ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊಂಗನೂರು ಕುಗ್ರಾಮದಲ್ಲಿ ಜನಿಸಿದ ಪ್ರೊ.ಎಂ. ನಂಜಯ್ಯ ಹೊಂಗನೂರು ಅವರು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 22ನೇ ನಿರ್ದೇಶಕರಾಗಿ ಹಿರಿಯ ಜಾನಪದ ಪ್ರಾಧ್ಯಾಪಕ ಡಾ.ಎಂ. ನಂಜಯ್ಯ ಹೊಂಗನೂರು ಅವರು ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ನಿರ್ದೇಶಕರಾದ ಪ್ರೊ.ಎನ್.ಕೆ. ಲೋಲಾಕ್ಷಿ ಅವರು ಪ್ರೊ. ನಂಜಯ್ಯ ಹೊಂಗನೂರು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸಂಸ್ಥೆಯ ಅಧೀಕ್ಷಕಿ ಹೇಮಲತಾ ಅವರು ಅಧಿಕಾರ ಸ್ವೀಕಾರದ ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು.
ಈ ವೇಳೆ ಸಂಸ್ಥೆಯ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧಕರು, ವಿದ್ಯಾರ್ಥಿಗಳು ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಪ್ರೊ. ಶಶಿಕಲಾಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಹೊಂಗನೂರು ಕುಗ್ರಾಮದಲ್ಲಿ ಜನಿಸಿದ ಪ್ರೊ.ಎಂ. ನಂಜಯ್ಯ ಹೊಂಗನೂರು ಅವರು, ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಯಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸಂಸ್ಥೆಯ ವೆಬ್ ಸೈಟ್, ಲೋಗೋ ನಿರ್ಮಾಣಅಧಿಕಾರ ಸ್ವೀಕರಿಸಿದ ಪ್ರೊ. ನಂಜಯ್ಯ ಹೊಂಗನೂರು ಮಾತನಾಡಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವೆಬ್ ಸೈಟ್ ಮತ್ತು ಲೋಗೋವನ್ನು ಶೀಘ್ರದಲ್ಲಿಯೇ ರಚಿಸಲಾಗುವುದು. ಭೌತಶಾಸ್ತ್ರ ಅಧ್ಯಯನ ವಿಭಾಗ, ಮಹಾರಾಜ ಕಾಲೇಜು, ಪ್ರಸಾರಾಂಗಕ್ಕೆ ಲೋಗೊ ಇರುವಂತೆಯೇ ಕನ್ನಡ ಸಂಸ್ಥೆಗೂ ಲೋಗೋ ರೂಪಿಸಬೇಕು. ಜಾಗತಿಕ ಮಟ್ಟದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಶ್ರೇಷ್ಠವಾದ ಕೆಲಸಗಳು ತಿಳಿಸಲು ವೆಬ್ ಸೈಟ್ ಅಗತ್ಯವಾಗಿ ರೂಪಿಸಬೇಕಾಗಿದೆ ಎಂದರು.
ಸಂಸ್ಥೆ ಕಟ್ಟಲು ಅನೇಕ ಆಲೋಚನೆಗಳಿವೆ. ಶತಮಾನದ ಕಾರ್ಯಕ್ರಮ ರೂಪಿಸಬೇಕು. ಸಂಸ್ಥೆಗೆ ಡಿಸೆಂಬರ್ 6ಕ್ಕೆ ವರ್ಷದ ಆಚರಣೆ ಮಾಡಬೇಕು. ಸಂಸ್ಥೆಯ ಆರಂಭದಿಂದ ಇಲ್ಲಿಯವರೆಗೂ ನಡೆದಿರುವ ಎಲ್ಲಾ ಕಾರ್ಯಗಳನ್ನು ಸ್ಮರಿಸುವ ಪುಸ್ತಕ ತರಬೇಕು. ಹಸ್ತಪ್ರತಿ, ವಿಶ್ವಕೋಶ, ಅನುವಾದ, ದಾಸ ಸಾಹಿತ್ಯದಲ್ಲಿ ಕೆಲಸಗಳಾಗಬೇಕಿದೆ ಎಂದು ಅವರು ತಿಳಿಸಿದರು.