ಬಗೆಹರಿಯದ ಪ್ರಜಾಸೌಧ ನಿರ್ಮಾಣ ಜಾಗ ವಿವಾದ

| Published : Sep 01 2025, 01:03 AM IST

ಬಗೆಹರಿಯದ ಪ್ರಜಾಸೌಧ ನಿರ್ಮಾಣ ಜಾಗ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ಚೇಳೂರು ತಾಲೂಕು ಆಡಳಿತ ಕಚೇರಿ ನಿರ್ಮಾಣ ವಿಷಯದಲ್ಲಿ ಕೆಲವರು ಪಟ್ಟಣದ ಹೊರವಲಯದ ಪುಲ್ಲಗಲ್ಲು ಕ್ರಾಸ್ ಸಮೀಪ ಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಚೇಳೂರು ಕೇಂದ್ರ ಸ್ಥಾನದಲ್ಲೇ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ಈ ಕುರಿತು ಕೇಂದ್ರ ಸ್ಥಾನದಲ್ಲಿ ಸರ್ಕಾರದ ಜಾಗ ಇದ್ದಲ್ಲಿ ಪರಿಶೀಲಿಸಿ ಸ್ಥಳ ಗುರುತಿಸಿ ಈ ಕುರಿತು ಶಾಸಕರೊಂದಿಗೆ ಚರ್ಚಿಸಲಾಗುವುದು

ಕನ್ನಡಪ್ರಭ ವಾರ್ತೆ ಚೇಳೂರು ಕಂದಾಯ ಇಲಾಖೆಯ ಸಚಿವರು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದ್ದು ಇದರಿಂದ ಜನತೆ ದಾಖಲೆಗಳಿಗಾಗಿ ಅನಗತ್ಯವಾಗಿ ತಾಲೂಕು ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ ಬದಲಿಗೆ ಭೂ ಸುರಕ್ಷಾ ಆ್ಯಪ್ ಮೂಲಕ ಮೊಬೈಲ್ ಫೋನ್‌ನಲ್ಲಿಯೇ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ಹೇಳಿದರು.

ಚೇಳೂರು ಕೆಪಿಎಸ್ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತಿ ಇವರ ವತಿಯಿಂದ ಸಾರ್ವಜನಿಕ ಕುಂದುಕೊರತೆಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಲೂಕು ಕಚೇರಿ ಸ್ಥಳ ವಿವಾದ

ತಾಲೂಕು ಆಡಳಿತ ಕಚೇರಿ ನಿರ್ಮಾಣ ವಿಷಯದಲ್ಲಿ ಕೆಲವರು ಪಟ್ಟಣದ ಹೊರವಲಯದ ಪುಲ್ಲಗಲ್ಲು ಕ್ರಾಸ್ ಸಮೀಪ ಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನೂ ಕೆಲವರು ಚೇಳೂರು ಕೇಂದ್ರ ಸ್ಥಾನದಲ್ಲೇ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ಈ ಕುರಿತು ಕೇಂದ್ರ ಸ್ಥಾನದಲ್ಲಿ ಸರ್ಕಾರದ ಜಾಗ ಇದ್ದಲ್ಲಿ ಪರಿಶೀಲಿಸಿ ಸ್ಥಳ ಗುರುತಿಸಿ ಈ ಕುರಿತು ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.152 ಅರ್ಜಿ ಸಲ್ಲಿಕೆ

ಜನತಾ ದರ್ಶನದಲ್ಲಿ ಒಟ್ಟು 152 ಅರ್ಜಿಗಳನ್ನು ಸ್ವೀಕರಿಸಿದ್ದು, ಕಂದಾಯ 89, ಸಾರಿಗೆ 8, ಆ‌ರ್ ಡಿಪಿ 15, ಪೊಲೀಸ್ 3, ಸಿಡಿಪಿಒ 2,ಅಬಕಾರಿ 1 ಹಾಗೂ ಇತರೆ ನಿವೇಶನ, ಸಾಗುವಳಿ ಚೀಟಿ, ಸ್ಮಶಾನ, ಇತರೆ ಸವಲತ್ತುಗಳಿಗೆ ಮನವಿ ನೀಡಲಾಯಿತು. ಇದೆ ವೇಳೆ ಶಾಸಕ ಸುಬ್ಬಾರೆಡ್ಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ಜನನ ಪ್ರಮಾಣ ಪತ್ರ ವಿತರಿಸಿದರು. ಅಲ್ಲದೆ ವಿವಿಧ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳಿಗೆ 25 ಲಕ್ಷ ರು.ಗಳ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.ಸಮಯಕ್ಕೆ ಬಾರದ ಡಿಸಿ, ಶಾಸಕರು ಶಾಸಕರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10:30ಕ್ಕೆ ಕೆ ಪಿಪಿ ಎಸ್ ಶಾಲೆಯ ಆವರಣದಲ್ಲಿ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಮಧ್ಯಾಹ್ನ ೧೨ ಗಂಟೆಗೆ ಬಂದು ಕಾರ್ಯಕ್ರಮ ಉದ್ಘಾಟಿಸಿ ದೂರು ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದರು.

ವೇದಿಕೆಯಲ್ಲಿ, ತಾಪಂ ಇಒ ಜಿ.ವಿ. ರಮೇಶ್,

ಶಿರಸ್ತೇದಾ‌ರ್ ಎಸ್.ಎಲ್.ಸತೀಶ್, ಅಪರ ಜಿಲ್ಲಾಧಿಕಾರಿ ಡಾ. ಭಾಸ್ಕರ್,ಉಪವಿಭಾಗಧಿಕಾರಿ ಡಿ.ಹೆಚ್. ಅಶ್ವಿನ್, ಜಿಪಂ ಸಿಇಒ ಡಾ. ವೈ. ನವೀನ್‌ಭಟ್, , ಚೇಳೂರು ತಹಸೀಲ್ದಾರ್ ಶ್ವೇತ, ಸಮಾಜ ಕಲ್ಯಾಣ ಇಲಾಖೆಯ ಜಿ.ಸಿ. ಮಂಜುಳ, ಕಂದಾಯ ಅಧಿಕಾರಿ ಎಂ.ಎನ್. ಈಶ್ವರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಪಿ.ಆರ್. ಚಲಂ, ಗ್ರಾಂ ಪಂಚಾಯತಿ ಪಿಡಿಒ ಅಧಿಕಾರಿಗಳು ಹಾಜರಿದ್ದರು.