ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆವಿರುತ್ತದೆ. ಆದರೆ, ಅವರಿಗೆ ತಮ್ಮ ಪ್ರತಿಭೆಗೆ ಸಿಕ್ಕ ಅವಕಾಶ ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ್ಯದ ಅರಿವು ಇರುವುದಿಲ್ಲ. ಅಲ್ಲದೇ ಪ್ರತಿಭೆ ಗುರುತಿಸುವವರಾಗಲಿ, ಸೂಕ್ತ ವೇದಿಕೆಯಾಗಲಿ ಸರಿಯಾದ ಸಮಯಕ್ಕೆ ಸಿಗದೇ ಇರುವುದು ದುರ್ಭಾಗ್ಯ ಎಂದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಕ್ರೀಡಾ ತಜ್ಞ ಡಾ.ಅಶೋಕಕುಮಾರ ರಾ.ಜಾಧವ ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಗ್ರಾಮೀಣ ಭಾಗದ ಕ್ರೀಡಾಪಟುಗಳಲ್ಲಿ ಅಪ್ರತಿಮ ಪ್ರತಿಭೆವಿರುತ್ತದೆ. ಆದರೆ, ಅವರಿಗೆ ತಮ್ಮ ಪ್ರತಿಭೆಗೆ ಸಿಕ್ಕ ಅವಕಾಶ ಸರಿಯಾಗಿ ಉಪಯೋಗಿಸಿಕೊಳ್ಳುವ ಕೌಶಲ್ಯದ ಅರಿವು ಇರುವುದಿಲ್ಲ. ಅಲ್ಲದೇ ಪ್ರತಿಭೆ ಗುರುತಿಸುವವರಾಗಲಿ, ಸೂಕ್ತ ವೇದಿಕೆಯಾಗಲಿ ಸರಿಯಾದ ಸಮಯಕ್ಕೆ ಸಿಗದೇ ಇರುವುದು ದುರ್ಭಾಗ್ಯ ಎಂದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತಕ್ರೀಡಾ ತಜ್ಞ ಡಾ.ಅಶೋಕಕುಮಾರ ರಾ.ಜಾಧವ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕನ್ನಾಳ ತಾಂಡಾದಲ್ಲಿ ಗಜಾನನ ಉತ್ಸವದ ನಿಮಿತ್ತ ಶಾಂತಿನಗರ ಯುವ ಸೇನೆ ಹಾಗೂ ತಾಂಡಾದ ಕ್ರೀಡಾ ಪ್ರೋತ್ಸಾಹಕರ ವತಿಯಿಂದ ಸಂಘಟಿಸಲಾದ ಶಾಂತಿನಗರ ಪ್ರೀಮಿಯರ್ ಲೀಗ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಮಾತನಾಡಿದ ಅವರು, ಇವೆಲ್ಲವುಗಳಿಂದ ವಂಚಿತರಾದ ಸಾವಿರಾರು ಆಟಗಾರರು ಪ್ರತಿಭೆಯಿದ್ದರೂ, ಅವಕಾಶ ವಂಚಿತರಾಗಿ ತಮ್ಮ ಕನಸನ್ನೇ ಮೊಟಕುಗೊಳಿಸಿ ನಿರಾಸೆ ಅನುಭವಿಸುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಮತ್ತು ಅತ್ಯಂತ ಹಿಂದುಳಿದ ಪ್ರದೇಶವಾದ ಕನ್ನಾಳ ತಾಂಡಾದಲ್ಲಿ ಗ್ರಾಮೀಣ ಭಾಗದ ಆಟಗಾರರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪಂದ್ಯಾವಳಿ ಸಂಘಟಿಸಿದ್ದು ಇದರ ಲಾಭವನ್ನು ಪಡೆದು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.