ಸಾರಾಂಶ
ಭಾರತವು ವಿವಿಧತೆಯಿಂದ ಕೂಡಿದೆ. ಸ್ವಾತಂತ್ರ್ಯ ನಂತರ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತವನ್ನು ಏಕೀಕರಣಗೊಳಿಸಬೇಕೆಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಹಲಗೂರು: ಸರ್ದಾರ್ ವಲ್ಲಭಬಾಯ್ ಪಟೇಲ್ ರವರ ಆಶಯದಂತೆ ದೇಶದಲ್ಲಿ ಎಲ್ಲಾ ಧರ್ಮದ ಜನರು ಏಕತೆಯಿಂದ ಮುನ್ನಡೆಯಬೇಕು ಎಂದು ದೇಶಾದ್ಯಂತ ಏಕತೆ ಓಟ ಹಮ್ಮಿಕೊಂಡು ನಮ್ಮ ಪೊಲೀಸ್ ಠಾಣಾ ಸಿಬ್ಬಂದಿ ವತಿಯಿಂದ ಏಕತೆ ಓಟ ನಡೆಸುತ್ತಿರುವುದಾಗಿ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ತಿಳಿಸಿದರು.
ಶುಕ್ರವಾರ ಬೆಳಗ್ಗೆ ಹಲಗೂರು ಪೊಲೀಸ್ ಸಿಬ್ಬಂದಿ ಏಕತೆ ಓಟದಲ್ಲಿ ಭಾಗವಹಿಸಿ ಮಾತನಾಡಿ, ಭಾರತವು ವಿವಿಧತೆಯಿಂದ ಕೂಡಿದೆ. ಸ್ವಾತಂತ್ರ್ಯ ನಂತರ ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತವನ್ನು ಏಕೀಕರಣಗೊಳಿಸಬೇಕೆಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದರು. ದೇಶದಲ್ಲಿ ಹಲವು ಭಾಷೆ, ಧರ್ಮದ ಜನರು ವಾಸಿಸುತ್ತಿದ್ದಾರೆ. ಅವರೆಲ್ಲರೂ ಒಗ್ಗಟ್ಟಾಗಿ ಏಕೀಕರಣಗೊಂಡು ದೇಶವನ್ನು ಮುನ್ನಡೆಸಬೇಕಿದೆ. ಅದಕ್ಕಾಗಿ ಈ ದಿನ ದೇಶಾದ್ಯಂತ ಏಕತೆಯ ಓಟವನ್ನು ಹಮ್ಮಿ ಕೊಳ್ಳಲಾಗಿದೆ. ಆದ್ದರಿಂದ ಹಲಗೂರು ಪೊಲೀಸ್ ಠಾಣೆಯಲ್ಲಿ ಈ ದಿನ ನಮ್ಮ ಪೊಲೀಸ್ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸೇರಿ ಏಕತೆ ಓಟದಲ್ಲಿ ಭಾಗವಹಿಸಿ ಎಂದು ಹೇಳಿದರು. ನಂತರ ಓಟವು ಹಲಗೂರು ಪೊಲೀಸ್ ಠಾಣೆಯಿಂದ ಹೊರಟು ಹಲಗೂರು ವೃತ್ತ , ಬೈಪಾಸ್ ರಸ್ತೆ ಮೂಲಕ ಎಚ್. ಬಸಾಪುರ, ಚಿಲ್ಲಾಪುರದವರೆಗೆ ಹೊರಟು ಮತ್ತೆ ಹಲಗೂರು ಮಾರ್ಗವಾಗಿ ಪೊಲೀಸ್ ಠಾಣೆಗೆ ಆಗಮಿಸಿತು.;Resize=(128,128))
;Resize=(128,128))
;Resize=(128,128))