ಸಾರಾಂಶ
ಹನೂರು ಪಟ್ಟಣದ ಜೋಡಿ ಓವರ್ ಹೆಡ್ ಟ್ಯಾಂಕ್ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದೆ.
ಕನ್ನಡಪ್ರಭ ವಾರ್ತೆ ಹನೂರು
ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸುತ್ತ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹನೂರು ಪಟ್ಟಣದ ತಾಲೂಕು ದಂಡಾಧಿಕಾರಿಗಳ ಕಚೇರಿಗಳ ಸನಿಹದಲ್ಲೇ ಇರುವ ಜೋಡಿ ಓವರ್ ಹೆಡ್ ಟ್ಯಾಂಕ್ ಸುತ್ತಲೂ ಗಿಡಗಂಟಿಗಳು ಆಳೆತರಕ್ಕೆ ಬೆಳೆದು ನಿಂತಿದ್ದು, ಸುತ್ತಲೂ ಅನೈರ್ಮಲ್ಯ ವಾತಾವರಣದಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ.ಬಹುತೇಕ ವಾರ್ಡ್‌ಗಳಿಗೆ ಕುಡಿವ ನೀರು:
ಪಟ್ಟಣದ ಕೇಂದ್ರ ಸ್ಥಾನವಾದ ತಾಲೂಕು ದಂಡಾಧಿಕಾರಿ ಕಚೇರಿಗಳ ಸನಿಹದಲ್ಲಿರುವ ಓವರ್ ಹೆಡ್ ಜೋಡಿ ಟ್ಯಾಂಕ್ ಗಳಿಂದ ಪಟ್ಟಣದ ಪ್ರಮುಖ ಬಡಾವಣೆಗಳಿಗೆ ಕುಡಿವ ನೀರಿನ ಸರಬರಾಜು ಮಾಡಲಾಗುತ್ತಿದೆ. ಇದರಿಂದಾಗಿ ತಾಲೂಕು ದಂಡಾಧಿಕಾರಿಗಳ ಕಚೇರಿ ಸಮೀಪದಲ್ಲಿಯೇ ಅನೈರ್ಮಲ್ಯ ವಾತಾವರಣದಿಂದ ವಿವಿಧ ಕೆಲಸ ಕಾರ್ಯಗಳಿಗೆ ಬರುವ ನಾಗರಿಕರಿಗೂ ತೊಂದರೆ, ಜೊತೆಗೆ ಇಲ್ಲಿನ ಕಲುಷಿತ ವಾತಾವರಣದಲ್ಲಿ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಂಬಂಧಪಟ್ಟ ಪಟ್ಟಣ ಪಂಚಾಯಿತಿ ಅಧಿಕಾರಿ ಸಿಬ್ಬಂದಿ ವರ್ಗ ಗಮನ ಹರಿಸಿ ಕಲುಷಿತ ವಾತಾವರಣ ಇರುವುದನ್ನು ಶುಚಿತ್ವಗೊಳಿಸಿ ಪಟ್ಟಣದ ನಿವಾಸಿಗಳಿಗೆ ಶುದ್ಧ ನೀರು ಸರಬರಾಜು ಮಾಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.ಓವರ್ ಹೆಡ್ ಜೋಡಿ ಟ್ಯಾಂಕ್‌ಗಳ ಸುತ್ತಲೂ ಆಳೆತ್ತರದ ಗಿಡಗಂಟಿಗಳು ಬೆಳೆದು ನಿಂತಿದೆ. ಇಲ್ಲಿನ ಪಟ್ಟಣ ಪಂಚಾಯತಿ ಅಧಿಕಾರಿ ಸಿಬ್ಬಂದಿ ವರ್ಗದ ನಿರ್ಲಕ್ಷ್ಯತನದಿಂದ ಅಶುಚಿತ್ವ ವಾತಾವರಣದಲ್ಲಿ ನೀರು ಸರಬರಾಜು ಆಗುತ್ತಿದೆ. ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
-ಬಸವರಾಜ್, ಪಪಂ ಮಾಜಿ ಉಪಾಧ್ಯಕ್ಷ