ಧಾರ್ಮಿಕ ಚಟುವಟಿಕೆಗಳಿಂದ ಒಗ್ಗಟ್ಟು ಸಾಧ್ಯ: ಕಡ್ತಲ ವಿಶ್ವನಾಥ ಪೂಜಾರಿ

| Published : Aug 29 2025, 01:00 AM IST

ಧಾರ್ಮಿಕ ಚಟುವಟಿಕೆಗಳಿಂದ ಒಗ್ಗಟ್ಟು ಸಾಧ್ಯ: ಕಡ್ತಲ ವಿಶ್ವನಾಥ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಅವರನ್ನು ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತ ಸಾಧಕ ವಿದ್ಯಾರ್ಥಿಗಳಿಗೆ ಬಹುನಾನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಧಾರ್ಮಿಕ ಚಟುವಟಿಕೆಗಳಿಂದ ಒಗ್ಗಟ್ಟು ಸಾಧ್ಯವೆಂದು ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಹೇಳಿದರು.

ಅವರು ಕಡ್ತಲದ ಪಂಚಾಯಿತಿ ವಠಾರದ ಸರ್ಕಾರಿ ಶಾಲೆಯಲ್ಲಿ 38ನೇ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಯಕ್ಷ ಕಲಾವಿದ ಕಡ್ತಲ ಕೃಷ್ಣ ನಾಯಕ್ ಮಾತನಾಡಿ, ಕಡ್ತಲ ಗ್ರಾಮದ ಸಾಧಕರು ಇಂದು ವಿಶ್ವದ ವಿವಿಧೆಡೆ ಹೆಸರು ಮಾಡುತ್ತಿದ್ದಾರೆ. ಅವರ ಸಾಧನೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ ಎಂದರು.

ಗಣೇಶೊತ್ಸವ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ‌. ಅಧ್ಯಕ್ಷ ಸುಕೇಶ್ ಹೆಗ್ಡೆ, ಶುಭಹಾರೈಸಿದರು.

ಜೇಸಿ ರಾಜೇಂದ್ರ ಭಟ್ ಉಪನ್ಯಾಸ ನೀಡಿದರು.

ಉದ್ಯಮಿ ಕಡ್ತಲ ವಿಶ್ವನಾಥ ಪೂಜಾರಿ ಅವರನ್ನು ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕ್ರೀಡೆಯಲ್ಲಿ ವಿಜೇತ ಸಾಧಕ ವಿದ್ಯಾರ್ಥಿಗಳಿಗೆ ಬಹುನಾನ ವಿತರಿಸಲಾಯಿತು. ಶಿಕ್ಷಕ ಶೇಖರ್ ಕಡ್ತಲ ಸ್ವಾಗತಿಸಿದರು. ರಾಘವೇಂದ್ರ ಮಠದಬೆಟ್ಟು ವಂದಿಸಿದರು. ದೀಪಕ್ ಕಾಮತ್ ಕಾರ್ಯಕ್ರಮ‌ ನಿರೂಪಿಸಿದರು.