ಉಡುಪಿ ಉಚ್ಚಿಲ ದಸರಾ - 2026ರ ಅಂಗವಾಗಿ ಆಗಮಿಸುವ ಲಕ್ಷಾಂತರ ಮಂದಿ ಭಕ್ತರಿಗೆ ದೇವಿಯ ಆರಾಧನೆ - ಸಾಂಸ್ಕೃತಿಕ ಮನೋರಂಜನೆಯ ಜೊತೆಗೆ ವೈಶಿಷ್ಟ್ಯಪೂರ್ಣ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.
ಉಚ್ಚಿಲ ; ಉಡುಪಿ ಉಚ್ಚಿಲ ದಸರಾ - 2026ರ ಅಂಗವಾಗಿ ಆಗಮಿಸುವ ಲಕ್ಷಾಂತರ ಮಂದಿ ಭಕ್ತರಿಗೆ ದೇವಿಯ ಆರಾಧನೆ - ಸಾಂಸ್ಕೃತಿಕ ಮನೋರಂಜನೆಯ ಜೊತೆಗೆ ವೈಶಿಷ್ಟ್ಯಪೂರ್ಣ ವಸ್ತು ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.ಭಾರೀ ಗಾತ್ರದ ಮೀನಿನಾಕಾರದ ಬಾಯಿಯ ಮೂಲಕ ವಸ್ತು ಪ್ರದರ್ಶನ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಳಗೆ ಕರಕುಶಲ ವಸ್ತುಗಳು, ಗ್ರಾಮೀಣ ಪ್ರದೇಶದಲ್ಲಿ ಇಂದು ಕಣ್ಮರೆಯಾಗುತ್ತಿರುವ ಪರಿಕರಗಳು, ವೈವಿಧ್ಯ ಬಗೆಯ ಮೀನು - ಪಕ್ಷಿಗಳ ಪ್ರದರ್ಶನ, ಮಡಕೆ, ಚರ್ಮವಾದ್ಯ ತಯಾರಿಕೆ, ಎಣ್ಣೆಗಾಣ, ಬುಟ್ಟಿ - ಗೊರಬು ತಯಾರಿಕೆ - ಕಮ್ಮಾರಿಕೆ ಪ್ರಾತ್ಯಕ್ಷಿಕೆ, ಯಕ್ಷಗಾನದ ಮುಖವಾಡಗಳು, ಮರದ ಕೆತ್ತನೆಯ ವಸ್ತುಗಳು, ಹಳೆಯ ಮನೆ - ಅಂಗಡಿ, ಆವೆ ಮಣ್ಣಿನ ಕಲಾಕೃತಿಗಳು ಗಮನ ಸಳೆಯುತ್ತಿವೆ, ಇಲ್ಲಿ ಸುತ್ತಾಡುವುದೇ ವಿಶೇಷ ಅನುಭವವನ್ನು ನೀಡುತ್ತದೆ.ಈ ವಸ್ತುಪ್ರದರ್ಶನವನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಉದ್ಘಾಟಿಸಿ, ಅಲ್ಲಿರುವ ವಸ್ತುಗಳನ್ನು ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿದರು.ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ವಸ್ತು ಪ್ರದರ್ಶನ ಸಂಚಾಲಕ ಯತೀಶ್ ಕಿದಿಯೂರು ಮುಂತಾದವರಿದ್ದರು.