ಸಾರಾಂಶ
ಹುಬ್ಬಳ್ಳಿ:
ಹು-ಧಾ ಮಹಾನಗರ ಪಾಲಿಕೆಯ 4 ಸ್ಥಾಯಿ ಸಮಿತಿಗಳ ಒಟ್ಟು 28 ಸದಸ್ಯ ಸ್ಥಾನಗಳಿಗೆ ಪಾಲಿಕೆ ಸಭಾಭವನದಲ್ಲಿ ಗುರುವಾರ ಅವಿರೋಧ ಆಯ್ಕೆ ನಡೆಯಿತು.ಪ್ರತಿ ಸ್ಥಾಯಿ ಸಮಿತಿಯ ತಲಾ 7 ಸದಸ್ಯ ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ 4 ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ಗೆ 3 ಸ್ಥಾನ ನಿಗದಿಯಾಗಿದ್ದವು. ಅದರಂತೆ ಪಕ್ಷವಾರು ಸದಸ್ಯರು ಪ್ರತಿ ಸ್ಥಾಯಿ ಸಮಿತಿಗೆ ನಿಗದಿತ 7 ಸದಸ್ಯರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಸಮಿತಿಯ ಸದಸ್ಯರ ಆಯ್ಕೆಯನ್ನು ಅವಿರೋಧವಾಗಿ ಘೋಷಣೆ ಮಾಡಲಾಯಿತು.
ಆಯ್ಕೆಯಾದ ಸದಸ್ಯರು:ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಫೀಲುಗಳ ಸ್ಥಾಯಿ ಸಮಿತಿಗೆ ಚಂದ್ರಶೇಖರ ಮನಗುಂಡಿ, ಶಾಂತಾ ಹಿರೇಮಠ, ರೂಪಾ ಶೆಟ್ಟಿ, ರತ್ನಬಾಯಿ ನಾಝರೆ, ಸರತಾಜ್ ಅದವಾನಿ, ಮಂಗಳಾ ಗೌರಿ ಮತ್ತು ಮಂಜುನಾಥ ಬುರ್ಲಿ ಅವಿರೋಧವಾಗಿ ಆಯ್ಕೆಗೊಂಡರು. ನಗರ ಯೋಜನೆ ಸ್ಥಾಯಿ ಸಮಿತಿಗೆ ಶಂಕರ ಶೇಳಕೆ, ಸೀಮಾ ಮೊಗಲಿಶೆಟ್ಟರ, ಲಕ್ಷ್ಮಿ ಹಿಂಡಸಗೇರಿ, ನೀಲವ್ವ ಅರವಳದ, ಶಂಭುಗೌಡ ಸಾಲಿಮನಿ, ಶಿವಕುಮಾರ ರಾಯನಗೌಡರ ಮತ್ತು ಬೀಬಿ ಮರಿಯಮ್ಮ ಮುಲ್ಲಾ ಆಯ್ಕೆಗೊಂಡರು.ಇನ್ನು ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ರಾಜಣ್ಣ ಕೊರವಿ, ಮಹಾದೇವಪ್ಪ ನರಗುಂದ, ಚಂದ್ರಕಲಾ ಕೊಟಬಾಗಿ, ಸುಮಿತ್ರಾ ಗುಂಜಾಳ, ಮಹ್ಮದ್ ಇಕ್ಬಾಲ್ ನವಲೂರ, ಫಮೀದಾ ಕಾರಡಗಿ ಮತ್ತು ಸೂರವ್ವ ಪಾಟೀಲ ಆಯ್ಕೆಗೊಂಡರು. ಲೆಕ್ಕಗಳ ಸ್ಥಾಯಿ ಸಮಿತಿಗೆ ಪ್ರೀತಿ ಖೋಡೆ, ಸುನೀತಾ ಮಾಳವದಕರ, ಉಮಾ ಮುಕುಂದ, ಅನೀತಾ ಚಳಗೇರಿ, ಪ್ರಕಾಶ ಕುರಹಟ್ಟಿ, ಬಿಲಕಿಸಬಾನು ಮುಲ್ಲಾ ಮತ್ತು ಮುನಸೂರಾ ಮುದಗಲ್ಲ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಲಾಯಿತು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮೇಯರ್ ರಾಮಣ್ಣ ಬಡಿಗೇರ, ಉಪ ಮೇಯರ್ ದುರ್ಗಮ್ಮ ಬಿಜವಾಡ, ಸಹಾಯಕ ಪ್ರಾದೇಶಿಕ ಆಯುಕ್ತ ಎಸ್.ಎಸ್. ಬಿರಾದಾರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಉಪ ಆಯುಕ್ತ (ಆಡಳಿತ) ಆನಂದ ಕಲ್ಲೊಳಿಕರ ಸೇರಿದಂತೆ ಇತರರು ಇದ್ದರು.ಶೀಘ್ರ ಅಧ್ಯಕ್ಷರ ಆಯ್ಕೆ:
ಮೇಯರ್ ರಾಮಣ್ಣ ಬಡಿಗೇರಿ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇರುವ ಕಾರಣದಿಂದ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಪಾಲಾಗುವುದು ಖಚಿತ. ಅದರಲ್ಲಿ ಚಂದ್ರಶೇಖರ ಮನಗುಂಡಿ, ರಾಜಣ್ಣ ಕೊರವಿ, ಉಮಾ ಮುಕುಂದ, ಶಂಕರ ಶೆಳಕೆ ಹೆಸರುಗಳು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಯಾರಾಗುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!