ಹನೂರಿನಲ್ಲಿ ಅವೈಜ್ಞಾನಿಕ ಕಾಮಗಾರಿ; ಅಪಾರ ಪ್ರಮಾಣದ ನೀರು ಪೋಲು

| Published : Dec 12 2024, 12:30 AM IST

ಹನೂರಿನಲ್ಲಿ ಅವೈಜ್ಞಾನಿಕ ಕಾಮಗಾರಿ; ಅಪಾರ ಪ್ರಮಾಣದ ನೀರು ಪೋಲು
Share this Article
  • FB
  • TW
  • Linkdin
  • Email

ಸಾರಾಂಶ

ಹನೂರಿನಲ್ಲಿ ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿ ಎಡ ಮತ್ತು ಬಲದಂಡೆ ನಾಲೆಗಳನ್ನು ಆರು ದಿನಗಳ ಕಾಲ 35 ಲಕ್ಷದಲ್ಲಿ ಗಿಡಗಂಟಿಗಳು, ರಾಡಿ ಸ್ವಚ್ಛಗೊಳಿಸಿ ಜಲಾಶಯದಿಂದ ನೀರು ನಾಲೆಗೆ ಬಿಡಲಾಗಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಚಾನಲ್‌ಗಳ ಅವೈಜ್ಞಾನಿಕವಾಗಿ ಮಾಡಲಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ಹೋಗುವ ನೀರು ಪೋಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಅಪಾರ ಪ್ರಮಾಣದ ನೀರು ಗ್ರಾಮಗಳಲ್ಲಿ ಹರಿದು ಪೋಲಾಗುತ್ತಿದೆ.

ತಾಲೂಕಿನ ಗಡಿ ಗ್ರಾಮವಾದ ಹೂಗ್ಯಂ ಗ್ರಾಮ ಪಂಚಾಯಿತಿ ವತಿಯಿಂದ ಮನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿ ಎಡ ಮತ್ತು ಬಲದಂಡೆ ನಾಲೆಗಳನ್ನು ಆರು ದಿನಗಳ ಕಾಲ 35 ಲಕ್ಷದಲ್ಲಿ ಗಿಡಗಂಟಿಗಳು, ರಾಡಿ ಸ್ವಚ್ಛಗೊಳಿಸಿ ಜಲಾಶಯದಿಂದ ನೀರು ನಾಲೆಗೆ ಬಿಡಲಾಗಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಚಾನಲ್‌ಗಳ ಅವೈಜ್ಞಾನಿಕವಾಗಿ ಮಾಡಲಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ರೈತರ ಜಮೀನುಗಳಿಗೆ ಹೋಗುವ ನೀರು ಪೋಲಾಗುತ್ತಿದೆ.

ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿ ನಡೆದಿರುವ ಕಾಮಗಾರಿಯಲ್ಲಿ ನಾಲೆಗಳನ್ನು ಕಾಟಾಚಾರಕ್ಕೆ ಸ್ವಚ್ಛಗೊಳಿಸಿರುವುದರಿಂದ ಅಪಾರ ಪ್ರಮಾಣದ ನೀರು ರೈತರ ಜಮೀನು ತಲುಪದೆ ಮಾರ್ಗ ಮಧ್ಯದಲ್ಲಿ ಗ್ರಾಮಗಳ ಬಳಿ ಹರಿದು ಪೋಲಾಗುತ್ತಿದೆ ಜೊತೆಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಗಳನ್ನು ತಗ್ಗು ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ನೀರು ಸಮತೋಲನವಾಗಿ ಹರಿಯದೇ ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಪೋಲಾಗುತ್ತಿದೆ.

ಗ್ರಾಪಂ ವತಿಯಿಂದ 6 ದಿನದಲ್ಲಿ ₹35 ಲಕ್ಷ ವೆಚ್ಚದಲ್ಲಿ ಚಾನಲ್‌ಗಳಲ್ಲಿನ ಹೂಳು ತೆಗೆದು ಗಿಡಗಂಟಿಗಳನ್ನು ತೆರವುಗೊಳಿಸಿದ್ದಾರೆ. ಉಳಿದಂತ ಕಾಮಗಾರಿ ಮಾಡಲು ನಮ್ಮ ಗ್ರಾಪಂ ಅಲ್ಲಿ ಅವಕಾಶ ಇರುವುದಿಲ್ಲ. ಹೀಗಾಗಿ ಸಣ್ಣ ನೀರಾವರಿ ಇಲಾಖೆ ಇದರ ಬಗ್ಗೆ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.ಪುಷ್ಪಲತಾ, ಹೂಗ್ಯಂ ಗ್ರಾಪಂ ಅಭಿವೃದ್ಧಿ ಅಧಿಕಾರಿ.

ಗಡಿ ಗ್ರಾಮದ ಹೂಗ್ಯಂ ಜಲಾಶಯದ ನೀರಿನ್ನು ನೀರಾವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿ ಗಿಡಗಂಟಿ ರಾಡಿ ತೆಗೆದು ನೀರನ್ನು ನಾಲೆಗಳಲ್ಲಿ ಹರಿಸಲಾಗುತ್ತಿದೆ. ಆದರೆ ನಾಲೆಗಳ ಅವೈಜ್ಞಾನಿಕ ಕಾಮಗಾರಿಯಿಂದ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣವಾದ ನಾಲಾ ನೀರು ಹರಿದು ಪೋಲಾಗುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ನಡೆದಿರುವ ಕಾಮಗಾರಿ ಬಗ್ಗೆ ಸೂಕ್ತ ತನಿಖೆ ನಡೆಸಿ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. -ಅಮ್ಜದ್ ಖಾನ್, ಕರ್ನಾಟಕ ರಾಜ್ಯ ರೈತ ಸಂಘ, ಹನೂರು ತಾಲೂಕು ಅಧ್ಯಕ್ಷರು