೆ ಆದ್ಯತೆ ನೀಡಿ ದೇಶ- ವಿದೇಶಗಳಿಂದ ಬರುವ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ನ್ಯಾಯ ಒದಗಿಸುವಂತಾಗುತ್ತದೆ ಎಂದು ಕೋರಿದ್ದಾರೆ.
ಮಂಡ್ಯ ಸಂಸದರಾಗಿ ಕೇಂದ್ರದ ಕೈಗಾರಿಕಾ ಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಹಲವು ವರ್ಷ ಕಳೆಯುತ್ತಾ ಬಂದಿದ್ದರೂ ದೊಡ್ಡ ಮಟ್ಟದ ಯೋಜನೆ, ಕೈಗಾರಿಕೋದ್ಯಮ ತರುವುದರಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಯುವಕ-ಯುವತಿಯರಿಗೆ ದೊಡ್ಡ ತಲೆನೋವಾಗಿದೆ. ಜಿಲ್ಲೆಯ ಜನರು ಸಂಕಷ್ಟ ಸ್ಥಿತಿಯಲ್ಲಿ ತಮ್ಮನ್ನು ಕೈಹಿಡಿದಿದ್ದಾರೆ. ಇದರಿಂದ ಕೇಂದ್ರದ ಮಂತ್ರಿಯೂ ಕೂಡ ಆಗಿದ್ದೀರಿ. ಜಿಲ್ಲೆಯ ರೈತರ, ಜನಸಾಮಾನ್ಯರ, ದೀನ ದಲಿತರ, ಮಹಿಳೆಯರ, ಅಲ್ಪಸಂಖ್ಯಾತರ, ಕಾರ್ಮಿಕರ, ಶೋಷಿತ ಸಮುದಾಯ ಸೇರಿದಂತೆ ಎಲ್ಲಾ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟು ಕೊಂಡು ಜಿಲ್ಲೆಗೆ ಕ್ಷೇತ್ರಕ್ಕೆ ದೊಡ್ಡಮಟ್ಟದ ಯೋಜನೆಗಳನ್ನು ಕಲ್ಪಿಸಬೇಕು ಎಂದು ಪಾಪು ಆಗ್ರಹಿಸಿದ್ದಾರೆ.