ಬಿಎಲ್‌ಡಿಇ ಸಂಸ್ಥೆಯ ಆಡಳಿತಾಧಿಕಾರಿ ಶಿವನಗೌಡ ಬಿರಾದಾರ ಉದ್ಘಾಟಿಸಿ ಮಾತನಾಡಿ, ತಾಂಡಾದ ಯುವಕರು ಯಾವತ್ತೂ ಲವಲವಿಕೆಯಿಂದಿದ್ದು, ಒಂದಿಲ್ಲೊಂದು ಸಮಾಜಮುಖಿ ಕ್ರಿಯಾತ್ಮಕ ಚಟುವಟಿಕೆಗಳನ್ನು ಸಂಘಟಿಸುತ್ತ ಬರುತ್ತಿದ್ದಾರೆ. ಅವರು ಸಂಘಟಿಸುವ ಪ್ರತಿ ಚಟುವಟಿಕೆಗಳಿಗೆ ತಾವು ಯಾವತ್ತೂ ಬೆನ್ನೆಲುಬಾಗಿರುವೆ ಎಂದು ಭರವಸೆ ನೀಡಿದರು. ಶಾಂತಿನಗರದಲ್ಲಿ ಆಟಗಾರರು ಶಾಂತಿಯುತವಾಗಿ ಕ್ರೀಡಾಮನೋಭಾವದಿಂದ ಪಾಲ್ಗೊಂಡು ಮುಂದಿನ ಬಾರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಂದ್ಯಾವಳಿ ಸಂಘಟಿಸುವಂತಾಗಲೂ ಪ್ರೇರಣೆ ನೀಡಬೇಕು. ನೀವು ಇಲ್ಲಿ ತೋರುವ ಕ್ರೀಡಾ ಸ್ಫೂರ್ತಿ ನಿಮ್ಮ ಜೀವನದಲ್ಲಿ ಅಭಿಮಾನದಿಂದಿರಲು ಸಹಾಯವಾಗುತ್ತದೆ. ತಾಂಡಾದ ಯುವಕರ ಪರಿಶ್ರಮ ಮತ್ತು ಬಹಳ ಉತ್ಸಾಹದಿಂದ ಸಂಘಟಿಸುತ್ತಿರುವ ರೀತಿ ವಿಶೇಷವಾಗಿ ಎಲ್ಲರನ್ನು ಒಗ್ಗಟ್ಟಿನಿಂದ ಪಂದ್ಯಾವಳಿ ಯಶಸ್ವಿಗೊಳಿಸಲು ಬೆನ್ನೆಲುಬಾಗಿ ನಿಂತಿರುವ ಮೋಹನ ಟೊಪು ಚವ್ಹಾಣ ಅವರನ್ನು ಅಭಿನಂದಿಸಿದರು.ಯುವ ಧುರೀಣ ಅಭಿನವ ದೇವಾನಂದ ಚವ್ಹಾಣ ಮಾತನಾಡಿ, ತಮ್ಮ ತಂದೆಯವರೂ ಕೂಡ ಕ್ರಿಕೆಟ್ ಆಟಗಾರರಿದ್ದರು. ಆ ಕ್ರೀಡಾಮನೋಭಾವದಿಂದ ಇವತ್ತಿಗೂ ಅವರು ಚೈತನ್ಯಭರಿತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಯುವ ಆಟಗಾರಿಗೆ ಪ್ರೋತ್ಸಾಹಿಸಲು ಪ್ರಥಮ ಬಹುಮಾನ ಕೊಡಮಾಡಿದ್ದು, ಯುವ ಶಕ್ತಿಯೇ ದೇಶದ ಶಕ್ತಿಯಾಗಿದ್ದು, ಅವರನ್ನು ಹುರಿದುಂಬಿಸಲು ಸದಾ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದರು.ಕ್ರಿಕೆಟ್ ಅಷ್ಟೇ ಅಲ್ಲ, ಯಾವುದೇ ಕ್ರೀಡೆಯಾಗಲಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸುತ್ತ ತಾವು ಆರೋಗ್ಯವಂತರಾಗಿ ಸಮಾಜ ಆರೋಗ್ಯವಂತರನ್ನಾಗಿ ಮಾಡಬೇಕು. ಯುವಕರ ಆತ್ಮಬಲ ಹೆಚ್ಚಿಸಲು ಉಪಯೋಗವಾಗುವ ಇಂತಹ ಚಟುವಟಿಕೆಗಳನ್ನು ಸಂಘಟಿಸುತ್ತ ಇರಬೇಕು. ಅದಕ್ಕಾಗಿ ಬೇಕಾಗುವ ಎಲ್ಲ ಸಹಕಾರವನ್ನು ನೀಡಲು ಸದಾ ಸಿದ್ಧ ಎಂದು ಭರವಸೆ ನೀಡಿದರು.ವಿಶೇಷ ಅತಿಥಿ ಆನಂದಕುಮಾರ ಬಂಡಿ, ಮೋಹನ ಟಿ.ಚವ್ಹಾಣ, ಅಶೋಕ ನಾಯಕ (ಬುಟ್ಟಾ), ಪ್ರಸಾದ ಡಿ.ಚವ್ಹಾಣ ಮಾತನಾಡಿದರು.ಪಂದ್ಯಾವಳಿಯ ಪ್ರಮುಖ ಸಂಘಟಕ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಮೋಹನ ಟೋಪು ಚವ್ಹಾಣ ಪಂದ್ಯಾವಳಿಗೆ ಬೇಕಾಗಿರುವ ಆರ್ಥಿಕ ಸಹಾಯ ಕ್ರೋಢಿಕರಿಸಿದ್ದು, ಪಂದ್ಯಾವಳಿಯ ಹಾಗೂ ಕಾರ್ಯಕ್ರಮದ ರೂಪರೇಷ ಮಾಡಿ ನಿರೂಪಣೆ ಮಾಡಿದರು.
