ಸುರಕ್ಷತವಲ್ಲದ 8 ಗೇಮ್‌ ಝೋನ್‌ ಬಂದ್‌

| Published : Jun 14 2024, 01:02 AM IST

ಸುರಕ್ಷತವಲ್ಲದ 8 ಗೇಮ್‌ ಝೋನ್‌ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದ ನಗರದ ಒಟ್ಟು ಎಂಟು ಗೇಮ್‌ ಝೋನ್‌ಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಬಿಎಂಪಿ ಸೂಚಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುನಗರದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದ ನಗರದ ಒಟ್ಟು ಎಂಟು ಗೇಮ್‌ ಝೋನ್‌ಗಳ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಬಿಬಿಎಂಪಿ ಸೂಚಿಸಿದೆ.

ಗುಜರಾತ್‌ನ ಮನರಂಜನಾ ಕೇಂದ್ರದಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗ ಹಾಗೂ ಅಗ್ನಿ ಶಾಮಕ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ನಗರದ ಗೇಮ್‌ ಝೋನ್‌ಗಳನ್ನು ಪರಿಶೀಲಿಸುತ್ತಿದೆ.

ಒಟ್ಟು 29 ಗೇಮ್‌ ಝೋನ್‌:ಬೆಂಗಳೂರಿನಲ್ಲಿ ಇರುವ ಒಟ್ಟು 29 ಗೇಮ್‌ ಝೋನ್‌ ಪರಿಶೀಲಿಸಿದ್ದು, ಈ ಪೈಕಿ ಎಂಟು ಗೇಮ್‌ ಝೋನ್‌ನಲ್ಲಿ ವಿದ್ಯುತ್‌ ದೀಪದ ವ್ಯವಸ್ಥೆ ಸರಿಯಾಗಿ ಇಲ್ಲ. ಸುರಕ್ಷತೆ ಕ್ರಮಗಳನ್ನು ಕೈಗೊಂಡಿಲ್ಲ. ಗೇಮ್‌ ಝೋನ್‌ಗೆ ಪ್ರತ್ಯೇಕವಾಗಿ ಅಗ್ನಿ ಶಾಮಕ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿಲ್ಲ. ಈ ಕಾರಣದಿಂದ 8 ಗೇಮ್‌ ಝೋನ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಯಲಹಂಕದಲ್ಲಿ 5 ಬಂದ್‌

ಯಲಹಂಕ ವಲಯದಲ್ಲಿ ಇರುವ ಆರು ಗೇಮ್‌ ಝೋನ್‌ಗಳ ಪೈಕಿ ಐದು ಗೇಮ್‌ ಝೋನ್‌ಗಳು ಅಗ್ನಿ ಶಾಮಕ ಇಲಾಖೆ, ಬೆಸ್ಕಾಂ ಹಾಗೂ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ಬಂದ್‌ ಮಾಡಲಾಗಿದೆ.

ಸೂಕ್ತ ಸುರಕ್ಷತಾ ಕ್ರಮಗಳ ಇಲ್ಲದಿರುವುದು ಮತ್ತು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದ ಕಾರಣಕ್ಕೆ ಬಂದ್‌ ಮಾಡಲಾಗಿದೆ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡ ಬಳಿಕ ಪುನರ್ ಆರಂಭಕ್ಕೆ ಅವಕಾಶ ನೀಡಲಾಗುವುದು.

-ಸುರಲ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಆರೋಗ್ಯ ವಿಭಾಗನಗರದ ಎಲ್ಲಿ ಎಷ್ಟು ಗೇಮ್‌ ಝೋನ್‌ವಲಯಗೇಮ್‌ ಝೋನ್‌ ಸಂಖ್ಯೆಬಂದ್ ಸಂಖ್ಯೆ

ದಕ್ಷಿಣ31ಪಶ್ಚಿಮ50

ಪೂರ್ವ51ಬೊಮ್ಮನಹಳ್ಳಿ30

ಮಹದೇವಪುರ40ಯಲಹಂಕ65

ಆರ್‌.ಆರ್‌.ನಗರ31ಒಟ್ಟು298ಬಂದ್‌ ಮಾಡಲಾದ ಗೇಮ್‌ ಝೋನ್ ವಿವರ

ಹೆಕ್ಸ್ ಎಂಟರ್‌ಟೈನ್‌ಮೆಂಟ್‌ ಕೋಲಮಂಗಲ, ಕೆಂಪ್‌ ಫೋರ್ಟ್‌ ಮಾಲ್‌ ಎಚ್‌ಎಎಲ್‌ ರಸ್ತೆ, ಯಶವಂತಪುರ ಮುಖ್ಯ ರಸ್ತೆಯ ವೈಷ್ಣವಿ ಮಾಲ್‌, ಯಲಹಂಕದ ಬಿಬಿ ರಸ್ತೆಯ ಫನ್‌ ಸಿಟಿ ಆರ್‌ಎಂಝಡ್‌, ಫನ್‌ ಸಿಟಿ ಮಾಲ್‌ ಆಫ್‌ ಏಷ್ಯಾ, ಥಣಿಸಂದ್ರದ ಎಲಿಮೆಂಟ್‌ ಮಾಲ್‌, ಫನ್‌ ಸಿಟಿ ಭಾರತೀಯ ಸಿಟಿ ಮಾಲ್‌ ಹಾಗೂ ಅಮೀಬಾ ಭಾರತೀಯ ಸಿಟಿ ಮಾಲ್‌. ಈ ಎಲ್‌ ಮಾಲ್‌ಗಳಲ್ಲಿ ಉದ್ದಿಮೆ ಪರವಾನಗಿ ಸೇರಿದಂತೆ, ಬೆಸ್ಕಾಂ, ಪೊಲೀಸ್‌ ಮತ್ತು ಅಗ್ನಿ ಶಾಮಕ ಇಲಾಖೆಗಳಿಂದ ಎನ್‌ಒಸಿ ಪಡೆದಿಲ್ಲ ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.