ಸಾರಾಂಶ
ಹೊಸಕೋಟೆ: ಹಿಂದೂ-ಮುಸ್ಲಿಂ ಯಾವುದೇ ಹಬ್ಬಗಳಲ್ಲಿ ಎಲ್ಲಾ ಕೋಮಿನವರು ಭಾವೈಕ್ಯತೆ, ಸಾಮರಸ್ಯ ಕಾಪಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಹಿಂದೂ-ಮುಸ್ಲಿಂ ಯಾವುದೇ ಹಬ್ಬಗಳಲ್ಲಿ ಎಲ್ಲಾ ಕೋಮಿನವರು ಭಾವೈಕ್ಯತೆ, ಸಾಮರಸ್ಯ ಕಾಪಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದಲ್ಲಿ ಮುಸ್ಲಿಂ ಮುಖಂಡರು ಆಯೋಜಿಸಿದ್ದ ಈದ್-ಮಿಲಾದ್ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು, ಇಸ್ಲಾಂ ಧರ್ಮದಲ್ಲಿ ಸಾಕಷ್ಟು ಮಹತ್ವ ಪಡೆದಿರುವ ಮಹಮದ್ ಪೈಗಂಬರ್ ಅವರ ಜಯಂತ್ಯುತ್ಸವದ ಅಂಗವಾಗಿ ಈದ್-ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಅನೇಕ ಸಂತರು ಸಮಾಜದ ಬದಲಾವಣೆಗೆ ಅನುಸರಿದ ಭಕ್ತಿ ಮಾರ್ಗದ ರೀತಿ ಪೈಗಂಬರರು ಕೂಡ ಸಮಾಜದಲ್ಲಿ ಧರ್ಮ ಜಾಗೃತಿ ಜೊತೆಗೆ ಧರ್ಮ ಸಮಾನತೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ. ಆದ್ದರಿಂದ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜಯಂತ್ಯುತ್ಸವವನ್ನು ಧರ್ಮಾತೀತವಾಗಿ ಭಾವೈಕ್ಯತೆಯಿಂದ ಆಚರಿಸಬೇಕು ಎಂದರು.ಜಾಮಿಯಾ ಮಸೀದಿ ಸದಸ್ಯ ಸಯ್ಯದ್ ನವಾಜ್ ಮಾತನಾಡಿ, ಈದ್-ಮಿಲಾದ್ ಹಬ್ಬವನ್ನು ನಗರದಲ್ಲಿ ಎಲ್ಲರೂ ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಪಂಗಡದವರು ಆಚರಣೆ ಮಾಡುವ ಹಬ್ಬ ಇದಾಗಿದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಜೊತೆಗೆ ಪೈಗಂಬರರ ಹುಟ್ಟಿದ ದಿನ ಯಾರೊಬ್ಬರು ಉಪವಾಸ ಇರಬಾರದು ಎಂಬ ದೃಷ್ಟಿಯಿಂದ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡುವುದು ವಾಡಿಕೆ ಎಂದರು.
ಧರ್ಮಗುರುಗಳಾದ ಸಯ್ಯದ್ ರಹಮತ್ ಉಲ್ಲಾ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಹೆಚ್.ಎಂ.ಸುಬ್ಬರಾಜ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ನಗರಸಭೆ ಸದಸ್ಯ ಗೌತಮ್, ಮುಖಂಡ ವಿಜಯ್ ಕುಮಾರ್, ಎಚ್.ಎಸ್.ಗೋಪಾಲ್, ಸದಸ್ಯ ಸಯ್ಯದ್ ನವಾಜ್, ವಕ್ತ್ ಬೋರ್ಡ್ ಮಾಜಿ ಅದ್ಯಕ್ಷ ನಿಸಾರ್ ಅಹಮದ್, ಮುಖಂಡರಾದ ಇಚಿತಿಯಾಜ್ ಪಾಷ, ಸಗೀರ್ ಅಹಮದ್, ಅಂಜಾದ್, ಸಿರಾಜ್, ಚಾಂದ್ ಪಾಷ, ಶಂಶೀರ್, ಅಫ್ಜಲ್, ರಾಗಿ ಬಾಬು, ಅಖಿಲ್ ಅಹಮದ್, ಅಜು, ಪರ್ವೆಜ್, ಇಮ್ರಾನ್, ಟಿಪ್ಪು ಇತರರು ಹಾಜರಿದ್ದರು.ಫೋಟೋ: 5 ಹೆಚ್‌ಎಸ್‌ಕೆ 2
ಹೊಸಕೋಟೆಯ ಹಳೆ ಬಸ್ ನಿಲ್ದಾಣದ ಆಯೋಜಿಸಿದ್ದ ಈದ್-ಮಿಲಾದ್ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಅವರನ್ನು ಮುಸ್ಲಂ ಮುಖಂಡರು ಅಭಿನಂದಿಸಿದರು.