ಗಣೇಶೋತ್ಸವ ಆಚರಣೆಯಲ್ಲಿ ಭಾವೈಕ್ಯತೆ

| Published : Aug 31 2025, 02:00 AM IST

ಸಾರಾಂಶ

ಇಲ್ಲಿನ ಪ್ರವಾಸಿ ಮಂದಿರದ ಬಳಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್‌ನವರು ಹಿಂದೂ, ಮುಸ್ಲಿಂ, ಜೈನ ಸಮುದಾಯ ಸೇರಿದಂತೆ ಇತರರು ಸೌಹಾರ್ದಯುತವಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಖಾಸಗಿ ವಾಹನ ಚಾಲಕರು, ಮಾಲೀಕರಿಂದ ಗಣೇಶ ಹಬ್ಬ ಆಚರಣೆಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಪ್ರವಾಸಿ ಮಂದಿರದ ಬಳಿ ಕರುನಾಡ ಸಾರಥಿಗಳ ಸೈನ್ಯ ಟ್ರೇಡ್ ಯೂನಿಯನ್‌ನವರು ಹಿಂದೂ, ಮುಸ್ಲಿಂ, ಜೈನ ಸಮುದಾಯ ಸೇರಿದಂತೆ ಇತರರು ಸೌಹಾರ್ದಯುತವಾಗಿ ಗಣೇಶೋತ್ಸವ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ.

ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರ ಈ ಸಂಘಟನೆ ಹಿಂದೂ, ಮುಸ್ಲಿಂ ಹಾಗೂ ಜೈನರು ಸೇರಿದಂತೆ ಒಟ್ಟು 72 ಸದಸ್ಯರನ್ನು ಹೊಂದಿದೆ. ತಾಲೂಕು ಘಟಕದ ಅಧ್ಯಕ್ಷ ಬಾಣದ ಮಹ್ಮದ ರಫಿ ಅವರ ನೇತೃತ್ವದಲ್ಲಿ ಪ್ರತಿ ಸದಸ್ಯರು ವಂತಿಗೆ ಸಂಗ್ರಹಿಸಿ, 3ನೇ ವರ್ಷದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದರು.

ಗಣೇಶ ಮೂರ್ತಿಗೆ ಧಾರ್ಮಿಕ ವಿಧಿ-ವಿಧಾನದಂತೆ ಪೂಜೆ ಸಲ್ಲಿಸಿ, ಪ್ರತಿಷ್ಠಾಪಿಸಿದ ಆನಂತರದಲ್ಲಿ ಸಂಘಟನೆಯ ಅಧ್ಯಕ್ಷ ಬಿ. ಮಹ್ಮದ್ ರಫಿ, ರಾಜ್ಯ ಉಪಾಧ್ಯಕ್ಷ ಎಚ್.ಡಿ. ಅಜಿತ್ ಜೈನ್ ಮಹಾಮಂಗಳಾರತಿ ಮಾಡಿದರು.

ಯೂನಿಯನ್ ಪದಾಧಿಕಾರಿಗಳಾದ ಹಣ್ಣಿ ಸುರೇಶ, ಜಿ. ನಾಗೇಂದ್ರಪ್ಪ, ಜಾತಪ್ಪ, ಬಿ. ನಿಂಗಪ್ಪ, ರವಿಕುಮಾರ್, ಬಾವಾಜಿ ಸಮೀರ್, ಟಿ.ಪಿ. ಮಂಜುನಾಥ, ಅಕ್ಬರ್ ದೊಡ್ಡಮನಿ, ಹಮೀರ್, ಹಕ್ಕಂಡಿ ಮಲ್ಲಿಕ್, ಅಲಿ, ಬಾರಿಕರ ವಿಜಯಕುಮಾರ್, ಪ್ರಹ್ಲಾದ ಬುಜ್ಜಿ, ಅನ್ವರ್, ನವೀನ್, ಬಸಾಫುರ ಸತೀಶ ಇತರರಿದ್ದರು.ಭಾವೈಕ್ಯತೆ ಸಾರುವ ಗಣಪ

ಕುರುಗೋಡು ಪಟ್ಟಣದ ರೈತ ಸಮುದಾಯ ಭವನದಲ್ಲಿ ಸ್ನೇಹಿತರ ಬಳಗ ಯುವಕರ ತಂಡ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಭಾವೈಕ್ಯತೆ ಸಾರುವ ಮೂಲಕ ಗಮನ ಸೆಳೆಯಿತು. ಪಟ್ಟಣದ ದೊಡ್ಡಬಸವೇಶ್ವರ ರೈತ ಸಮುದಾಯ ಭವನದಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಧರ್ಮ ಗುರುಗಳ ನಡುವೆ ಶ್ರೀರಾಮನ ಅವತಾರದ ಗಣೇಶ ಭಾವೈಕ್ಯತೆ ಸಾರಿದ್ದು ವಿಶೇಷವಾಗಿತ್ತು. ಗಣೇಶ ಮೂರ್ತಿ ವೀಕ್ಷಣೆಗೆ ಭಕ್ತರ ದಂಡು ಕಂಡು ಬಂತು. ಗಣೇಶನನ್ನು ಕಣ್ತುಂಬಿಕೊಳ್ಳಲು ಪೋಷಕರು, ಮಕ್ಕಳೊಂದಿಗೆ ಆಗಮಿಸಿದ್ದರು.