ಸಾರಾಂಶ
Unopposed election of Chairman, Vice-Chairman of Agricultural Farmers' Co-operative Society
-ಅಧ್ಯಕ್ಷರಾಗಿ ಸುಧೀರ್ ಮತ್ತು ಉಪಾಧ್ಯಕ್ಷರಾಗಿ ಭೀಮರಾಯ ಆಯ್ಕೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸುಧೀರ್ ದೊಡ್ಡ ಹಣಮಂತ ಉಪಾಧ್ಯಕ್ಷರಾಗಿ ಭೀಮರಾಯ ರಾಚಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಧೀರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭೀಮರಾಯ ಮಾತ್ರ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅಲ್ಲೂರ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆ ಮಾಡಿ, ಉಭಯ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಕಾರ್ಯದರ್ಶಿಗಳಾದ ವಿಶ್ವನಾಥ ಸುರಪುರ, ಸಂಜೀವಕುಮಾರ ಪುಟಗಿ, ರಾಘವೇಂದ್ರ ಕಲಾಲ್ ವರ್ಕನಳ್ಳಿ, ಗ್ರಾಮದ ಮುಖಂಡರಾದ ಚಂದಪ್ಪ ನಾಯಕ, ಬಾಬುಗೌಡ, ಜಗದೀಶಗೌಡ ಆಶನಾಳ, ಬಂಗಾರಪ್ಪ ಜೀವಣ್ಣೋರ. ಸಾಬಯ್ಯ ಜಿಲ್ಲಾಪುರ, ಮಲ್ಲಿಕಾರ್ಜುನ ಜಲ್ಲಪ್ಪನೋರ ರಾಮಸಮುದ್ರ, ನಿರ್ದೇಶಕರಾದ ವೀರಭದ್ರಯ್ಯ, ಸಣ್ಣ ಹಣಮಂತ, ಮರಗಪ್ಪ, ಸಣ್ಣ ಬಸಪ್ಪ, ಶರಣಗೌಡ, ಬಸವರಾಜಪ್ಪ, ಸಿದ್ಲಿಂಗಪ್ಪ, ಬಾಸ್ಕರ್, ಮಲ್ಲಮ್ಮ ಭೀಮರಾಯ, ಮಲ್ಲಮ್ಮ ಪರಮರಡ್ಡಿ ಇದ್ದರು.----
21ವೈಡಿಆರ್8: ರಾಮಸಮುದ್ರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸುಧೀರ್ ದೊಡ್ಡ ಹಣಮಂತ ಉಪಾಧ್ಯಕ್ಷರಾಗಿ ಭೀಮರಾಯ ರಾಚಪ್ಪ ಅವಿರೋಧವಾಗಿ ಆಯ್ಕೆಯಾದರು.