ದುಗ್ಗಳ ಸದಾನಂದ

ಕನ್ನಡಪ್ರಭವಾರ್ತೆ ನಾಪೋಕ್ಲು

ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಹಾಕಿ ಪಂದ್ಯಾವಳಿಯಲ್ಲಿ ಭಾನುವಾರ ಕರೋಟಿರ ಮತ್ತು ನಾಯಕಂಡ ತಂಡಗಳ ನಡುವೆ ಸಮಬಲದ ಹೋರಾಟ ನಡೆಯಿತು. ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿದವು ನಂತರ ಟೈ ಬ್ರೇಕರ್‌ನಲ್ಲಿ ಕರೋಟಿರ ನಾಯಕಂಡ ವಿರುದ್ಧ 5-4 ಅಂತರದಿಂದ ಗೆಲವು ಸಾಧಿಸಿತು. ಮತ್ತೊಂದು ಪಂದ್ಯ ಮುಕ್ಕಾಟಿರ (ಮೂವತ್ತೊಕ್ಲು ) ಮತ್ತು ಮಾಚಂಡ ತಂಡಗಳ ನಡುವೆ ನಡೆಯಿತು. ಇಲ್ಲೂ ಸಮಬಲದ ಹೋರಾಟ ಕಂಡು ಬಂತು. ಎರಡೂ ತಂಡಗಳು ಯಾವುದೇ ಗೋಲುಗಳಿಸಲಿಲ್ಲ. ಬಳಿಕಟೈ ಬ್ರೇಕರ್ ನಲ್ಲಿ ಮುಕ್ಕಾಟಿರ 2-1 ಅಂತರದಿಂದ ಮಾಚಂಡ ಗೆಲವು ಸಾಧಿಸಿತು. ನಾಗಂಡ ಮತ್ತು ತೀತಿಮಾಡ ತಂಡಗಳ ನಡುವೆಯೂ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಟೈ ಬ್ರೇಕರ್ ನಲ್ಲಿ 2-0 ಅಂತರದಿಂದ ಗೆಲವು ಸಾಧಿಸಿತು.

ಉಳಿದಂತೆ ಚಂದುರ ಮಾಚಮಂಡ ವಿರುದ್ಧ 1-0 ಅಂತರದಿಂದ, ಅಪ್ಪನೆರವಂಡ ಚಿಂಡ ಮಾಡ ವಿರುದ್ಧ 3- 2 ಅಂತರದಿಂದ, ಮುಕ್ಕಾಟಿರ (ಪುಲಿಕೋಟು )ಶಾಂತೆಯಂಡ ವಿರುದ್ಧ 4-1ರಿಂದ, ಬಿದ್ದಾಟಂಡ ಮಲ್ಲಜ್ಜಿರ ವಿರುದ್ಧ 4-0ಯಿಂದ, ಮಣವಟ್ಟಿರ ಅಲ್ಲಪಂಡ ವಿರುದ್ಧ 3-1ರಿಂದ, ನಾಪಂಡ ಚೌರೀರ ವಿರುದ್ಧ 2-0ಯಿಂದ, ಮಳವಂಡ ಸೋಮೆಯಂಡ ವಿರುದ್ಧ 3-0 ಯಿಂದ, ನೆರವಂಡ ಮಾದೆಯಂಡ ವಿರುದ್ಧ 4-0 ಯಿಂದ ,ಮುಕ್ಕಾಟಿರ (ಹರಿಹರ ) ಐಚೆಟ್ಟಿರ ವಿರುದ್ಧ 2-0 ಯಿಂದ, ಬೊಟ್ಟೋಳಂಡ ಸುಳ್ಳಿ ಮಾಡ ವಿರುದ್ಧ 1-0ಯಿಂದ ಕೊಲ್ಲಿರ ಚೆಂಗಲಂಡ ವಿರುದ್ಧ 4-1 ರಿಂದ, ಅರಮನೆ ಮಾಡ ಉದ್ದಿನಡಂಡ ವಿರುದ್ಧ 1-0ಯಿಂದ, ನಂದೇಟಿರ ಪಾಲೆ ಕಂಡ ವಿರುದ್ಧ 1- 0 ಅಂತರದಿಂದ ಗೆಲವು ಸಾಧಿಸಿದವು. ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ ನಾಲ್ಕು ಪಂದ್ಯಾಟಗಳು ರದ್ದಾಗಿದ್ದು 21ಕ್ಕೆ ಮುಂದೂಡಲಾಗಿದೆ ಎಂದು ಕ್ರೀಡಾಕೂಟದ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ ತಿಳಿಸಿದ್ದಾರೆ.

ಇಂದಿನ ಪಂದ್ಯಗಳು:


ಮೈದಾನ -1ಕೈಬುಲಿರ v/s ಮಂಡೇಟಿರ ಬೆಳಗ್ಗೆ ಬೊಳ್ಳೇಪಂಡ v/s ಮಂದೆಯಡ ಮಚ್ಚಾರಂಡ v/s ನಾಳಿಯಂಡ ಮಂಡೇಪಂಡ v/s ಕಡೇಮಡ ತೀತಮಾಡ v/s ಕಾಡ್ಯಮಾಡಇಟ್ಟೀರ v/s ಐಚಂಡ ಕಾಯಪಂಡ v/s ಪಾಡೆಯಂಡ ಮೈದಾನ 2.ಚೆಪ್ಪುಡಿರ v/s ಚೀಯಕ್ ಪೂವಂಡ ಪುದಿಯೊಕ್ಕಡ v/s ಮರುವಂಡ ಪರದಂಡ v/s ನಂಬುಡುಮಾಡ ಐಚೆಟ್ಟೀರ v/s ಅಲೇಮಾಡ ಪಂದ್ಯಂಡ v/s ಕುಪ್ಪಂಡ (ನಾಂಗಾಲ)ಚೇಂದಂಡ v/s ಮುಕ್ಕಾಟಿರ (ಕಡಗದಾಳು)ನೆಲ್ಲಮಕ್ಕಡ v/s ಉದಿಯಂಡ ಮೈದಾನ 3.ಕೋಳೇರ v/sಮಾಚಿಮಂಡಮೇರಿಯಂಡ v/s ಮಂಡೇಟಿರ ಮುಕ್ಕಾಟಿರ (ಬೋಂದ) v/s ಕೊಂಗಂಡ ಪಟ್ಟಚೆರುವಾಳಂಡ v/s ಕುಂದೀರಕುಮ್ಮಂಡ v/s ಸಣ್ಣುವಂಡ ಚಿಮ್ಮಣಮಾಡ v/s ಮೂಕೊಂಡಕಾಂಗಂಡ v/s ಮೇಕೇರಿರ