ಸಮಾರಂಭದಲ್ಲಿ ನಾಕೌಟ್ ಮಾದರಿಯಲ್ಲಿ ಮತ್ತು 10 ಓವರ್‌ಗಳ ಪ್ರತಿ ಇನಿಂಗ್ಸ್ ಇದ್ದು, ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ 24 ತಂಡಗಳು ಭಾಗವಹಿಸಿವೆ.ಕಾರ್ಯಕ್ರಮದಲ್ಲಿ ಆಯೋಜಕರಾದ ಪವನ ಚವ್ಹಾಣ, ಸುರೇಶ ಚವ್ಹಾಣ ಸಕಲ ವ್ಯವಸ್ಥೆ ಮಾಡಿದ್ದರು. ಎಲ್.ಎಫ್.ಚವ್ಹಾಣ ಸ್ವಾಗತಿಸಿದರು. ಹೇಮಂತ ಚವ್ಹಾಣ ವಂದನಾರ್ಪಣೆ ಮಾಡಿದರು. ಮಾರುತಿ ಚವ್ಹಾಣ, ಸಂದೀಪ ಚವ್ಹಾಣ, ಶಿವಾನಂದ ಚವ್ಹಾಣ, ಕೀರ್ತಿ ಚವ್ಹಾಣ ಹಾಗೂ ಶಾಂತಿನಗರ ಯುವ ಸೇನಾ ಸಂಘದ ಹಲವು ಸದಸ್ಯರು ಉಪಸ್ಥಿತರಿದ್ದರು.ಟೆನ್ನಿಸ್‌ಬಾಲ್ ಕ್ರಿಕೆಟ್ ಆಟಗಾರರಿಗೂ ಇವತ್ತಿನ ದಿನಗಳಲ್ಲಿ ಲೆದರ್‌ಬಾಲ್ ಕ್ರಿಕೆಟ್‌ಗರಿಗೆ ಸಿಗುವಂತಹ ಸೌಲಭ್ಯಗಳು ಸಿಗುತ್ತಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕೆಲ ಆಟಗಾರರು ರಾಜ್ಯ ತಂಡ ಪ್ರತಿನಿಧಿಸಿ ಉತ್ತರ ಪ್ರದೇಶ, ಜಮ್ಮು, ಬಿಹಾರ, ಹಿಮಾಚಲ ಪ್ರದೇಶ, ಚೆನ್ನೈ, ಪಂಜಾಬಗಳಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ತಮ್ಮ ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ. ಆತ್ಮವಿಶ್ವಾಸದೊಂದಿಗೆ ಅಂಕಣಕ್ಕೆ ಇಳಿಯಬೇಕು.-ಡಾ.ಅಶೋಕಕುಮಾರ ರಾ.ಜಾಧವ,
ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರು.ಪ್ರತಿ ಪಂದ್ಯಕ್ಕೆ ಪಂದ್ಯ ಪುರುಷ, ಸರಣಿ ಪುರುಷ, ಉತ್ತಮ ಬ್ಯಾಟ್ಸಮನ್, ಉತ್ತಮ ಬೌಲರಗಾಗಿ ಪ್ರಶಸ್ತಿ ಪತ್ರ ಹಾಗೂ ಟ್ರೋಫಿಗಳಲ್ಲದೇ ವಿಜೇತ, ರನ್ನರಪ್ ಮತ್ತು ತೃತೀಯ ಸ್ಥಾನ ಪಡೆಯುವ ತಂಡಗಳಿಗ ನಗದು ಬಹುಮಾನದ ಜೊತೆಗೆ ಆಕರ್ಷಕ 5 ಅಡಿ ಎತ್ತರದ ಟ್ರೋಫಿಗಳನ್ನು ನೀಡಲಾಗುವುದು. -ಮೋಹನ ಚವ್ಹಾಣ, ಆಯೋಜಕರು.