ಸಾರಾಂಶ
ರಾಮನಗರ: ತಾಲೂಕಿನ ಕುಂಬಾರದೊಡ್ಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಪುಟ್ಟರೇವಣ್ಣ ಮತ್ತು ಉಪಾಧ್ಯಕ್ಷರಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರು.
ರಾಮನಗರ: ತಾಲೂಕಿನ ಕುಂಬಾರದೊಡ್ಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಪುಟ್ಟರೇವಣ್ಣ ಮತ್ತು ಉಪಾಧ್ಯಕ್ಷರಾಗಿ ಸರೋಜಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಅಧ್ಯಕ್ಷ ಸ್ಥಾನಕ್ಕೆ ಪುಟ್ಟರೇವಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಮ್ಮ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಉಮೇಶ್ ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.ನೂತನ ಅಧ್ಯಕ್ಷ ಪುಟ್ಟರೇವಣ್ಣ ಮಾತನಾಡಿ, ಹಾಲು ಉತ್ಪಾದಕರ ಶ್ರಮದಿಂದ ಸಂಘ ಪ್ರಗತಿಯಲ್ಲಿದೆ. ಪ್ರತಿ ವರ್ಷ ರೈತರಿಗೆ ಒಕ್ಕೂಟದಿಂದ ದೊರೆಯುವ ಪ್ರಯೋಜನ ಸಂಘದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರ ಉತ್ತಮ ಸಹಕಾರ ಪಡೆದು ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುತ್ತದೆ. ರೈತರು ಸಂಘಕ್ಕೆ ಶುದ್ಧ ಹಾಲು, ಹೆಚ್ಚು ಹಾಲು ಸರಬರಾಜು ಮಾಡಿ ಸಂಘದಿಂದ ಮತ್ತಷ್ಟು ಸವಲತ್ತು ಪಡೆಯಲು ಮುಂದಾಗಬೇಕು. ಜೊತೆಗೆ ಸಂಘದ ಅಭಿವೃದ್ಧಿಗೆ ಉತ್ತಮ ಸಹಕಾರ ನೀಡಬೇಕು ಎಂದು ಹೇಳಿದರು.ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಗ್ರಾಮಸ್ಥರು, ಮುಖಂಡರು, ಹಾಲು ಉತ್ಪಾದಕರು ಅಭಿನಂದಿಸಿದರು.
ಸಂಘದ ನಿರ್ದೇಶಕರಾದ ಕೆ.ಎಸ್. ಉಮೇಶ್, ಶ್ರೀನಿವಾಸ್, ರುದ್ರಪ್ಪ, ಕೆ.ಟಿ. ದೇವರಾಜು, ಕೆ. ರಮೇಶ್, ಕೆ.ಟಿ. ಪುಟ್ಟೇಗೌಡ, ಕೆ.ಆರ್.ಶೇಖರ್, ಸವಿತಾ, ಜಯಮ್ಮ, ಕಾರ್ಯದರ್ಶಿ ಡಿ.ಲೋಕೇಶ್, ಹಾಲು ಪರೀಕ್ಷಕ ಬಸವರಾಜು ಇತರರಿದ್ದರು.30ಕೆಆರ್ ಎಂಎನ್ 13.ಜೆಪಿಜಿ
ರಾಮನಗರ ತಾಲೂಕಿನ ಕುಂಬಾರದೊಡ್ಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಪುಟ್ಟರೇವಣ್ಣ ಮತ್ತು ಉಪಾಧ್ಯಕ್ಷೆ ಸರೋಜಮ್ಮ ಅವರನ್ನು ನಿರ್ದೇಶಕರು ಮತ್ತು ಗ್ರಾಮದ ಮುಖಂಡರು ಅಭಿನಂದಿಸಿದರು.