ಇಂಡಿಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ತಾಲೂಕಿನ ಮಿರಗಿ ಗ್ರಾಮದ ಕಾಲೇಜು ವಿದ್ಯಾರ್ಥಿನಿಯರು 5 ಕಿಮೀ ಕಾಲ್ನಡಿಗೆ ಮೂಲಕ ಗ್ರಾಮ ತಲುಪಬೇಕಾದ ಅನಿವಾರ್ಯತೆ ಬಂದಿದೆ ಎಂದು ವಿದ್ಯಾರ್ಥಿನಿಯರು ಅಳಲು ತೊಡಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಇಂಡಿ
ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ತಾಲೂಕಿನ ಮಿರಗಿ ಗ್ರಾಮದ ಕಾಲೇಜು ವಿದ್ಯಾರ್ಥಿನಿಯರು 5 ಕಿಮೀ ಕಾಲ್ನಡಿಗೆ ಮೂಲಕ ಗ್ರಾಮ ತಲುಪಬೇಕಾದ ಅನಿವಾರ್ಯತೆ ಬಂದಿದೆ ಎಂದು ವಿದ್ಯಾರ್ಥಿನಿಯರು ಅಳಲು ತೊಡಿಕೊಂಡಿದ್ದಾರೆ.ಮಿರಗಿ ಗ್ರಾಮದಿಂದ ನಿತ್ಯ ವಿದ್ಯಾರ್ಥಿಗಳು 5 ಕಿಮೀ ದೂರದ ಗೋಳಸಾರ ಸರ್ಕಾರಿ ಪಿಯು ಕಾಲೇಜಿಗೆ ಹೋಗುತ್ತಾರೆ. ಬೆಳಗ್ಗೆ ಕಾಲೇಜಿಗೆ ಹೋಗಲು ಬಸ್ ಸೌಲಭ್ಯವಿದೆ. ಮಧ್ಯಾಹ್ನ ಕಾಲೇಜು ಮುಗಿದ ಮೇಲೆ ಗ್ರಾಮಕ್ಕೆ ಬಸ್ಸಿನ ಸೌಕರ್ಯ ಇಲ್ಲ. ಹೀಗಾಗಿ ಕಾಲ್ನಡಿಗೆ ಮೂಲಕ ಗ್ರಾಮ ತಲುಪುವಂತಾಗಿದೆ ಇಂಡಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 12.30ಕ್ಕೆ ಬಿಡುವ ಬಸ್ ಒಂದು ದಿನ ಬರುವುದು, ಇನ್ನೊಂದು ದಿನ ಬಾರದೇ ಇರುವುದು, ಬೇಕಾದ ಸಮಯಕ್ಕೆ ಬರುವುದರಿಂದ ವಿದ್ಯಾರ್ಥಿಗಳಿಗೆ ಕಾಲ್ನಡಿಗೆಯೇ ಅನಿವಾರ್ಯವಾಗಿದೆ. ಪ್ರತಿನಿತ್ಯ, ನಿಗದಿತ ಸಮಯಕ್ಕೆ ಬಸ್ ಓಡಿಸಲು ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕೂಡಲೇ ಮಿರಗಿ ಗ್ರಾಮಕ್ಕೆ ಮಧ್ಯಾಹ್ನ 12.30ರ ಇಂಡಿ ಬಸ್ ನಿಲ್ದಾಣದಿಂದ ಓಡುವ ಬಸ್ ನಿತ್ಯ ಸರಿಯಾದ ಸಮಯಕ್ಕೆ ಓಡಿಸಲು ಮನವಿ ಮಾಡಿದ್ದಾರೆ.