ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

| Published : Nov 20 2025, 02:00 AM IST

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸೇವಾ ಜೇಷ್ಠತೆ, ಬೋಧನಾ ಅನುಭವ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಮಾನದಂಡ ಆಗಬೇಕು.

ಕನ್ನಡಪ್ರಭ ವಾರ್ತೆ ಮೈಸೂರುತಾತ್ಕಾಲಿಕ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ, ನಾನ್ ಯುಜಿಸಿ ಎಂಬ ತಾರತಮ್ಯ ಮಾಡದೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಪದಾಧಿಕಾರಿಗಳು ನಗರದ ಮೈಸೂರು ವಿವಿ ಕ್ರಾಫರ್ಡ್ ಭವನದ ಎದುರು ಪ್ರತಿಭಟಿಸಿದರು.ಸೇವಾ ಜೇಷ್ಠತೆ, ಬೋಧನಾ ಅನುಭವ ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಮಾನದಂಡ ಆಗಬೇಕು. ಈಗ ಉದ್ಭವಿಸಿರುವ ಕಾನೂನಾತ್ಮಕ ಬಿಕ್ಕಟ್ಟನ್ನು ಸರ್ಕಾರದ ಹಂತದಲ್ಲೇ ತೀರ್ಮಾನಿಸಬೇಕು. ಅತಿಥಿ ಉಪನ್ಯಾಸಕರ ಶಾಶ್ವತ ನೇಮಕಾತಿ ನಿಯಮ ರೂಪಿಸಲು ತಜ್ಞರ ಸಮಿತಿ ರಚಿಸಬೇಕು. ಇಡುಗಂಟನ್ನು 5 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.ರಾಜ್ಯದ 432 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 11 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಕನಿಷ್ಠ ಗೌರವಧನ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯ ಹೈ ಕೋರ್ಟ್ರಿಟ್ ಅರ್ಜಿಗೆ ಸಂಬಂಧಿಸಿದಂತೆ 2024ರ ಸೆ. 5ರಂದು ನೀಡಿರುವ ತೀರ್ಪು ಅತಿಥಿ ಉಪನ್ಯಾಸಕರ ಪಾಲಿಗೆ ಮರಣ ಶಾಸನವಾಗಿದೆ. ಈ ಹಿನ್ನೆಲೆಯಲ್ಲಿ 5,353 ಮಂದಿ ಅತಿಥಿ ಉಪನ್ಯಾಸಕರು ತಾತ್ಕಾಲಿಕ ಉದ್ಯೋಗದಿಂದ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಯುಜಿಸಿ ನಿಯಮ 2018ಕ್ಕಿಂತ ಹಿಂದಿನಿಂದ ಕಾರ್ಯನಿರ್ವಹಿಸಿದವರಿಗೆ ಅನ್ವಯಿಸಬಾರದು ಎಂದು ಅವರು ಕೋರಿದರು.ಈ ವೇಳೆ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಒವೆಲ್ ಮೈದಾನದಲ್ಲಿ ತಡೆದರು. ಅತಿಥಿ ಉಪನ್ಯಾಸಕರು ಅಲ್ಲೇ ಪ್ರತಿಭಟನೆ ಮುಂದುವರೆಸಿದರು.ಈ ಹಿನ್ನೆಲೆಯಲ್ಲಿ ಪೊಲೀಸರು ಸಿಎಂ ಭೇಟಿಗೆ ಸಮಯಾವಕಾಶ ಕೊಡಿಸಿದ್ದು, ಈ ಬಗ್ಗೆ ತೀರ್ಮಾನ ಆಗುವವರೆಗೂ ಓವೆಲ್ ಮೈದಾನದಲ್ಲೇ ಧರಣಿ ಮುಂದುವರೆಸಲು ನಿರ್ಧರಿಸಿದರು.ಪ್ರತಿಭಟನೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ, ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗರಾಜು ಜಿ.ಎಸ್.ಮದ್ದೂರು, ಹನುಮಂತೇಶ್, ಹಾರೀಫ್, ರಾಜ್ಯ ಮಹಿಳಾ ಸಂಯೋಜಕಿ ಹರ್ಷಿತಾ, ಚಂದ್ರ ಕಾಂತ್ ಬೀದರ್, ಡಾ. ದಿವಾಕರ್ ಕೆ.ಆರ್.ನಗರ, ನೂರ್ ಅಹಮ್ಮದ್ ಕೋಲಾರ, ಸುನಿತಾ ಮೊದಲಾದವರು ಇದ್ದರು. ಮೂವತ್ತು ಮಂದಿಗೆ ಮೂನ್ನೂರು ಪೊಲೀಸರುಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಕೇವಲ 25 ರಿಂದ 30 ಮಂದಿ ಮಾತ್ರ ಇದ್ದರು. ಆದರೆ ಅವರಿಗೆ ಬಂದೋಬಸ್ತ್ಕಲ್ಪಿಸಿದ್ದು ಮಾತ್ರ 300ಕ್ಕೂ ಹೆಚ್ಚು ಮಂದಿ ಪೊಲೀಸರು. ಅಶ್ಚರ್ಯ ಎಂದರೂ ಸತ್ಯ.ಪ್ರತಿಭಟನಾಕಾರರು ನ. 21ರಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದರಿಂದ ಅವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೆ ಇಷ್ಟಕ್ಕೆ ಕಾರಣ. ನೀವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೇಳುವುದು ಏನಿದೆ ಎಂಬುದು ಪೊಲೀಸರ ವಾದ.ಇದಿಷ್ಟಕ್ಕೆ 3 ವ್ಯಾನ್ಗಳಲ್ಲಿ ಪೊಲೀಸರು, ನಾಲ್ಕು ಮಂದಿ ಇನ್ಸ್ಪೆಕ್ಟರ್ಗಳು, ಒಬ್ಬರು ಎಸಿಪಿ, ಹತ್ತಕ್ಕೂ ಹೆಚ್ಚು ಮಂದಿ ಎಸ್ಐಗಳು, ನೂರಾರು ಮಂದಿ ಪೊಲೀಸರು ಇದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮೂವರು ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಫ್ತಿಯಲ್ಲಿ 15 ಮಂದಿ ಮಹಿಳಾ ಪೊಲೀಸರು ಕಾವಲಿದ್ದರು. ಇದಿಷ್ಟನ್ನೂ ನೋಡಿದ ಸಾರ್ವಜನಿಕರು ಏನೋ ಆಗಬಾರದ್ದು ಆಗಿರಬೇಕು ಎಂಬಷ್ಟರ ಮಟ್ಟಿಗೆ ಗಾಭರಿ ಹುಟ್ಟಿಸಿತು.